ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ, ಎಚ್ಡಿಕೆ ಬಗ್ಗೆ ಸಿ.ಪಿ.ಯೋಗೇಶ್ವರ್ ಮಾತಾಡಿರುವ ಆಡಿಯೋ ಬಾಂಬ್ ಲೀಕ್

|
Google Oneindia Kannada News

ರಾಮನಗರ, ಡಿ 13: ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ಮುಂದುವರಿದಿದೆ. ಸಮ್ಮಿಶ್ರ ಸರಕಾರವನ್ನು ಬೀಳಿಸಲು ಸ್ಕೆಚ್ ಹಾಕಿದ್ದೇ ನಾನು ಎಂದು ಯೋಗೇಶ್ವರ್ ಹೇಳಿಕೆಗೆ ಎಚ್ಡಿಕೆ ತಿರುಗೇಟು ನೀಡಿದ್ದಾರೆ.

"ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ತೆಗೆಯಲು ಕೈಹಾಕಿದ್ದು, ಯೋಗೇಶ್ವರ್ ಗೇಟ್ ಕೀಪರ್ ಕೆಲಸ ಮಾಡಿಕೊಂಡಿದ್ದರು"ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ನಡುವೆ ಮೂರು ದಿನಗಳ ಹಿಂದೆ ಯೋಗೇಶ್ವರ್ ಮಾತಾಡಿರುವ ಆಡಿಯೋ ಬಹಿರಂಗಗೊಂಡಿದೆ. ಅದರ ಯಥಾವತ್ ಅಕ್ಷರ ರೂಪ ಇಲ್ಲಿದೆ:

ಕುಮಾರಸ್ವಾಮಿ ಸರಕಾರ ಪತನದ ಹಿಂದಿನ ರಹಸ್ಯ ಬಿಚ್ಚಿಟ್ಟ ಯೋಗೇಶ್ವರ್ಕುಮಾರಸ್ವಾಮಿ ಸರಕಾರ ಪತನದ ಹಿಂದಿನ ರಹಸ್ಯ ಬಿಚ್ಚಿಟ್ಟ ಯೋಗೇಶ್ವರ್

ಐದು ಸಾವಿರ ರೂಪಾಯಿ ಕೊಡುತ್ತೇನೆ, ವೃದ್ದಾಪ್ಯ ವೇತನ ಕೊಡುತ್ತೇನೆ ಹೀಗೆಲ್ಲಾ ಹೇಳಿ, ತಾಲೂಕಿನ ಜನರಿಗೆ ಮಂಕುಬೂದಿ ಎರಚಿ, ಪ್ರಚೋದನೆ ಮಾಡಿ ಚುನಾವಣೆಯಲ್ಲಿ ಗೆದ್ದರು. ಚುನಾವಣೆಯಲ್ಲಿ ಗೆದ್ದ ಮೇಲೆ ಎರಡು ಕಡೆ ನಿಂತ್ಕೊಂಡ್ರು.

ನಾನೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ: ಯೋಗೇಶ್ವರ್‌ಗೆ ತಿರುಗೇಟು ಕೊಟ್ಟ ಎಚ್ಡಿಕೆನಾನೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ: ಯೋಗೇಶ್ವರ್‌ಗೆ ತಿರುಗೇಟು ಕೊಟ್ಟ ಎಚ್ಡಿಕೆ

ಮೊದಲು ಏನೋ ಹೇಳಿದರು, ನಂತರ ಎರಡು ಕಡೆ ನಿಂತ್ಕೊಂಡರೆ ನನ್ನ ಅಣ್ಣ ನನ್ನ ತಮ್ಮ ಅಂತ ಹೇಳಿದರು. ಜನ ಮತ್ತೆ ಕುಮಾರಸ್ವಾಮಿ ಸಿಎಂ ಆಗಿ ಇಡೀ ಕರ್ನಾಟಕನಾ ಚಿನ್ನ, ವಜ್ರ ಮಾಡುವುದಾಗಿ ಚುನಾವಣೆಯಲ್ಲಿ ಎರಡೂ ಕಡೆ ಗೆಲ್ಲಿಸಿದರು.

ರಾಮನಗರದಲ್ಲಿ ಅವನ ಹೆಂಡತಿನ ನಿಲ್ಲಿಸಿಕೊಂಡು ಗೆಲ್ಲಿಸಿಕೊಂಡರು

ರಾಮನಗರದಲ್ಲಿ ಅವನ ಹೆಂಡತಿನ ನಿಲ್ಲಿಸಿಕೊಂಡು ಗೆಲ್ಲಿಸಿಕೊಂಡರು

ಆಮೇಲೆ ರಾಮನಗರದಲ್ಲಿ ರಾಜೀನಾಮೆ ಕೊಟ್ಟು ಅವನ ಹೆಂಡತಿನ ನಿಲ್ಲಿಸಿಕೊಂಡು ಗೆಲ್ಲಿಸಿಕೊಂಡರು. ಕಾರ್ಯಕರ್ತರಲ್ಲಿ ಏನು ಬದಲಾವಣೆ ಆಯಿತು ನಾವು ನೀವೆಲ್ಲಾ ಗಮನಿಸಿದ್ದೇವೆ. ಜನರಿಗೆ ಮೊದಲು ಅರ್ಥವಾಗಲಿಲ್ಲ. ದೇವೇಗೌಡರ ಕುಟುಂಬ ಅಂದರೆ ಬಹಳ ಜನಪರ, ಜನಗಳಿಗೋಸ್ಕರ ಕಷ್ಟ ಪಡುತ್ತಾರೆ ಅಂದು ಕೊಂಡರು.

ದೇವೇಗೌಡರು ಅಂದರೆ ರೈತರು ಎಂದು ಬಿಂಬಿಸಿದರು

ದೇವೇಗೌಡರು ಅಂದರೆ ರೈತರು ಎಂದು ಬಿಂಬಿಸಿದರು

ದೇವೇಗೌಡರು ಅಂದರೆ ರೈತರು ಎಂದು ಬಿಂಬಿಸಿದರು. ಆಮೇಲೆ ಎಂಪಿ ಇಲೆಕ್ಷನ್ ಬಂತು. ಹಾಸನದಲ್ಲಿ ಮೊಮ್ಮಗನ ತಂದು ನಿಲ್ಲಿಸಿದರು. ಗೌಡ್ರು ತುಮಕೂರಿನಲ್ಲಿ ನಿಂತರು. ಒಬ್ಬ ಮೊಮ್ಮಗ ಮಂಡ್ಯದಲ್ಲಿ, ಇನ್ನೊಬ್ಬ ಹಾಸನದಲ್ಲಿ. ಜನಗಳು ಬುದ್ದಿವಂತರು, ನಮ್ಮೆಲ್ಲಾ ಯುವಕರು ಕೈಯಲ್ಲಿ ಮೊಬೈಲ್ ಹಿಂಡ್ಕೊಂಡವ್ರೆ.

ಗೌಡ್ರನ್ನು ಮತ್ತು ನಿಖಿಲ್ ನನ್ನು ಸೋಲಿಸಿದರು

ಗೌಡ್ರನ್ನು ಮತ್ತು ನಿಖಿಲ್ ನನ್ನು ಸೋಲಿಸಿದರು

ಎಲ್ಲಾ ವಾಟ್ಸಾಪ್ ಅಲ್ಲಿ ಬಿಟ್ಟರು, ಏನಪ್ಪಾ ಎಲ್ಲಾ ನಿಮ್ಮ ಅಪ್ಪಮಕ್ಕಳಿಗೆ ಬೇಕಾ, ಒಕ್ಕಲಿಗರ ಹೆಸರು ಹೇಳಿಕೊಂಡು ನಾವೆಲ್ಲಾ ಎಲ್ಲಿ ಹೋಗಬೇಕು ಎಂದು ಹೇಳಿ, ಗೌಡ್ರನ್ನು ಮತ್ತು ನಿಖಿಲ್ ನನ್ನು ಸೋಲಿಸಿದರು. ಅಂದರೆ ದೇವೇಗೌಡರ ಕುಟುಂಬ ಜನಪರವಾಗಿ ಒಂದು ಕಳಕಳಿ, ಬದ್ದತೆ ಇಂದ ಇಲ್ಲಾ, ಕಾಲ ಬದಲಾವಣೆ ಆದಂತೆ, ಕುಟುಂಬ ರಾಜಕಾರಣ ಜಾಸ್ತಿ ಆಯಿತು, ಬರೀ ಕುಟುಂಬಕ್ಕೆ ಇವರು ಸೀಮಿತ ಅಂತ ಜನಗಳಿಗೆ ಗೊತ್ತಾಯಿತು.

ಬೆಂಗಳೂರಿನ ಫೈವ್ ಸ್ಟಾರ್ ಹೊಟೇಲ್ ತಾಜ್

ಬೆಂಗಳೂರಿನ ಫೈವ್ ಸ್ಟಾರ್ ಹೊಟೇಲ್ ತಾಜ್

ಹಾಗಾಗಿ, ಗೌಡ್ರ ಕುಟುಂಬ ಆರಾಮಾಗಿರಲಿ ಎಂದು ಒಕ್ಕಲಿಗ ಜನ ಅವರನ್ನ ನೂರಕ್ಕೆ ನೂರು ಕೈಬಿಟ್ಟರು. ಕುಮಾರಸ್ವಾಮಿ ಒಂದು ಕಡೆ ಬಿಜೆಪಿ ಜೊತೆಗೆ ಮಾತುಕತೆ ಮಾಡಿಕೊಂಡಿದ್ದ. ಚುನಾವಣೆ ಗೆದ್ದ ಮೇಲೆ ಕಾಂಗ್ರೆಸ್ ಜೊತೆಗೆ ಹೋಗಿ ಸಿಎಂ ಆದರು. ಅದಾದ ಮೇಲೆ ಬೆಂಗಳೂರಿನ ಫೈವ್ ಸ್ಟಾರ್ ಹೊಟೇಲ್ ತಾಜ್ ನಲ್ಲಿ ರೂಮ್ ಮಾಡಿದರು. ಅಲ್ಲಿಂದ ಅಧಿಕಾರ ನಡೆಸಲು ಆರಂಭಿಸಿದರು.

ಜೋಡೆತ್ತುಗಳು ಬೇರೆ ಬೇರೆ ಆಗುವುದಕ್ಕೆ ಶುರುವಾದವು

ಜೋಡೆತ್ತುಗಳು ಬೇರೆ ಬೇರೆ ಆಗುವುದಕ್ಕೆ ಶುರುವಾದವು

ಅದಾದ ಮೇಲೆ ನಾಲ್ಕೈದು ತಿಂಗಳಲ್ಲಿ ಅಪಸ್ವರ ಶುರುವಾಯಿತು. ಯಾವಾಗ ಜೋಡೆತ್ತುಗಳು ಬೇರೆ ಬೇರೆ ಆಗುವುದಕ್ಕೆ ಶುರುವಾದವೋ, ಕಾಂಗೆಸ್ಸಿನವರು ಹೊಲದಲ್ಲಿ ಮೇಯೋಕೆ ಶುರು ಮಾಡಿದರು. ನನ್ನನ್ನು ಸೋಲಿಸಿಬಿಟ್ಟರು. ಚನ್ನಪಟ್ಟಣದಲ್ಲಿ ಮುಖ ತೋರಿಸಲು ಆಗುತ್ತಿರಲಿಲ್ಲ. ಹಾಗಾಗಿ, ಬೆಂಗಳೂರು ಸೇರಿಕೊಂಡೆ. ಸ್ಕೆಚ್ ಹಾಕಿ ಕುಮಾರಸ್ವಾಮಿನಾ ಇಳಿಸಿದೆ.

ಗೌಡ್ರ ಮತ್ತು ಡಿಕೆಶಿ ಕುಟುಂಬಕ್ಕೆ ಅನಿಸುತ್ತಾ ಇದೆ, ಯಾಕಪ್ಪಾ ಯೋಗೇಶ್ವರ್ ತಂಟೆಗೆ ಹೋದೆ ಎಂದು

ಗೌಡ್ರ ಮತ್ತು ಡಿಕೆಶಿ ಕುಟುಂಬಕ್ಕೆ ಅನಿಸುತ್ತಾ ಇದೆ, ಯಾಕಪ್ಪಾ ಯೋಗೇಶ್ವರ್ ತಂಟೆಗೆ ಹೋದೆ ಎಂದು

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಆಗುತ್ತೆ. ಎಂಪಿ ಸುರೇಶ ಹೇಳುತ್ತಾನೆ, ಯೋಗೇಶ್ವರ್ ಅಂದರೆ ಯಾರೂಂತಾನೆ ಗೊತ್ತಿಲ್ಲ ಅಂತ. ಇರಲಿ ಇರಲಿ ಮಗ ನಿನಗೆ ನೆನಪಿಸ್ತೀನಿ, ಚನ್ನಪಟ್ಟಣದ ಮಣ್ಣಿನ ಶಕ್ತಿಯೇನು ಎಂದು ತೋರಿಸುತ್ತೇನೆ ಎಂದು ಹೇಳಿದೆ. ಈಗ ಗೌಡ್ರ ಮತ್ತು ಡಿಕೆಶಿ ಕುಟುಂಬಕ್ಕೆ ಅನಿಸುತ್ತಾ ಇದೆ, ಯಾಕಪ್ಪಾ ಯೋಗೇಶ್ವರ್ ತಂಟೆಗೆ ಹೋದೆ ಎಂದು ಅವರಿಗೆ ಅನಿಸುತ್ತಿದೆ. ಅಧಿಕಾರ ಹೋದ ಮೇಲೆ ಅವನನ್ನು ಸೀದಾ ತಿಹಾರ್ ಜೈಲಿಗೆ ಕರೆದುಕೊಂಡು ಹೋದರು. ಕರ್ನಾಟಕದ ಯಾವ ರಾಜಕಾರಣಿಯೂ ಹೋಗಿಲ್ಲ. ಅವನೊಬ್ಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಅವನಿಗೊಬ್ಬ ತಮ್ಮ, ಅವನು ಎಂಪಿ"ಇದು ಯೋಗೇಶ್ವರ್ ಮಾಡಿದ ಭಾಷಣದ ಅಂಶಗಳು.

English summary
BJP MLC CP Yogeshwar Audio Leak, Explaining How He Made It Collapsed HD Kumaraswamy Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X