ಫೇಸ್‌ಬುಕ್, ವಾಟ್ಸ್‌ಆಪ್ ಚಕಮಕಿಯಿಂದ ಕೈ-ಕೈ ಮಿಲಾಯಿಸುವವರೆಗೆ

ರಾಮನಗರ, ಮಾರ್ಚ್ .14: ಫೇಸ್ ಬುಕ್ ಹಾಗೂ ವಾಟ್ಸಆಪ್‌ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಮಾಗಡಿಯಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಪುರಸಭೆ ಸದಸ್ಯರು ಕಿತ್ತಾಡಿಕೊಂಡಿರುವ ಘಟನೆ ನಿನ್ನೆ (ಮಾರ್ಚ್ 13) ರಾತ್ರಿ ನಡೆದಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಜೆಡಿಎಸ್ ನ ಎ.ಮಂಜುನಾಥ್ ರ ಪಕ್ಷಾಂತರ ಹಾಗೂ ಕೆಲವು ವಿಚಾರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರುವಾಗಿದೆ. ತಮ್ಮ ನಾಯಕರುಗಳ ಪರವಾಗಿ ಪೋಸ್ಟ್ ಮಾಡಿ ವಿರೋಧಿಗಳನ್ನ ಜರಿದಿದ್ದಾರೆ.

fight between two MLA candidates supports in Magadi

ಈ ವಿಚಾರವಾಗಿ ರಾತ್ರಿ ಮಾಗಡಿ ಪುರಸಭೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮಾತಿನ ಚಕಮಕಿ ನಡೆಸಿ ಕೈ-ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಬೆಂಬಲಿಗರಾದ ಪುರಸಭೆಯ ಮಾಜಿ ಅದ್ಯಕ್ಷ ಪುರುಷೋತ್ತಮ ಹಾಗೂ ಆತನ ಸಹವರ್ತಿಗಳು ಜೆಡಿಎಸ್ ನ ಬಾಲರಘು, ಜವರೇಗೌಡ, ಮುನಿರಾಜು ನಡೆವೆ ಜಗಳ ನಡೆದಿದೆ.

fight between two MLA candidates supports in Magadi

ಘಟನೆಯಲ್ಲಿ ಬಾಲರಘು, ಜವರೇಗೌಡ, ಮುನಿರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಎರಡೂ ಬಣದವರು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ರಾತ್ರಿ ಎರಡು ಗಂಟೆಯಿಂದ ಪೋಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+