ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ; ಧೋನಿ, ರೋಹಿತ್ ಹಿಂದಿಕ್ಕಿದ ಕಿಂಗ್

RCB Virat Kohli Record: ರಾಯ್‌ಪುರದಲ್ಲಿ ಬುಧವಾರ (ಮೇ 13) ನಡೆದ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ವಿರಾಟ್‌ ಅವರ ಸ್ಫೋಟಕ ಶತಕದ ನೆರವಿನಿಂದ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಮತ್ತೊಂದೆಡೆ ಈ ಪಂದ್ಯದ ಮೂಲಕ ಕಿಂಗ್ ಕೊಹ್ಲಿ ಐಪಿಎಲ್‌ ಇತಿಹಾಸದಲ್ಲಿ ಯಾರೂ ಮಾಡಿರದ ಐತಿಹಾಸಿಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ರಾಯ್‌ಪುರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಅವರು ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ತಲಾ 278 ಪಂದ್ಯಗಳೊಂದಿಗೆ ಸಮಬಲ ಸಾಧಿಸಿದ್ದರು. ಆದರೆ ಕೆಕೆಆರ್ ವಿರುದ್ಧದ ಪಂದ್ಯ ಕೊಹ್ಲಿ ಪಾಲಿಗೆ 279ನೇ ಐಪಿಎಲ್ ಪಂದ್ಯವಾಗಿದ್ದು, ಅವರು ಧೋನಿ ಮತ್ತು ರೋಹಿತ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

Virat Kohli Creates Historic IPL Record Becomes Highest Match Player in IPL History Know details

ಹೊಸ ದಾಖಲೆ ಮಾಡಿದ ಕೊಹ್ಲಿ

ವಿಶೇಷವೆಂದರೆ ವಿರಾಟ್ ಕೊಹ್ಲಿ ಐಪಿಎಲ್ ಆರಂಭವಾದ 2008ರಿಂದ ಈವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೇ ಎಲ್ಲಾ 279 ಪಂದ್ಯಗಳನ್ನು ಆಡಿದ್ದಾರೆ. ಒಂದೇ ಫ್ರಾಂಚೈಸಿ ಪರ ಇಷ್ಟು ದೀರ್ಘಕಾಲ ಆಡಿರುವುದು ಈ ದಾಖಲೆಯ ಮಹತ್ವವನ್ನು ಹೆಚ್ಚಿಸಿದೆ. ಇಷ್ಟೆಲ್ಲಾ ದಾಖಲೆ ಮಾಡಿರುವ ಕಿಂಗ್ ಕೊಹ್ಲಿ ಬಗ್ಗೆ ಮಾತನಾಡುತ್ತಿದ್ದವರಿಗೆ ನೆಟ್ಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಟ್ರೋಲಿಗರಿಗೆ ಅಭಿಮಾನಿಗಳ ತಿರುಗೇಟು

ಕೆಲವರು "ಕೊಹ್ಲಿ ಬಗ್ಗೆ ನಿಮಗೇನು ಗೊತ್ತು? ಅವರ ಹಿಸ್ಟರಿ ನೋಡಿ ಒಮ್ಮೆ.. ಸುಮ್ಮನೆ ಯಾರೋ ಹೇಳಿದ ಮಾತಿಗೆ ಕಿವಿಗೊಟ್ಟು ಬಕ್ರಗಳಾಗುವ ಬದಲಿಗೆ ನೀವೇ ಒಮ್ಮೆ ಅವರ ಆಟದ ವೈಖರಿ ಬಗ್ಗೆ ತಿಳಿದುಕೊಂಡು ಮಾತನಾಡಿ. ಅವರ ಬಗ್ಗೆ ಮಾತನಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡಬೇಕು," ಎಂದು ಹೇಳುವ ಮೂಲಕ ಟ್ರೋಲಿಗರಿಗೆ ಮುಟ್ಟಿನೋಡುವಕೊಳ್ಳುವ ಹಾಗೆ ತಿರುಗೇಟು ಕೊಟ್ಟಿದ್ದಾರೆ. ಇನ್ನೂ ಕೆಲವರು "ಅವರು ಮೈದಾನದಲ್ಲಿ ತೋರುವ ಶಿಸ್ತು, ನಿಷ್ಠೆಯನ್ನ ಎಷ್ಟೋ ಮಂದಿ ಯುವ ಪ್ರತಿಭೆಗಳು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ.. ಆದರೆ ಅವರ ಬಗ್ಗೆ ಗೊತ್ತಿಲ್ಲದವರು ಮಾತ್ರ ಕೆಟ್ಟದಾಗಿ ಮಾತನಾಡಲು ಸಾಧ್ಯ," ಎಂದು ತಿವಿದಿದ್ದಾರೆ.

ಹೆಚ್ಚು ಐಪಿಎಲ್‌ ಪಂದ್ಯಗಳನ್ನಾಡಿದವರ ಪಟ್ಟಿ

* ವಿರಾಟ್ ಕೊಹ್ಲಿ: 279

* ಎಂ.ಎಸ್. ಧೋನಿ: 278 ಪಂದ್ಯಗಳು

* ರೋಹಿತ್ ಶರ್ಮಾ: 278 ಪಂದ್ಯಗಳು

* ರವೀಂದ್ರ ಜಡೇಜಾ: 265 ಪಂದ್ಯಗಳು

* ದಿನೇಶ್ ಕಾರ್ತಿಕ್: 257 ಪಂದ್ಯಗಳು

2008ರಲ್ಲಿ ಹದಿಹರೆಯದ ಆಟಗಾರನಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರಿದ ವಿರಾಟ್ ಕೊಹ್ಲಿ ಇಂದು 37ನೇ ವಯಸ್ಸಿನಲ್ಲಿಯೂ ಅದೇ ಫಿಟ್ನೆಸ್ ಮತ್ತು ಉತ್ಸಾಹದೊಂದಿಗೆ ಆಡುತ್ತಿರುವುದು ಅವರ ವೃತ್ತಿಜೀವನದ ಶಿಸ್ತಿಗೆ ಸಾಕ್ಷಿಯಾಗಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಈ ಮೈಲಿಗಲ್ಲನ್ನು ತಲುಪುವ ಮೂಲಕ ಕೊಹ್ಲಿ ಕ್ರಿಕೆಟ್‌ ಲೋಲಕದ ಗಮನ ಸೆಳೆದಿದ್ದರು. ಒಟ್ಟಿನಲ್ಲಿ ಐಪಿಎಲ್‌ನ ರನ್ ಮೆಷಿನ್ ಕೊಹ್ಲಿ ಈಗ ಪಂದ್ಯಗಳ ಸಂಖ್ಯೆಯಲ್ಲೂ ಅಧಿಪತ್ಯ ಸ್ಥಾಪಿಸಿದ್ದಾರೆ.

ಮತ್ತೊಂದೆಡೆ ವಿರಾಟ್ ಕೊಹ್ಲಿ ಕೇವಲ ಪಂದ್ಯಗಳ ಸಂಖ್ಯೆಯಲ್ಲಿ ಮಾತ್ರವಲ್ಲದೆ ಐಪಿಎಲ್‌ನ ಬಹುತೇಕ ಎಲ್ಲಾ ಬ್ಯಾಟಿಂಗ್ ದಾಖಲೆಗಳಲ್ಲಿಯೂ ಸುಲ್ತಾನನಾಗಿ ಹೊರಹೊಮ್ಮಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 9,000 ರನ್‌ಗಳ ಗಡಿ ದಾಟಿದ ಮೊದಲ ಮತ್ತು ಏಕೈಕ ಆಟಗಾರ. 2008ರಿಂದ ಸತತ 19 ವರ್ಷಗಳ ಕಾಲ ಒಂದೇ ಫ್ರಾಂಚೈಸಿಗಾಗಿ ಆಡಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಇವರ ಹೆಸರಿನಲ್ಲಿ 9 ಶತಕಗಳ ದಾಖಲೆಗಳಿವೆ. ಅಲ್ಲದೆ 2016ರ ಒಂದೇ ಸೀಸನ್‌ನಲ್ಲಿ 973 ರನ್ ಗಳಿಸಿದ ಇವರ ಸಾಧನೆಯನ್ನು ಮುರಿಯಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. 37ನೇ ವಯಸ್ಸಿನಲ್ಲೂ ಮೈದಾನದಲ್ಲಿ ಇವರು ತೋರುವ ಚುರುಕುತನ ಮತ್ತು ಫಿಟ್ನೆಸ್ ಯುವ ಆಟಗಾರರಿಗೂ ಸವಾಲೆಸೆಯುವಂತಿದೆ. ಟ್ರೋಲಿಗರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುವ ಇವರು ತನ್ನ ಆಟ ಎಂಥಹದ್ದು ಎಂಬುದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಒಟ್ಟಿನಲ್ಲಿ ಇವರು ಈಗಿನ ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+