ಶತಕೋಟಿ ಆಸ್ತಿ ಒಡತಿ ಅನಿತಾ ಕುಮಾರಸ್ವಾಮಿ ಎದುರಾಳಿಯ ಆಸ್ತಿ ಎಷ್ಟು?

ರಾಮನಗರ, ಅಕ್ಟೋಬರ್ 16: ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರ ಎದುರು ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯು ತಮ್ಮ ಆಸ್ತಿ ವಿವರ ಸಲ್ಲಿಸಿದ್ದು ಎದುರಾಳಿಗೆ ಹೋಲಿಸಿದರೆ ಆಸ್ತಿಯಲ್ಲಿ ಇವರು ಕುಬ್ಜರು. ಹಾಗೆಂದು ಬಡವರೆಂದಲ್ಲ ಅವರೂ ಸಹ ಕೋಟ್ಯಧಿಪತಿಯೇ.

ರಾಮನಗರ ಉಪಚುನಾವಣೆಗೆ ಬಿಜೆಪಿಯಿಂದ ಎಲ್‌.ಚಂದ್ರಶೇಖರ್ ಅವರು ಸ್ಪರ್ಧಿಸುತ್ತಿದ್ದು ಈಗಾಗಲೇ ನಾಮಪತ್ರ ಜೊತೆಗೆ ತಮ್ಮ ಆಸ್ತಿ ವಿವರವನ್ನು ಅವರು ಸಲ್ಲಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಸಹ ಆಸ್ತಿ ವಿವರ ಸಲ್ಲಿಸಿದ್ದು ಅವರ ಒಟ್ಟು ಆಸ್ತಿಮೌಲ್ಯ 100 ಕೋಟಿಗೂ ಹೆಚ್ಚಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ಲಿಂಗಪ್ಪ ಅವರ ಪುತ್ರರಾಗಿರುವ ಎಲ್‌.ಚಂದ್ರಶೇಖರ್ ಅವರು ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದರು. ಈ ಮುಂಚೆ ಇವರು ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು.

ವರ್ಷದ ಆರಂಭದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಗೆದ್ದಿದ್ದರು ಅವರು ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ನಂತರ ಚನ್ನಪಟ್ಟಣ ಉಳಿಸಿಕೊಂಡು ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ಈಗ ಅಲ್ಲಿ ಉಪಚುನಾವಣೆ ನಡೆಯುತ್ತಿದೆ.

ಚಂದ್ರಶೇಖರ್ ಒಟ್ಟು ಆಸ್ತಿ ಮೌಲ್ಯ

ಚಂದ್ರಶೇಖರ್ ಒಟ್ಟು ಆಸ್ತಿ ಮೌಲ್ಯ

* ಎಲ್‌.ಚಂದ್ರಶೇಖರ್ ಅವರ ಬಳಿ ಒಟ್ಟು 13.60 ಲಕ್ಷ ಮೌಲ್ಯದ ಚರಾಸ್ತಿ ಇದ್ದರೆ 6.80 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಸುಮಿತ್ರಾ ದೇವಿ ಅವರ ಬಳಿ 23.70 ಲಕ್ಷ ಚರಾಸ್ತಿ ಇದ್ದರೆ , 3 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

* ಎಲ್‌.ಚಂದ್ರಶೇಖರ್ ಅವರು ಘೋಷಿಸಿಕೊಂಡಿರುವಂತೆ ಅವರ ಮೇಲೆ ಯಾವುದೇ ರೀತಿಯ ಪ್ರಕರಣಗಳು ಇಲ್ಲ. ಹಾಗೂ ಅವರು ಬೆಂಗಳೂರಿನ ಎಸ್‌ಜೆಆರ್‌ಸಿ ಕಾಲೇಜಿನಲ್ಲಿ ಬಿಎ ಓದಿದ್ದಾರೆ ಆದರೆ ಅನುತ್ತೀರ್ಣರಾಗಿದ್ದಾರೆ.

ಚಂದ್ರಶೇಖರ್ ಬಳಿ ಇರುವ ವಾಹನಗಳಾವುವು

ಚಂದ್ರಶೇಖರ್ ಬಳಿ ಇರುವ ವಾಹನಗಳಾವುವು

* ಚಂದ್ರಶೇಖರ್ ಅವರ ಬಳಿ ಒಟ್ಟು 1.5 ಲಕ್ಷ ರೂ ನಗದಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 1.60 ಲಕ್ಷ ಉಳಿತಾಯದ ಹಣ ಇದೆ. ಅವರ ಪತ್ನಿ ಸುಮಿತ್ರಾ ಅವರ ಖಾತೆಯಲ್ಲಿ 3 ಲಕ್ಷ ಹಣವಿದೆ. ಇಬ್ಬರು ಮಕ್ಕಳ ಖಾತೆಗಳಲ್ಲಿ ಹಣ ಇಲ್ಲ.

* ಚಂದ್ರಶೇಖರ್ ಅವರ ಬಳಿ 10 ಲಕ್ಷ ರೂಪಾಯಿ ಮೌಲ್ಯದ ಒಂದು ಸ್ಕೋಡಾ ಕಾರಿದೆ. ಪತ್ನಿ ಹೆಸರಲ್ಲಿ ವಾಹನವಿಲ್ಲ. ಮಗನ ಬಳಿ 3 ಲಕ್ಷ ಮೌಲ್ಯದ ಕೆ.ಟಿ.ಎಂ ಬ್ರಾಂಡ್‌ನ ದ್ವಿಚಕ್ರ ವಾಹನವಿದೆ.

ಚಂದ್ರಶೇಖರ್ ಬಳಿ ಆಭರಣಗಳೇ ಇಲ್ಲ!

ಚಂದ್ರಶೇಖರ್ ಬಳಿ ಆಭರಣಗಳೇ ಇಲ್ಲ!

* ಚಂದ್ರಶೇಖರ್ ಅವರ ಬಳಿ ಯಾವುದೇ ಆಭರಣಗಳಿಲ್ಲ. ಅವರ ಪತ್ನಿ ಹೆಸರಲ್ಲಿ 20,00,000 ಮೌಲ್ಯದ 700 ಗ್ರಾಂ ಚಿನ್ನವಿದೆ. 70, 000 ಮೌಲ್ಯದ ಬೆಳ್ಳಿ ಇದೆ. ಮಕ್ಕಳ ಬಳಿಯೂ ಆಭರಣಗಳಿಲ್ಲ.

* ಚಂದ್ರಶೇಖರ್ ಅವರ ಒಟ್ಟು ಚರಾಸ್ತಿ ಮೌಲ್ಯ 13,00,000 ರೂಪಾಯಿ. ಪತ್ನಿ ಸುಮಿತ್ರ ಅವರ ಚರಾಸ್ತಿ ಮೌಲ್ಯ 23,70,000, ಮಗ ಮೋನಿಷ್‌.ಸಿ ಅವರ ಚರಾಸ್ತಿ ಮೌಲ್ಯ 3 ಲಕ್ಷ ರೂಪಾಯಿ.

ಚಂದ್ರಶೇಖರ್ ಎಷ್ಟು ಜಮೀನಿನ ಒಡೆಯರು?

ಚಂದ್ರಶೇಖರ್ ಎಷ್ಟು ಜಮೀನಿನ ಒಡೆಯರು?

* ಚಂದ್ರಶೇಖರ್ ಅವರ ಬಳಿ ಒಟ್ಟು 13.34 ಎಕರೆ ಕೃಷಿ ಜಮೀನಿದೆ. ಇದರ ಈಗಿನ ಅಂದಾಜು ಮೌಲ್ಯ 6.80 ಕೋಟಿ ರೂಪಾಯಿ. ಪತ್ನಿ ಹೆಸರಲ್ಲಿ ಕೃಷಿಯೇತರ ಭೂಮಿ ಇದೆ. ಇದರ ಒಟ್ಟು ಮೌಲ್ಯ 3 ಕೋಟಿ ರೂಪಾಯಿ ಈ ಭೂಮಿ ದಾನ ಬಂದದ್ದು (ಪಿತ್ರಾರ್ಜಿತ) ಎಂದು ಘೋಷಿಸಿದ್ದಾರೆ.

* ಚಂದ್ರಶೇಖರ್ ಅವರ ಒಟ್ಟು ಚರಾಸ್ತಿ ಮೌಲ್ಯ 13.60 ಲಕ್ಷ ಇದೆ. ಸ್ಥಿರಾಸ್ತಿ ಮೌಲ್ಯ 6.80 ಕೋಟಿ ಇದೆ. ಅವರ ಪತ್ನಿಯ ಚರಾಸ್ತಿ 23.70 ಲಕ್ಷ ಇದ್ದರೆ ಸ್ಥಿರಾಸ್ತಿ ಮೌಲ್ಯ 3 ಕೋಟಿ ಇದೆ. ಮಗನ ಚರಾಸ್ತಿ 3 ಲಕ್ಷ ಇದೆ.

* ಚಂದ್ರಶೇಖರ್ ಅವರು ಬಿಡದಿಯ ಕೆನರಾ ಬ್ಯಾಂಕ್‌ನಿಂದ 65 ಲಕ್ಷ ಸಾಲ ಪಡೆದಿದ್ದಾರೆ. ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಯಾವುದೇ ಸಾಲಗಳಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+