Bengaluru Street Vendors: ನಗರದ ಬೀದಿ ವ್ಯಾಪಾರಿಗಳ ತೆರವು: ಕನ್ನಡಿಗರಿಂದ ಹೊಸ ಡಿಮ್ಯಾಂಡ್‌, ಸೋಶಿಯಲ್ ಮೀಡಿಯಾ ಚರ್ಚೆ

Bengaluru Street Vendors: ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗವನ್ನು ಕೊಡಬೇಕು, ಏಕಾಏಕಿ ಬೀದಿ ಬದಿ ವ್ಯಾಪಾರಿಗಳ ಒತ್ತುವರಿ ತೆರವು ಮಾಡಬಾರದು ಎಂದು ಹಲವರು ಆಗ್ರಹಿಸಿದ್ದಾರೆ. ಕನ್ನಡಿಗರಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರ ಮಾಡುವವರು ಬೀದಿಬದಿ ವ್ಯಾಪಾರ ಮಾಡುವ ಅವಶ್ಯಕತೆ ಇಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬೀದಿಬದಿ ವ್ಯಾಪಾರ ಮಾಡುವವರಿಗೆ ಪ್ರತ್ಯೇಕವಾದ ಜಾಗವನ್ನು ಕೊಡಬೇಕು ಎನ್ನುವ ಬಗ್ಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಯೋಚನೆ ಮೊದಲೇ ಇರಬೇಕಿತ್ತಲ್ಲವಾ. ಕೆಟ್ಟಮೇಲೆ ಬುದ್ಧಿ ಬಂದಂತಾಗಿದೆ. ಅನೇಕ ಬಡವರು ಬೀದಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದರು ಅವರ ಬಾಯಿಗೆ ಏಕಾಏಕಿ ಮಣ್ಣು ಹಾಕಿಬಿಟ್ಟಿದ್ದಾರೆ, ಇದು ಸರಿಯಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.

Oneindia Kannada ಫೇಸ್‌ಬುಕ್‌ನಲ್ಲಿ ಕೇಳಲಾಗಿದ್ದ ಜನಾಭಿಪ್ರಾಯಕ್ಕೆ ಸಾರ್ವಜನಿಕರು ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸರ್ಕಾರ ಪ್ರತ್ಯೇಕ ಜಾಗ ಕೊಡಬೇಕೆ?" ಎನ್ನುವ ಪ್ರಶ್ನೆಗೆ ಸಾರ್ವಜನಿಕರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದೀಪಕ್ ಯಾದಣ್ಣನವರ್ ಎನ್ ಎನ್ನುವವರು, ಬೇರೆ ಜಾಗ ನೀಡಿ, ಆದು ರಸ್ತೆಗೆ ಹೊಂದಿಕೊಂಡು. ಸಂಚಾರಕ್ಕೆ, ಪಾದಾಚಾರಿಗಳಿಗೆ ಸ್ಥಳ ಅಡ್ಡಿ ಯಾಗಬಾರದು ಎಂದಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಅಕ್ರಮವಾಗಿ ಪುಟ್ ಬಾತ್ ಒತ್ತುವರಿ ಮಾಡುವವರಿಗೆ ಸಹಾಯ ಮಾಡಬಾರದು. ಸಾರ್ವಜನಿಕರ ಪ್ರಾಣ ಮುಖ್ಯ ಎಂದೂ ಕೆಲವರು ಹೇಳಿದ್ದಾರೆ.

Bengaluru Street Vendors

ಕನ್ನಡಿಗರಿಗೆ ಮಾತ್ರ ಕೊಡಿ

ಇನ್ನು ಬಹಳಷ್ಟು ಜನರು ಕನ್ನಡಿಗರಿಗೆ ಬೀದಿಬದಿ ವ್ಯಾಪಾರ ಮಾಡುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ಬೀದಿಬದಿ ವ್ಯಾಪಾರಿಗಳ ಹಿತ ಕಾಪಾಡಬೇಕು ಅವರಿಗೆ ಪ್ರತ್ಯೇಕ ಜಾಗ ನೀಡಬೇಕು. ಅವರೆಲ್ಲರಿಗೂ ಗುರುತಿನ ಚೀಟಿ ನೀಡಬೇಕು ಅದರಲ್ಲೂ ಸ್ಥಳೀಯ ನಿವಾಸಿಗಳಿಗೆ ಮಾತ್ರ ಅವಕಾಶ ನೀಡಬೇಕು ಬೇರೆ ಜಿಲ್ಲೆಯಿಂದ ಬೇರೆ ರಾಜ್ಯದಿಂದ ಬಂದು ವ್ಯಾಪಾರ ಮಾಡುವವರಿಗೆ ಅವಕಾಶ ನೀಡಿದರೆ ಸ್ಥಳೀಯರು ಅನಾಥರಾಗುತ್ತಾರೆ. ಆದ್ದರಿಂದ ಬೇರೆ ಜಿಲ್ಲೆ ಬೇರೆ ರಾಜ್ಯದವರೆಗೆ ಅವರವರ ರಾಜ್ಯಕ್ಕೆ ಹೋಗಿ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿ ಎಂದು ಮೋಹನ್ ಎನ್ನುವವರು ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ

* ಪೂರ್ವ ನಗರ ಪಾಲಿಕೆ: 13.25 ಕಿ.ಮೀ
* ಕೇಂದ್ರ ನಗರ ಪಾಲಿಕೆ: 16.35 ಕಿ.ಮೀ
* ಉತ್ತರ ನಗರ ಪಾಲಿಕೆ: 12.85 ಕಿ.ಮೀ
* ದಕ್ಷಿಣ ನಗರ ಪಾಲಿಕೆ: 11.00 ಕಿ.ಮೀ
* ಪಶ್ಚಿಮ ನಗರ ಪಾಲಿಕೆ: 23.10 ಕಿ.ಮೀ

ಒಟ್ಟು: 76.55 ಕಿ.ಮೀ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.

ಮೂರು ದಿನಗಳಲ್ಲಿ ಒತ್ತುವರಿ ತೆರವುಗೊಳಿಸಿದ ಒಟ್ಟು ರಸ್ತೆ ಉದ್ದ:

* ಜುಲೈ 1: 76.55 ಕಿ.ಮೀ
* ಜುಲೈ 2: 64.55 ಕಿ.ಮೀ
* ಜುಲೈ 3: 61.60 ಕಿ.ಮೀ

ಒಟ್ಟಾರೆ ಕಳೆದ ಮೂರು ದಿನಗಳಲ್ಲಿ 202.7 ಕಿ.ಮೀ ಉದ್ದದ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+