ನಿಮ್ಮ ಜನ್ಮರಾಶಿಯೇ ಹೇಳುತ್ತದೆ ನಿಮ್ಮ ಟ್ರಾವೆಲ್ ಸ್ಟೈಲ್! ಯಾವ ರಾಶಿಯವರಿಗೆ ಯಾವ ಪ್ರವಾಸ ಇಷ್ಟ?
ಪ್ರವಾಸ ಎನ್ನುವುದು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಲ್ಲ. ಕೆಲವರಿಗೆ ಅದು ಸಾಹಸ, ಕೆಲವರಿಗೆ ವಿಶ್ರಾಂತಿ, ಕೆಲವರಿಗೆ ಹೊಸ ಸಂಸ್ಕೃತಿಯನ್ನು ಅರಿಯುವ ಅವಕಾಶ, ಮತ್ತೊಬ್ಬರಿಗೆ ಕುಟುಂಬದೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆಯುವ ಸಮಯ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಜನ್ಮರಾಶಿಗೂ ತನ್ನದೇ ಆದ ಸ್ವಭಾವವಿರುವಂತೆ, ಅವರ ಪ್ರವಾಸದ ಅಭಿರುಚಿಯೂ ವಿಭಿನ್ನವಾಗಿರುತ್ತದೆ. ಯಾರಿಗೆ ಬೆಟ್ಟಗಳು ಇಷ್ಟ, ಯಾರಿಗೆ ಸಮುದ್ರತೀರ, ಯಾರಿಗೆ ಐಷಾರಾಮಿ ಪ್ರವಾಸ, ಯಾರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಅನುಭವ-ಇವೆಲ್ಲವೂ ರಾಶಿಯ ಗುಣಗಳಿಗೆ ಹೊಂದಿಕೆಯಾಗುತ್ತವೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
ಮೇಷ (Aries) - ಸಾಹಸವೇ ಮೊದಲ ಆದ್ಯತೆ
ಮೇಷ ರಾಶಿಯವರು ತುಂಬಾ ಉತ್ಸಾಹಿಗಳು. ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದು ಇವರಿಗೆ ಇಷ್ಟವಿಲ್ಲ. ಟ್ರೆಕ್ಕಿಂಗ್, ಕ್ಯಾಂಪಿಂಗ್, ಬೈಕ್ ರೈಡ್, ಬೆಟ್ಟ, ಕಾಡು, ಜಲಪಾತ, ಅಡ್ವೆಂಚರ್ ಸ್ಪೋರ್ಟ್ಸ್ ಇವರಿಗೆ ಇಷ್ಟ. ಸ್ನೇಹಿತರ ತಂಡದೊಂದಿಗೆ ಹೋಗಲು ಬಯಸುತ್ತಾರೆ. ಸಾಹಸಪ್ರಿಯ ಸಂಗಾತಿ ಬೇಕು. ಹೊಸ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಹೆಚ್ಚು ಫೋಟೋ ತೆಗೆದುಕೊಳ್ಳುವುದಕ್ಕಿಂತ ಅನುಭವಕ್ಕೆ ಆದ್ಯತೆ. ಸಾಹಸ ಚಟುವಟಿಕೆಗಳಿಗೆ ಹಣ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಆದರೆ ಅನಗತ್ಯ ಐಷಾರಾಮಕ್ಕೆ ಹೆಚ್ಚು ಖರ್ಚು ಮಾಡುವುದಿಲ್ಲ.

ವೃಷಭ (Taurus) - ಆರಾಮದಾಯಕ ಪ್ರವಾಸವೇ ಮೆಚ್ಚುಗೆ
ವೃಷಭ ರಾಶಿಯವರಿಗೆ ಆರಾಮ ಮತ್ತು ಉತ್ತಮ ಆಹಾರ ಬಹಳ ಮುಖ್ಯ. ರೆಸಾರ್ಟ್, ಹಿಲ್ ಸ್ಟೇಷನ್, ಪ್ರಕೃತಿ ಸೌಂದರ್ಯವಿರುವ ಸ್ಥಳಗಳು ಇವರಿಗೆ ಇಷ್ಟ. ಕುಟುಂಬ, ಜೀವನ ಸಂಗಾತಿ, ಜೊತೆ ಹೋಗಲು ಬಯಕೆ. ರುಚಿಕರ ಆಹಾರ ಸವಿಯುತ್ತಾರೆ. ನಿಧಾನವಾಗಿ ಸ್ಥಳಗಳನ್ನು ವೀಕ್ಷಿಸುತ್ತಾರೆ. ಒಳ್ಳೆಯ ಹೋಟೆಲ್, ಉತ್ತಮ ಊಟಕ್ಕೆ ಖರ್ಚು ಮಾಡಲು ಹಿಂದೆಮುಂದೆ ನೋಡುವುದಿಲ್ಲ.
ಮಿಥುನ (Gemini) - ಹೊಸ ಅನುಭವಗಳ ಹುಡುಕಾಟ
ಮಿಥುನ ರಾಶಿಯವರಿಗೆ ಹೊಸ ಜನ, ಹೊಸ ಜಾಗ, ಹೊಸ ಅನುಭವಗಳೇ ಹೆಚ್ಚು ಆಕರ್ಷಣೆ. ನಗರ ಪ್ರವಾಸ, ಸಾಂಸ್ಕೃತಿಕ ತಾಣಗಳು, ರಸ್ತೆ ಪ್ರಯಾಣ ಇವರಿಗೆ ಇಷ್ಟ. ಸ್ನೇಹಿತರು, ಹೆಚ್ಚು ಮಾತನಾಡುವ ಪ್ರವಾಸ ಸಂಗಾತಿಗಳೊಂದಿಗೆ ಹೋಗಲು ಬಯಸುತ್ತಾರೆ. ಸ್ಥಳೀಯರೊಂದಿಗೆ ಮಾತನಾಡುತ್ತಾರೆ. ಹೊಸ ಆಹಾರ, ಹೊಸ ಭಾಷೆ ಕಲಿಯಲು ಆಸಕ್ತಿ. ಶಾಪಿಂಗ್ ಹಾಗೂ ಹೊಸ ಅನುಭವಗಳಿಗೆ ಖರ್ಚು ಮಾಡುತ್ತಾರೆ.
ಕಟಕ (Cancer) - ಕುಟುಂಬದ ಜೊತೆಗಿನ ಪ್ರವಾಸವೇ ಸಂತೋಷ
ಭಾವನಾತ್ಮಕ ಸ್ವಭಾವದ ಕಟಕ ರಾಶಿಯವರಿಗೆ ಕುಟುಂಬವೇ ಮೊದಲ ಆದ್ಯತೆ. ಧಾರ್ಮಿಕ ಕ್ಷೇತ್ರಗಳು, ಕಡಲತೀರ, ಕುಟುಂಬ ಸ್ನೇಹಿ ತಾಣಗಳನ್ನು ಇಷ್ಟಪಡುತ್ತಾರೆ. ಕುಟುಂಬ ಹಾಗೂ ಆಪ್ತರ ಜತೆ ಹೋಗಲು ಇಷ್ಟ. ಸಮಯವನ್ನು ನೆನಪುಗಳನ್ನು ಸೃಷ್ಟಿಸುವುದು. ಫೋಟೋ, ವಿಡಿಯೋ ಮಾಡುವುದರಲ್ಲಿ ಕಳೆಯುತ್ತಾರೆ. ಕುಟುಂಬದ ಅನುಕೂಲಕ್ಕಾಗಿ ಖರ್ಚು ಮಾಡಲು ಸಿದ್ಧ.
ಸಿಂಹ (Leo) - ಐಷಾರಾಮಿ ಪ್ರವಾಸದ ಅಭಿಮಾನಿ
ಸಿಂಹ ರಾಶಿಯವರಿಗೆ ವಿಶೇಷ ಅನುಭವ ಬೇಕು. ಐಷಾರಾಮಿ ರೆಸಾರ್ಟ್, ವಿದೇಶ ಪ್ರವಾಸ, ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೆಚ್ಚಾಗಿ
ಜೀವನ ಸಂಗಾತಿ, ಆಪ್ತ ಸ್ನೇಹಿತರೊಂದಿಗೇ ಇವವರಿಗೆ ಪ್ರವಾಸ ಬೇಕು. ಉತ್ತಮ ಫೋಟೋಶೂಟ್, ವಿಶೇಷ ಅನುಭವಗಳ ಆನಂದ ಇವರಿಗೆ ಬೇಕು. ಬ್ರಾಂಡೆಡ್ ಹೋಟೆಲ್, ಉತ್ತಮ ಸೇವೆಗೆ ಹೆಚ್ಚು ವೆಚ್ಚ ಮಾಡುತ್ತಾರೆ.
ಕನ್ಯಾ (Virgo) - ಯೋಜಿತ ಪ್ರವಾಸ
ಕನ್ಯಾ ರಾಶಿಯವರು ಎಲ್ಲವನ್ನೂ ಮುಂಚಿತವಾಗಿ ಯೋಜಿಸುತ್ತಾರೆ. ಐತಿಹಾಸಿಕ ಸ್ಥಳಗಳು, ಪ್ರಕೃತಿ ತಾಣಗಳಿಗೆ ಹೋಗುತ್ತಾರೆ. ಶಿಸ್ತಿನ ಸ್ನೇಹಿತರು, ಕುಟುಂಬ ಇವರ ಜತೆ ಇರುತ್ತಾರೆ. ಮಾಹಿತಿ ತಿಳಿದುಕೊಳ್ಳುವುದು. ಸ್ಥಳವನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು ಇವರ ಶೈಲಿ. ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡುತ್ತಾರೆ.
ತುಲಾ (Libra) - ಸೌಂದರ್ಯದ ಹುಡುಕಾಟ
ಕಡಲತೀರ, ಸುಂದರ ನಗರಗಳು, ಕಲಾ ಮತ್ತು ಸಂಸ್ಕೃತಿ ತಾಣಗಳಿಗೆ ಹೋಗುತ್ತಾರೆ. ಜೀವನ ಸಂಗಾತಿ, ಸ್ನೇಹಿತರ ಜತೆ ಮುಂಗಾಲಿನಲ್ಲಿರುತ್ತಾರೆ. ಫೋಟೋಗ್ರಫಿ, ಕ್ಯಾಫೆಗಳಲ್ಲಿ ಸಮಯ ಕಳೆಯುವುದು ಮಾಡುತ್ತಾರೆ. ಅಲಂಕಾರ, ಶಾಪಿಂಗ್, ಉತ್ತಮ ಅನುಭವಗಳಿಗೆ ಖರ್ಚು ಮಾಡುವುದು ಶೈಲಿ.
ವೃಶ್ಚಿಕ (Scorpio) - ರಹಸ್ಯಮಯ ತಾಣಗಳತ್ತ ಆಕರ್ಷಣೆ
ಗುಹೆಗಳು, ಕಾಡು, ಕಡಿಮೆ ಜನಸಂದಣಿ ಇರುವ ಸ್ಥಳಗಳು ಇವರಿಗೆ ಇಷ್ಟ. ಕೆಲವೇ ಆಪ್ತರ ಜತೆ ಹೋಗಲು ಬಯಸುತ್ತಾರೆ. ಪ್ರಕೃತಿಯಲ್ಲಿ ಏಕಾಂತ. ಸ್ಥಳದ ಇತಿಹಾಸ ಅರಿಯುವುದು ಇವರ ಶೈಲಿ. ಖರ್ಚು ಮಾಡುವುದು ಅಗತ್ಯಕ್ಕೆ ಮಾತ್ರ.
ಧನು (Sagittarius) - ಹುಟ್ಟಿನಿಂದಲೇ ಪ್ರವಾಸಿಗ
ಧನು ರಾಶಿಯವರಿಗೆ ಪ್ರಯಾಣವೇ ಜೀವನ. ವಿದೇಶ ಪ್ರವಾಸ, ಬ್ಯಾಕ್‌ಪ್ಯಾಕಿಂಗ್, ರಸ್ತೆ ಪ್ರಯಾಣಕ್ಕೆ ಸದಾ ಮುಂದು. ಜತೆಗೆ ಯಾರಾದರೂ ಸರಿ, ಇಲ್ಲದಿದ್ದರೆ ಒಬ್ಬರೇ ಹೋಗುತ್ತಾರೆ. ಹೊಸ ಅನುಭವಗಳ ಸಂಗ್ರಹ. ಸ್ಥಳೀಯ ಸಂಸ್ಕೃತಿ ಅರಿಯುವುದರಲ್ಲಿ ಸಮಯ ವ್ಯಯಿಸುತ್ತಾರೆ. ಅನುಭವಗಳಿಗೆ ಹೆಚ್ಚು, ಐಷಾರಾಮಕ್ಕೆ ಕಡಿಮೆ ಖರ್ಚು ಮಾಡುತ್ತಾರೆ.
ಮಕರ (Capricorn) - ಉದ್ದೇಶಪೂರ್ವಕ ಪ್ರವಾಸ
ಐತಿಹಾಸಿಕ ಸ್ಥಳಗಳು, ಪರ್ವತ ಪ್ರದೇಶಗಳ ಕಡೆಗ ಹೋಗುತ್ತಾರೆ. ಕುಟುಂಬ, ನಂಬಿಗಸ್ತ ಸ್ನೇಹಿತರು ಜತೆಯಲ್ಲಿ ಇವರಿಗೆ ಬೇಕು. ಸಮಯವನ್ನು ಶಾಂತವಾಗಿ ಸ್ಥಳ ವೀಕ್ಷಣೆಯಲ್ಲಿ ಕಳೆಯುತ್ತಾರೆ. ಲೆಕ್ಕಾಚಾರದಿಂದ ಖರ್ಚು ಮಾಡುತ್ತಾರೆ.
ಕುಂಭ (Aquarius) - ವಿಭಿನ್ನ ಅನುಭವಗಳ ಹುಡುಕಾಟ
ಹೊಸ, ಅಪರೂಪದ ತಾಣಗಳನ್ನು ಹುಡುಕಿ ಹೋಗುತ್ತಾರೆ. ಪರಿಸರ ಸ್ನೇಹಿ ಪ್ರವಾಸ ಮಾಡುತ್ತಾರೆ. ಸಮಾನ ಮನಸ್ಕ ಸ್ನೇಹಿತರು ಇವರಿಗೆ ಜೊತೆಗೆ ಬೇಕು. ಸಮಯವನ್ನು ಸ್ಥಳೀಯರೊಂದಿಗೆ ಬೆರೆಯುವುದು, ಹೊಸ ವಿಚಾರಗಳನ್ನು ಕಲಿಯುವುದರಲ್ಲಿ ಕಳೆಯುತ್ತಾರೆ. ಖರ್ಚು ಮಾಡುವುದು ಅನುಭವ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ.
ಮೀನ (Pisces) - ಕನಸಿನ ಲೋಕದ ಪ್ರವಾಸ
ಮೀನ ರಾಶಿಯವರು ಶಾಂತಿ ಹುಡುಕುವವರು. ಸಮುದ್ರ ತೀರ, ನದಿ ತೀರ, ಆಧ್ಯಾತ್ಮಿಕ ತಾಣಗಳನ್ನು ಹುಡುಕಿ ತೆರಳುತ್ತಾರೆ. ಜತೆಯಲ್ಲಿ ಜೀವನ ಸಂಗಾತಿ, ಅತ್ಯಂತ ಆತ್ಮೀಯರು ಇದ್ದರೆ ಸಂತೋಷ. ಸಮಯವನ್ನು ಧ್ಯಾನ, ಸಂಗೀತ, ಪ್ರಕೃತಿಯ ಸೌಂದರ್ಯ ಸವಿಯುವುದರಲ್ಲಿ ತೊಡಗಿಸುತ್ತಾರೆ. ಮನಸ್ಸಿಗೆ ಸಂತೋಷ ಕೊಡುವ ಅನುಭವಗಳಿಗೆ ಉದಾರವಾಗಿ ಖರ್ಚು ಮಾಡಲು ಹಿಂಜರಿಯುವುದಿಲ್ಲ.
ಬರಹ: ಭವಾನಿ ಭಟ್













Click it and Unblock the Notifications