ಕನಕಪುರಕ್ಕೆ ಮೆಡಿಕಲ್ ಕಾಲೇಜು ತರುವ ಶಕ್ತಿ ಇಲ್ವಾ, ಡಿಕೆ ಸಹೋದರರು ಅಷ್ಟೊಂದು ಅಸಹಾಯಕರಾ?-ಅಶ್ವತ್ಥ್‌ ನಾರಾಯಣ್

ರಾಮನಗರ, ಸೆಪ್ಟೆಂಬರ್‌ 07: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ಇಡೀ ದೇಶದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಮೋದಿ ಅವರ ಅಭಿವೃದ್ಧಿ ಸಾಧನೆಗಳನ್ನು ಪ್ರತಿ ಮನೆಗೂ ತಲುಪಿಸುವ ಕೆಲಸ ಆಗಲಿದೆ. ರಾಮನಗರ ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಕೈಗಾರಿಕೆ, ರೇಷ್ಮೆ, ಹೈನುಗಾರಿಕೆಗೆ‌ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥ್‌ ನಾರಾಯಣ್ ಹೇಳಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 9 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಾತನಾಡಿದ ಅವರು, ಕೆಂಗಲ್ ಹನುಂತಯ್ಯ ಹೆಸರಿನಲ್ಲಿ ರಾಜೀವ್ ಗಾಂಧಿ ಹೆಲ್ತ್ ವಿವಿ ನಿರ್ಮಾಣ ಆಗಲಿದೆ. 700 ಕೋಟಿ ರೂ ವೆಚ್ಚದಲ್ಲಿ ರಾಜೀವ್ ಗಾಂಧಿಗೆ ವಿವಿಗೆ ಭೂಮಿ ಪೂಜೆ ಮಾಡಲಾಗಿದೆ. ಶ್ರೀರಂಗ ಯೋಜನೆ ಸತ್ತೆಗಾಲ, ಕಾವೇರಿ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಬಂದ ನಂತರ ಹಲವು ಅಡೆ ತಡೆಗಳಾಗಿವೆ ಎಂದು ಹೇಳಿದರು.

Former Minister C. N. Ashwath Narayan Sarcasm Against D.K Brothers

ರಾಜೀವ್ ಗಾಂಧಿ ವಿವಿಯ ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಮಾಡುತ್ತಿದ್ದಾರೆ. ಕಳ್ಳತನದ ದಾರಿಯಲ್ಲಿ ಕನಕಪುರಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯ ಸಹೋದರರು ಮಾಡುತ್ತಿರುವ ಕೆಲಸಕ್ಕೆ ಕನಕಪುರದ ಜನರೇ ಒಪ್ಪುವುದಿಲ್ಲ. ಡಿ.ಕೆ ಶಿವಕುಮಾರ್ ಡಿಸಿಎಂ ಆಗಿದ್ದಾರೆ. ಹೀಗಿರುವಾಗ ಬೇಕಾದರೆ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗಲಿ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದನ್ನು ಜನ ಸಹಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ರಾಜೀವ್ ಗಾಂಧಿ ವಿವಿ ಸರ್ಕಾರದ್ದು ಅಲ್ಲ. ಅದೊಂದು ಸ್ವಾಯುತ್ತ ಸಂಸ್ಥೆ. ಈ ರೀತಿ ಮಾಡುವುದನ್ನು ಕನಕಪುರದ ಜನರು ಕೂಡ ಒಪ್ಪುತ್ತಿಲ್ಲ. ರಾಮನಗರ ಬಂದ್‌ಗೆ ನನ್ನ ಬೆಂಬಲ ಕೂಡ ಇದೆ. ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಡುವಂತಹ ಶಕ್ತಿ ಇಲ್ವ..? ಅಷ್ಟೊಂದು ಅಸಾಹಯಕರಾಗಿದ್ದಾರಾ ಡಿ.ಕೆ ಸಹೋದರರು..? ಎಂದು ವ್ಯಂಗ್ಯವಾಡಿದ್ದಾರೆ.

ಡಿ.ಕೆ ಶಿವಕುಮಾರ್ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗುವ ಬದಲು ಬೆಂಗಳೂರಿಗೆ ಬಂದಿದ್ದಾರೆ. ಜಿಲ್ಲೆಯಲ್ಲಿ ಏನು ಕೆಲಸ ಮಾಡಿದ್ದಾರೆ ಅಂತಾ ಹೇಳಬೇಕು ಅಲ್ವಾ. ಕನಕಪುರ ಅತ್ಯಂತ ಹಿಂದುಳಿದ ತಾಲೂಕು. ರಾಮನಗರ ಬಿಟ್ಟು ಯಾಕೆ ಬೆಂಗಳೂರಿಗೆ ಹೋಗಿದ್ದಾರೆ. ರಾಮನಗರ ಜನ ನಿಮಗೆ ಶಕ್ತಿ ನೀಡಿದ್ದಾರೆ ಅಲ್ವಾ ರಾಮನಗರ ಬಿಟ್ಟು ಒಡೋಗಿದ್ದೀರಾ..? ಎಂದು ಪ್ರಶ್ನಿಸಿದರು.

Former Minister C. N. Ashwath Narayan Sarcasm Against D.K Brothers

ರಾಮನಗರ ಶಾಸಕ ಬದುಕಿದ್ದಾನಾ ಎನ್ನುವ ಪ್ರಶ್ನೆ ಇದೆ. ರಾಮನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರೋದು ಕಾಣ್ತಾ ಇಲ್ವಾ..? ರಾಮನಗರ ಶಾಸಕ ಎಲ್ಲಿದ್ದಾನೆ ಹಿಡಿದುಕೊಂಡು ಬನ್ನಿ. ರಾಮನಗರಕ್ಕೆ ಅನ್ಯಾಯ ಆಗುತ್ತಿರುವುದು ಇರೋದು ರಾಮನಗರ ಶಾಸಕನಿಗೆ ಗೊತ್ತಾಗುತ್ತಿಲ್ಲವೇ..? ಎಂದು ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+