ಈ ದಿನ ಯಾರಿಗೆ ಆರ್ಥಿಕ ಲಾಭ? ಯಾರ ಖರ್ಚು ಹೆಚ್ಚಾಗುವುದು? ನೋಡಿ ಇಂದಿನ ರಾಶಿ ಭವಿಷ್ಯದಲ್ಲಿ
Horoscope May 14: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ಸಾಮಾನ್ಯವಾಗಿ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ. ಮೇ 14 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಇಂದು ಮಿಶ್ರ ಫಲಿತಾಂಶ ಸಿಗುವ ದಿನ. ಮನೆಯ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕಾಗುತ್ತದೆ. ನಿಮ್ಮ ಮಕ್ಕಳಿಂದಾಗಿ ಕೆಲವು ನಿರಾಶಾದಾಯಕ ಸುದ್ದಿಗಳನ್ನು ಕೇಳುವ ಸಾಧ್ಯತೆಯಿದೆ.

ವೃಷಭ ರಾಶಿ:
ಇಂದು ನೀವು ತುಂಬಾ ಉತ್ಸಾಹಭರಿತರಾಗಿರುವಿರಿ. ನಿಮ್ಮ ಕೌಶಲ್ಯದಿಂದ ಹಣವನ್ನು ಗಳಿಸುವುದು ಸಾಧ್ಯವಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಪಾಲುದಾರಿಕೆ ವ್ಯವಹಾರಗಳಿಂದ ಲಾಭ ಬರುತ್ತದೆ.
ಮಿಥುನ ರಾಶಿ:
ಹಳೆಯ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ಆಸ್ತಿಯನ್ನು ಖರೀದಿಸಲು ಇದು ಒಳ್ಳೆಯ ಸಮಯ.
ಕಟಕ ರಾಶಿ:
ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ವಿಯಾಗುವಿರಿ. ಕಚೇರಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಸಾಲ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು.
ಸಿಂಹ ರಾಶಿ:
ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಪ್ರೀತಿಪಾತ್ರರ ಸಹಾಯದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ವ್ಯವಹಾರಕ್ಕೆ ಸಂಬಂಧಿಸಿದ ಪ್ರವಾಸಗಳು ಇರುತ್ತವೆ. ನಿಮಗೆ ಇಷ್ಟವಾದ ಕೆಲಸ ಸಿಗುತ್ತದೆ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು.
ಕನ್ಯಾರಾಶಿ:
ಖರ್ಚು ಹೆಚ್ಚಾಗುವುದರಿಂದ ಸ್ವಲ್ಪ ಚಿಂತಿತರಾಗುವಿರಿ. ನಿಮ್ಮ ಸಂಗಾತಿಯ ಸಹಾಯದಿಂದ ಆಸ್ತಿ ಖರೀದಿಸಬಹುದು. ಕುಟುಂಬ ಸದಸ್ಯರೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ, ಅವುಗಳನ್ನು ಪರಿಹರಿಸಲು ಪ್ರಯತ್ನಿಸಿ.
ತುಲಾ ರಾಶಿ:
ನಿಮ್ಮ ಸಂಗಾತಿಯೊಂದಿಗೆ ಸಣ್ಣಪುಟ್ಟ ಜಗಳಗಳು ಉಂಟಾಗಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ರಾಜಕೀಯದಲ್ಲಿರುವವರಿಗೆ ಹೊಸ ಹುದ್ದೆಗಳು ಸಿಗುವ ಸಾಧ್ಯತೆಯಿದೆ. ಗೌರವ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ:
ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುವುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು. ಹೊಸ ವ್ಯಾಪಾರ ಆರಂಭಿಸಬಹುದು.
ಧನು ರಾಶಿ:
ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗುತ್ತವೆ. ಆಸ್ತಿ ವ್ಯವಹಾರಗಳು ಲಾಭವನ್ನು ತರುತ್ತವೆ. ಮಾನಸಿಕ ಶಾಂತಿ ಸಿಗುವುದು.
ಮಕರ ರಾಶಿ:
ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಹುಟ್ಟಿಕೊಳ್ಳುವುದು. ತಮ್ಮ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುವಿರಿ. ಹಳೆಯ ಜಗಳಗಳು ನಿವಾರಣೆಯಾಗುವುದು. ಪತಿ ಮತ್ತು ಪತ್ನಿಯ ನಡುವೆ ಸಣ್ಣಪುಟ್ಟ ಅಭಿಪ್ರಾಯ ವ್ಯತ್ಯಾಸಗಳ ಸಾಧ್ಯತೆ ಇದೆ.
ಕುಂಭ ರಾಶಿ:
ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಯಾರೊಂದಿಗೂ ಕಠೋರವಾಗಿ ಮಾತನಾಡಬೇಡಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ. ಬಡ್ತಿ ದೊರೆಯುವ ಸಾಧ್ಯತೆಯೂ ಇರುತ್ತದೆ. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕುವಿರಿ.
ಮೀನ ರಾಶಿ:
ಇಂದು ಲಾಭ ಗಳಿಸುವ ಸಾಧ್ಯತೆಯಿದೆ. ಸಹೋದರ ಸಹೋದರಿಯರಿಂದ ನಿಮಗೆ ಬೆಂಬಲ ಸಿಗುತ್ತದೆ. ಸ್ನೇಹಿತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರಬಹುದು. ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಫಲಿತಾಂಶ ಸಿಗುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications