ಸೂರೇ ಸರಿಯಿಲ್ಲದ ಬ್ರಹ್ಮಣೀಪುರದ ಸರಕಾರಿ ಶಾಲೆ, ನೋಡೋರೆ ಇಲ್ಲವೆ!

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್ 20: ಸರಕಾರಿ ಶಾಲೆ ಅಂದರೆ ಎಲ್ಲ ಮೂಲ ಸೌಕರ್ಯಗಳಿರುತ್ತವೆ ಎಂಬುದು ನಿರೀಕ್ಷೆ. ಆದರೆ ಇಲ್ಲೊಂದು ಸರಕಾರಿ ಶಾಲೆಯಲ್ಲಿ ಸೌಕರ್ಯವೇ ಮರೀಚಿಕೆಯಾಗಿದೆ. ಛಾವಣಿ ಕಿತ್ತು ಬೀಳುತ್ತಿರುವ ಕೊಠಡಿಗಳಲ್ಲೇ ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಿತಿ ಬಂದಿದೆ. ಇನ್ನು ಶೌಚಾಲಯದ ಸ್ಥಿತಿಯಂತೂ ಆ ದೇವರಿಗೇ ಪ್ರೀತಿ.

ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ಬದ್ಧ : ಅನಿತಾ ಕುಮಾರಸ್ವಾಮಿ

ಹಾಳಾಗಿರುವ ಶಾಲಾ ಕಟ್ಟಡ, ಅಲ್ಲಲ್ಲಿ ಕಿತ್ತು ಹೋದ ಛಾವಣಿ, ಹೊರಭಾಗದಲ್ಲಿಯೇ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು...-ಇಂಥ ದೃಶ್ಯ ನೋಡಬೇಕು ಅಂದರೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರ ಗ್ರಾಮಕ್ಕೆ ಬರಬೇಕು. ಒಂದರಿಂದ ಏಳನೇ ತರಗತಿಯವರೆಗೂ ಇರುವ ಈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 92 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Government school

ಇಲ್ಲಿ ಸರಿಯಾದ ಕೊಠಡಿಗಳಿಲ್ಲ. ಕಳಪೆ ಕಾಮಗಾರಿಯಿಂದಾಗಿ ಛಾವಣಿ ಸಂಪೂರ್ಣ ಹಾಳಾಗಿ, ಚಕ್ಕೆ ಕಿತ್ತು ಬೀಳುತ್ತಿದೆ. ಇನ್ನು ಮಳೆಗಾಲದಲ್ಲಂತೂ ವಿದ್ಯಾರ್ಥಿಗಳ ಮೇಲೆ ನೀರು ಸುರಿಯುತ್ತದೆ. ಯಾವಾಗ ಛಾವಣಿ ಬೀಳುತ್ತದೋ ಎಂಬ ಆತಂಕದಲ್ಲಿ ಪಾಠ ಕೇಳುವ ಪರಿಸ್ಥಿತಿ ಇದೆ.

ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಮೇಲೆ ಐಟಿ ದಾಳಿ

ಛಾವಣಿ ಕುಸಿಯಬಹುದೆಂಬ ಆತಕದಲ್ಲಿ ವಿದ್ಯಾರ್ಥಿಗಳನ್ನು ಶಾಲೆಯ ಹೊರಾಂಗಣದಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಇಲ್ಲಿರುವ ಶೌಚಾಲಯಗಳು ಸಹ ಹದಗೆಟ್ಟಿದ್ದು, ಗಿಡ-ಗಂಟಿ ಬೆಳೆದು ಹಾವು, ಹಲ್ಲಿಗಳಿಗೆ ವಾಸಸ್ಥಾನವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ.

Governemnet school

ಈ ಬಗ್ಗೆ ಶಾಲೆ ಮುಖ್ಯ ಶಿಕ್ಷಕಿಯನ್ನು ಕೇಳಿದರೆ, ಶಾಲೆಯ ಸಮಸ್ಯೆಗಳ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅವರು ಬಂದು ಪರಿಶೀಲನೆ ಮಾಡಿದ್ದಾರೆ ಎನ್ನುತ್ತಾರೆ.

ಸರಕಾರಿ ಶಾಲೆಗಳನ್ನು ಉಳಿಸಿ ಎಂದು ಜನಪ್ರತಿನಿಧಿಗಳು ಕೇವಲ ಬಾಯಲ್ಲಿ ಹೇಳುತ್ತಿದ್ದಾರೆ. ಆದರೆ ಉಳಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ramanagara district, Channapatna taluk, Brahmanipura government school building in pathetic condition.People urges for renovation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ