'ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು'

ರಾಮನಗರ, ಏಪ್ರಿಲ್ 09: ಈ ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಬಂಡವಾಳ ಶಾಹಿ ಹಿಡಿತದಲ್ಲಿವೆಯಂತೆ. ಯಾವ ಪಕ್ಷವೂ ಜನರ ಹಿತಕಾಯುತ್ತಿಲ್ಲವಂತೆ, ಎಲ್ಲಾ ಪಕ್ಷಗಳ ನಿಲುವು ಒಂದೇ ಅಂತೆ. ಹೀಗಂತ ಹೇಳುತ್ತಿರುವುದು ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ಮುಖಂಡರು ಇವರ ಪ್ರಕಾರ ಅವರಪಕ್ಷ ಹೊರತುಪಡಿಸಿದರೆ ಬೇರೆ ಯಾವ ಪಕ್ಷಕ್ಕೂ ಜನರ ಹಿತ ಬೇಕಾಗಿಲ್ಲವಂತೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗಾಗಲೇ ಪಕ್ಷದಿಂದ ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಅಭ್ಯರ್ಥಿಯಾಗಿ ಟಿ.ಸಿ.ರಮಾ ಎಂಬುವವರನ್ನು ಕಣಕ್ಕಿಳಿಸಲಾಗಿದ್ದು, ಅವರ ಪರ ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ಮಾತನಾಡಿದ್ದು, ಅವರೇನು ಹೇಳಿದ್ದಾರೆ ಎಂಬುದು ಇಲ್ಲಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ದೊಡ್ಡ ಬಂಡವಾಳಿಗರ ನಿಷ್ಠಾವಂತ ಪಕ್ಷಗಳಾಗಿದ್ದು, ಇವು ಒಂದೇ ನಾಣ್ಯದ ಎರಡು ಮುಖಗಳು. ಬಿಜೆಪಿ ಬಂಡವಾಳಶಾಹಿಗಳ ಪರವಿದ್ದು, ಜನವಿರೋಧಿ ಹಾಗೂ ಕೋಮುವಾದಿ ಆಡಳಿತಕ್ಕೆ ಕಾಂಗ್ರೆಸ್ ಪರ್ಯಾಯ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ದೇಶವನ್ನು ಐದು ದಶಕಗಳಿಗೂ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಇಂದಿನ ಪ್ರಮುಖ ಸಮಸ್ಯೆಗಳಿಗೆ ಕಾರಣವಾಗಿದೆ. ಬಂಡವಾಳ ಶಾಹಿಗಳನ್ನು ಪೋಷಿಸಿಕೊಂಡು ಬಂದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಿಲುವು ಒಂದೇ ಆಗಿದೆ.

Congress and the BJP are two faces of the same coin

ಉದ್ಯಮಿಗಳು ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ, ಸಾರ್ವಜನಿಕರ ಹಣವನ್ನು ದರೋಡೆ ಮಾಡಿ ದೇಶ ಬಿಟ್ಟು ಓಡಿ ಹೋದಾಗ ಸ್ವಘೋಷಿತ ಚೌಕೀದಾರ್ ಪ್ರಧಾನಿ ಹಾಗೂ ಅವರ ಸಹೊದ್ಯೋಗಿಗಳು ಏನು ಮಾಡುತ್ತಿದ್ದರು?

ಮೇಲಿಂದ ಮೇಲೆ ಪ್ರಶ್ನೆಗಳನ್ನು ಮಾಡಿರುವ ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ದೇಶದಲ್ಲಿ ಜನಹಿತ ಆಡಳಿತ ಬರಬೇಕಾದರೆ ತಮ್ಮ ಪಕ್ಷದಿಂದ ಮಾತ್ರ ಸಾಧ್ಯ ಎಂಬುದಾಗಿ ಹೇಳುತ್ತಿದ್ದಾರೆ. ಅದೇನೋ ಗೊತ್ತಿಲ್ಲ ಅವರ ಮಾತುಗಳಂತು ಕಿವಿಗೆ ಖುಷಿ ಕೊಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+