ರಾಮನಗರ, ಚಿತ್ರದುರ್ಗ, ಚಿಕ್ಕಮಗಳೂರಿನ ಕೊರೊನಾ ವೈರಸ್ ಅಪ್ಡೇಟ್

ರಾಮನಗರ, ಜುಲೈ 20: ರಾಮನಗರದಲ್ಲಿ ಇಂದು ಒಂದೇ ದಿನ 67 ಕೊರೊನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಇಂದು ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

Recommended Video

      Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

      ಜಿಲ್ಲೆಯಲ್ಲೇ ಅತಿ ಹೆಚ್ಚು ಮಂದಿ ಸೋಂಕಿನಿಂದ ಮೃತರಾಗಿರುವ ಮಾಗಡಿ ತಾಲ್ಲೂಕಿನಲ್ಲಿ ಇಂದು 25 ವರ್ಷದ ಯುವಕನೂ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಮನಗರ ತಾಲ್ಲೂಕಿನ 63 ವರ್ಷದ ಮಹಿಳೆಯೂ ಸಾವನ್ನಪ್ಪಿದ್ದಾರೆ.

      ಚನ್ನಪಟ್ಟಣದಲ್ಲಿ- 27, ರಾಮನಗರದಲ್ಲಿ- 21, ಮಾಗಡಿಯಲ್ಲಿ- 11 ಮತ್ತು ಕನಕಪುರದಲ್ಲಿ- 8 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ಸೋಂಕಿತರನ್ನು ಜಿಲ್ಲಾ ಕೋವಿಡ್-19 ರೆಫರೆಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆಯಾಗಿದೆ.

      Coronavirus Cases On July 20 In Chitradurga Ramanagar And Chikkamagaluru District

      ಚಿತ್ರದುರ್ಗದಲ್ಲಿ 29 ಮಂದಿಗೆ ಸೋಂಕು; ಚಿತ್ರದುರ್ಗದಲ್ಲಿ ಇಂದು 29 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಜೊತೆಗೆ ಇಬ್ಬರು ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸೋಂಕಿತರ ಪೈಕಿ ಈಗಾಗಲೇ 117 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 125 ಸಕ್ರಿಯ ಪ್ರಕರಣಗಳು ಇವೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 60 ಕಂಟೈನ್ಮೆಂಟ್ ವಲಯಗಳಿವೆ. ಜೊತೆಗೆ 665 ಜನ ಹೋಂ ಕ್ವಾರಂಟೈನ್ ‍ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

      ಕಾಫಿನಾಡಿನಲ್ಲಿ ತ್ರಿಶತಕ ದಾಟಿದ ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 43 ಮಂದಿಗೆ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯ ಕೊಪ್ಪದಲ್ಲಿ 17, ಚಿಕ್ಕಮಗಳೂರಿನಲ್ಲಿ 12, ತರೀಕೆರೆ 5, ಕಡೂರು 4, ಶೃಂಗೇರಿ 3, ಎನ್.ಆರ್ ಪುರದಲ್ಲಿ 2 ಪ್ರಕರಣ ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 334ಕ್ಕೆ ಏರಿಕೆಯಾಗಿದೆ. 171 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇಲ್ಲಿವರೆಗೂ 9 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+