ರಾಮನಗರ ಬಿಜೆಪಿಗೆ ಮತ್ತೆ ಶಾಕ್ ಕೊಟ್ಟ ಪಲಾಯನ ಅಭ್ಯರ್ಥಿ ಚಂದ್ರಶೇಖರ್

Recommended Video

      Ramanagara By-elections 2018 : ರಾಮನಗರದಲ್ಲಿ ಮತ್ತೆ ಬಿಜೆಪಿಗೆ ಶಾಕ್ ಕೊಟ್ಟ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್

      ರಾಮನಗರ, ನವೆಂಬರ್ 03: ಮತದಾನಕ್ಕೆ ಎರಡು ದಿನ ಇದ್ದಾಗ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಭಾರಿ ಆಘಾತ ಕೊಟ್ಟ ಎಲ್‌.ಚಂದ್ರಶೇಖರ್ ಈಗ ಮತ್ತೊಂದು ಶಾಕ್ ಕೊಟ್ಟಿದ್ದಾರೆ.

      ದೀಪಾವಳಿ ವಿಶೇಷ ಪುರವಣಿ

      ತಮ್ಮ ಅಭ್ಯರ್ಥಿ ಕಾಂಗ್ರೆಸ್ ಸೇರಿದ್ದರೂ ಬಿಜೆಪಿ ಕಾರ್ಯಕರ್ತರು ಹೇಗೋ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಆದರೆ ಚಂದ್ರಶೇಖರ್ ಈಗ ನೀಡಿರುವ ಶಾಕ್‌ಗೆ ಸ್ವ ಪ್ರಚಾರವೂ ವ್ಯರ್ಥವಾಗಿದೆ.

      ಮತದಾನದಂದು ಮತಗಟ್ಟೆ ಒಳಗೆ ಕೂರುವ ಪಕ್ಷದ ಏಜೆಂಟ್‌ಗೆ ನೀಡಿದ್ದ ಮಾನ್ಯತೆಯನ್ನು ಚಂದ್ರಶೇಖರ್ ಅವರು ಹಿಂಪಡೆದುಕೊಂಡಿದ್ದಾರೆ. ಇದೀಗ ರಾಮನಗರದ ಯಾವ ಮತಗಟ್ಟೆಯಲ್ಲೂ ಬಿಜೆಪಿಯ ಬೂತ್‌ ಏಜೆಂಟ್‌ ಇಲ್ಲದಾಗಿದ್ದಾರೆ.

      By election 2018, Ramanagara BJP with draw candidate L chandrashekhar

      ಮತದಾನದ ದಿನ ಬೂತ್‌ ಏಜೆಂಟರುಗಳು ಮತಗಟ್ಟೆ ಒಳಗೆ ಇರುವುದು ಬಹು ಅವಶ್ಯಕ, ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಕಣ್ಣೀಡುವುದು, ಎಷ್ಟು ಮತಗಳಾಗಿವೆ ಎಂಬುದನ್ನು ತಮ್ಮ ಪಕ್ಷಕ್ಕಾಗಿ ಲೆಕ್ಕ ಇಡುವುದು, ಇತರೆ ಪಕ್ಷದ ಬೂತ್‌ ಏಜೆಂಟ್‌ಗಳು ಮತಗಟ್ಟೆ ಒಳಗೆ ಮತದಾರರ ಮೇಲೆ ಪ್ರಭಾವ ಬೀರದಂತೆ ತಡೆಯುವ ಕಾರ್ಯಗಳನ್ನು ಅವರು ಮಾಡುತ್ತಾರೆ.

      ಇದೀಗ ಯಾವ ಮತಗಟ್ಟೆಯಲ್ಲೂ ಬಿಜೆಪಿಯ ಬೂತ್‌ ಏಜೆಂಟ್ ಇಲ್ಲವಾದ ಕಾರಣ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಬೂತ್‌ ಏಜೆಂಟರುಗಳು ಮಾತ್ರವೇ ಮತಗಟ್ಟೆ ಒಳಗೆ ಇದ್ದಾರೆ. ಬೂತ್ ಒಳಗೆ ಹೋಗಲಾಗದ ಬಿಜೆಪಿ ಕಾರ್ಯಕರ್ತರು ಬೂತ್‌ ಹೊರಗೆ ನಿಂತು ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

      ಮತಗಟ್ಟೆಯಲ್ಲಿ ಬಿಜೆಪಿ ಏಜೆಂಟ್‌ಗಳಿಲ್ಲ

      ಮತಗಟ್ಟೆಯಲ್ಲಿ ಬಿಜೆಪಿ ಏಜೆಂಟ್‌ಗಳಿಲ್ಲ

      ಇದೀಗ ಯಾವ ಮತಗಟ್ಟೆಯಲ್ಲೂ ಬಿಜೆಪಿಯ ಬೂತ್‌ ಏಜೆಂಟ್ ಇಲ್ಲವಾದ ಕಾರಣ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಬೂತ್‌ ಏಜೆಂಟರುಗಳು ಮಾತ್ರವೇ ಮತಗಟ್ಟೆ ಒಳಗೆ ಇದ್ದಾರೆ. ಬೂತ್ ಒಳಗೆ ಹೋಗಲಾಗದ ಬಿಜೆಪಿ ಕಾರ್ಯಕರ್ತರು ಬೂತ್‌ ಹೊರಗೆ ನಿಂತು ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

      ಕೊನೆ ಕ್ಷಣದಲ್ಲಿ ಕೈಕೊಟ್ಟ ಚಂದ್ರಶೇಖರ್

      ಕೊನೆ ಕ್ಷಣದಲ್ಲಿ ಕೈಕೊಟ್ಟ ಚಂದ್ರಶೇಖರ್

      ಮತದಾನಕ್ಕೆ ಎರಡು ದಿನ ಇದ್ದಾಗ ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್‌ ಕಾಂಗ್ರೆಸ್ ಪಕ್ಷಕ್ಕೆ ಹಾರಿದರು. ಬಿಜೆಪಿಯು ತನ್ನ ಪರವಾಗಿ ನಿರ್ಲಕ್ಷ್ಯ ತೋರಿದೆ ಯಾವೊಬ್ಬ ಬಿಜೆಪಿ ಮುಖಂಡರೂ ಸಹ ತನ್ನ ಪರವಾಗಿ ಮತ ಯಾಚನೆಗೆ ಬರಲಿಲ್ಲ, ಬೇಕೆಂದೇ ನನ್ನನ್ನು ನಿರ್ಲಕ್ಷ್ಯಿಸಿದರು ಎಂದು ಅವರು ಆರೋಪಿಸಿದರು.

      ಆದರೂ ಬಿಜೆಪಿ ಪ್ರಚಾರ

      ಆದರೂ ಬಿಜೆಪಿ ಪ್ರಚಾರ

      ಅಭ್ಯರ್ಥಿ ಕೈಕೊಟ್ಟರು ಸಹ ರಾಮನಗರ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಪ್ರಚಾರ ನಿಲ್ಲಿಸಿರಲಿಲ್ಲ. ಹೊಸ ಕರಪತ್ರಗಳನ್ನು ಮುದ್ರಿಸಿ ಅಭ್ಯರ್ಥಿಗಲ್ಲದೇ ಇದ್ದರು ಬಿಜೆಪಿಗೆ ಮತ ನೀಡಿ ಎಂದು ಮನೆ-ಮನೆಗೆ ಹೋಗಿ ಬಿಜೆಪಿ ಪರ ಪ್ರಚಾರ ಮಾಡಿದರು. ಆದರೆ ಚಂದ್ರಶೇಖರ್ ಈಗ ನೀಡಿರುವ ಶಾಕ್‌ನಿಂದ ಪಕ್ಷಕ್ಕೆ ಮತ್ತೆ ಹೊಡೆತ ಬಿದ್ದಿದೆ.

      ಅನಿತಾ ಕುಮಾರಸ್ವಾಮಿಗೆ ಎದುರಾಳಿಯೇ ಇಲ್ಲ

      ಅನಿತಾ ಕುಮಾರಸ್ವಾಮಿಗೆ ಎದುರಾಳಿಯೇ ಇಲ್ಲ

      ಎದುರಾಳಿಗಳೇ ಇಲ್ಲದ ರಣಾಂಗಣದಲ್ಲಿ ಅನಿತಾ ಕುಮಾರಸ್ವಾಮಿ ಅವರ ಗೆಲುವು ಬಹುತೇಕ ನಿಶ್ಚಿತವೇ ಎನ್ನಲಾಗುತ್ತಿದೆ. ಬಿಜೆಪಿ ಇದ್ದರೂ ಸಹ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ಅನಿತಾ ಅವರ ಗೆಲುವು ಖಾಯಂ ಎನ್ನಲಾಗಿತ್ತು ಆದರೆ ಇದೀಗ ಎದುರಾಳಿಯೇ ಇಲ್ಲದ ಕಾರಣ ಅವರ ಗೆಲುವು ಪಕ್ಕಾ ಎನ್ನಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+