Gold Prices: ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್: ವಾರದ ಏರಿಕೆ ಬಳಿಕ ಬೆಲೆ ಸ್ಥಿರ, ಇಂದಿನ ಅಪ್ಡೇಟ್ಸ್

ಬೆಂಗಳೂರು: ಕಳೆದೊಂದು ವಾರದಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆಯ ವಾರಾಂತ್ಯಕ್ಕೆ ಇಳಿಕೆ ಆಗಿದೆ. ಚಿನ್ನ-ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ಇಂದು ಭಾನುವಾರ ದರದಲ್ಲಿ ಯಥಾ ಸ್ಥಿತಿ ಇದೆ. ಜಾಗತಿಕ ಅನಿಶ್ಚಿತತೆ, ಅಂತ್ಯಗೊಳ್ಳದ ಯುದ್ಧ ಪರಿಸ್ಥಿತಿ ಜೊತೆಗೆ ನಿರಂತರ ಬದಲಾವಣೆಗಳಿಂದಾಗಿ ಚಿನ್ನದ ಬೇಡಿಕೆ ಕುಸಿದಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ನಿರಂತರ ಕುಸಿತ ಕಾಣುತ್ತಿದ್ದು, ಬೆಳ್ಳಿ ದರ ಕೊಂಚ ಬದಲಾವಣೆ ಆಗಾಗ ಸ್ಥಿರತೆ ದಾಖಲಿಸುತ್ತಿದೆ.

ಇಂದು ಭಾನುವಾರ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 13, 450 ರೂಪಾಯಿ ಹಾಗೂ 24ಕ್ಯಾರಟ್ ಒಂದು ಗ್ರಾಂಗೆ 14,673 ರೂಪಾಯಿ ದಾಖಲಾಗಿದೆ. ಇಂದಿನ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗದೇ ಸ್ಥಿರವಗಿದೆ. ಬೆಳ್ಳಿಯ 100 ಗ್ರಾಂ ಬೆಲೆಯು 2500 ರೂಪಾಯಿ ಇದೆ.

Gold Prices

ಚಿನ್ನದ ಬೆಲೆ ಕುಸಿತಕ್ಕೆ ಕಾಯುತ್ತಿರುವ ಗ್ರಾಹಕರು

24 ಗ್ರಾಂ ಬಂಗಾರದ ದರವು 1,46,730 ರೂಪಾಯಿ, 22 ಗ್ರಾಂ ಚಿನ್ನದ ಬೆಲೆ 1,34,500 ರೂಪಾಯಿಗೆ ಸ್ಥಿರವಾಗಿದೆ. ಮುಂದಿನ ಒಂದು ವಾರದಲ್ಲಿ ಈ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಳಿತ ಕಾಣುವ ಸಾಧ್ಯತೆ ಇದೆ. ಗ್ರಾಹಕರು ದರ ಇನ್ನಷ್ಟು ಇಳಿಕೆ ಆದರೆ ಖರೀದಿಸಬೇಕೆಂಬ ವಿಚಾರದಲ್ಲಿದ್ದಂತಿದೆ. ದರ ಕುಸಿತಕ್ಕೆ ಕಾಯುತ್ತಿದ್ದಾರೆ.

Gold Price: 3 ದಿನಗಳ ಕುಸಿತಕ್ಕೆ ಬ್ರೇಕ್! ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿಯಲ್ಲೂ ಭಾರೀ ಜಿಗಿತ
Gold Price: 3 ದಿನಗಳ ಕುಸಿತಕ್ಕೆ ಬ್ರೇಕ್! ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿಯಲ್ಲೂ ಭಾರೀ ಜಿಗಿತ

ಬೆಳ್ಳಿ ದರ ನಿರಂತರ ಇಳಿಕೆ

ಇನ್ನೂ ಕೈಗಾರಿಕೆಗೆ ಸಂಬಂಧಿಸಿದಂತೆ ಹೆಚ್ಚು ಬಳಕೆಗಾಗಿ ಬೆಳ್ಳಿ ದರದಲ್ಲಿ ಯಥಾ ಸ್ಥಿತಿ ಇದೆ. ಒಂದು ಕೆಜಿ ಬೆಳ್ಳಿಗೆ ಇಂದು ಭಾನುವಾರ 2,50,000 ರೂಪಾಯಿ ಇತ್ತು. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಇದೇ ಬೆಳ್ಳಿ ದರ ಗರಿಷ್ಠ 4,20,000 ರೂಪಾಯಿಗೆ ಏರಿತ್ತು. ಇದೀಗ ನಿರಂತರವಾಗಿ ಇಳಿಕೆಯಾಗುತ್ತಿದೆ.

ಜೂನ್ 30ರಿಂದ ಆರು ದಿನಗಳಲ್ಲಿ ಚಿನ್ನದ ಬೆಲೆ ಮೂರು ಬಾರಿ ಏರಿಕೆ ಕಂಡಿದ್ದು, ಎರಡು ಬಾರಿ ಇಳಿಕೆ ಆಗಿದೆ. ದರ ಹೆಚ್ಚಳದ ಪ್ರಮಾಣ ಏರಿಕೆ ಆಗಿದೆ. ತಕ್ಕ ಮಟ್ಟಿನ ಇಳಿಕೆ ಆಗಿದೆ. ಇದೇ ಅವಧಿಯಲ್ಲಿ ಬೆಳ್ಳಿ ಒಂದು ಸಾರಿ 5000 ರೂಪಾಯಿ ಏರಿಕೆ ಆಗಿದ್ದು ಬಿಟ್ಟರೆ, ನಿರಂತರವಾಗಿ ತಲಾ 5,000 ರೂ.ನಂತೆ ಮೂರು ದಿನ 15,000 ರೂ. ಕುಸಿತ ಕಂಡಿದೆ.

ನಗರವಾರು ಇಂದಿನ 22k ಚಿನ್ನದ ಬೆಲೆ ಮಾಹಿತಿ

ಚೆನ್ನೈ: 13,700 ರೂಪಾಯಿ

ಮುಂಬೈ: 13,450 ರೂಪಾಯಿ

ದೆಹಲಿ: 13, 465 ರೂಪಾಯಿ

ಕೊಲ್ಕತ್ತ; 13,450 ರೂಪಾಯಿ

ಬೆಂಗಳೂರು:13,450 ರೂಪಾಯಿ

ಹೈದರಾಬಾದ್:13,450 ರೂಪಾಯಿ

ಕೇರಳ:13,450 ರೂಪಾಯಿ

ಪುಣೆ:13,450 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+