ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನೀಚ ಬುದ್ದಿಯ ಬಿಡು ನಾಲಿಗೆ' ಎಂದು ಬುದ್ಧಿವಾದ ಹೇಳಿದ ಅನಿತಾ ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ,ಜು 2: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುರಿತು ಮಧುಗಿರಿ ಮಾಜಿ ಶಾಸಕ ಹಾಗೂ ಕೆ.ಎನ್.ರಾಜಣ್ಣ ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನಾಯಕರು ಸಹ ರಾಜಣ್ಣ ನವರ ಹೇಳಿಕೆಯನ್ನು ಖಂಡಿಸಿದ್ದಾರೆ. ಅಲ್ಲದೇ ಪಕ್ಷಾತೀತವಾಗಿ ಸಾಕಷ್ಟು ರಾಜಕೀಯ ಮುಖಂಡರು ಹಿರಿಯ ಮುತ್ಸದ್ಧಿ ದೇವೇಗೌಡರ ಬಗ್ಗೆ ಯಾರು ಹಗುರವಾಗಿ ಮಾತನಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಸೊಸೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರ ಪತ್ನಿ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಯವರು ತಮ್ಮ ಮಾವ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡಿರುವ ಕೆ.ಎನ್.ರಾಜಣ್ಣ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನೀಚ ಬುದ್ದಿಯ ಬಿಡು ನಾಲಿಗೆ ಎಂದು ಕಿಡಿಕಾರಿದರು.

ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಅಂಬರೀಶ್‌ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಅಂಬರೀಶ್‌

ಪರಮನೀಚ ಮನುಷ್ಯ ರಾಜಣ್ಣ

ಪರಮನೀಚ ಮನುಷ್ಯ ರಾಜಣ್ಣ

ಪಟ್ಟಣದ ಜಿಲ್ಲಾ ಸಂಕೀರ್ಣದ ಪೌರ ಇಲಾಖೆಯ ಹೊರಗುತ್ತಿಗೆ ನೌಕರರು ಖಾಯಂ ಮಾಡುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರಿಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ದೇವೇಗೌಡರ ಕಾಲಿನ ದೂಳಿಗೂ ಸಮವಿಲ್ಲದ ವ್ಯಕ್ತಿ ರಾಜಣ್ಣ ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಕೆ.ಎನ್ ರಾಜಣ್ಣ ಅವರ ಆಕ್ಷೇಪಾರ್ಹ ಹೇಳಿಕೆಗೆ ಕೆರಳಿ ಕೆಂಡವಾದ ಶಾಸಕಿ ಅನಿತಾ ಕುಮಾರಸ್ವಾಮಿ, ಹಿಗ್ಗಾಮುಗ್ಗ ಕೆ.ಎನ್ ರಾಜಣ್ಣ ವಿರುದ್ಧ ಹರಿಹಾಯ್ದರು, ದೇವೇಗೌಡರ ಕಾಲಿಗೆ ಧೂಳಿಗೆ ಸಮನಿಲ್ಲ ವ್ಯಕ್ತಿ ಅವರು, ಆಚಾರವಿಲ್ಲದ ನಾಲಿಗೆ ಅವರದ್ದು, ಪರಮನೀಚ ಮನುಷ್ಯ ರಾಜಣ್ಣ ಎಂದು ಕಿಡಿಕಾರಿದರು.

ಹೈಕೋರ್ಟ್ ಕದ ತಟ್ಟಿ ಕುರ್ಚಿ ಪಡೆದ ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್ಹೈಕೋರ್ಟ್ ಕದ ತಟ್ಟಿ ಕುರ್ಚಿ ಪಡೆದ ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್

ದೇವೇಗೌಡರನ್ನು ಭೇಟಿ ಮಾಡಲು ಬಿಡಲ್ಲ ಎಂದ ಅನಿತಾ ಕುಮಾರಸ್ವಾಮಿ

ದೇವೇಗೌಡರನ್ನು ಭೇಟಿ ಮಾಡಲು ಬಿಡಲ್ಲ ಎಂದ ಅನಿತಾ ಕುಮಾರಸ್ವಾಮಿ

ಬಹಳ ನೋವಿನಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ ಅವರ ಬುದ್ಧಿಯನ್ನು ನೋಡಿಯೇ ಮಧುಗಿರಿ ಜನ ಸೋಲಿಸಿದ್ದಾರೆ. ಒಬ್ಬ ಮಾಜಿ ಪ್ರಧಾನಿಗಳ ಬಗ್ಗೆ ಕನಿಷ್ಟ ಗೌರವವಿಲ್ಲದೆ ಮಾತಾಡಿದ್ದಾರೆ, ಅಲ್ಲದೇ ದೇವೇಗೌಡರನ್ನು ಭೇಟಿ ಮಾಡುತ್ತೇನೆ ಅಂದಿದ್ದಾರೆ, ನಮ್ಮ ಮಾವನವರಿಗೆ ಹೇಳ್ತೀನಿ ಭೇಟಿ ಮಾಡೋದು ಬೇಡ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು.

ಇನ್ನೂ ಪ್ರತಿಭಟನೆ ನಿರತ ಪೌರ ಇಲಾಖೆಯ ಹೊರಗುತ್ತಿಗೆ ನೌಕರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ, ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಲಿಸಿದ್ದೇನೆ, ನೇರ ನೇಮಕಾತಿ ಮೂಲಕ ಮಾಡಿಕೊಳ್ಳದೆ ಕಂಟ್ರಾಕ್ಟರ್ ಮೂಲಕ ನೇಮಕಾತಿಗಳು ಆಗಿವೆ. EF, PF ಸಹ ಸರಿಯಾಗಿ ಕಟ್ಟುತ್ತಿಲ್ಲ ಜೊತೆಗೆ ಕೆಲಸದಲ್ಲಿ ರಕ್ಷಣೆ ಇಲ್ಲ ಈ ಬಗ್ಗೆ ಮುಂದಿನ ತಿಂಗಳಲ್ಲಿ ನಡೆಯುವ ವಿಧಾನಸಭೆ ಕಲಾಪದಲಗಲ್ಲಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು

ಬಹಿರಂಗವಾಗಿ ಈ ಕೂಡಲೇ ಕ್ಷಮೆ ಯಾಚಿಸಲಿ

ಬಹಿರಂಗವಾಗಿ ಈ ಕೂಡಲೇ ಕ್ಷಮೆ ಯಾಚಿಸಲಿ

ಕೆ.ಎನ್.ರಾಜಣ್ಣ ಬಹಿರಂಗ ಕ್ಷಮೆಯಾಚಿಸಲಿ ಎಂದು ಬಿಡದಿಯಲ್ಲಿ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್ ಆಗ್ರಹಿಸಿದರು. ರಾಜಣ್ಣ ಅವಿವೇಕತನದ ಪ್ರದರ್ಶನ ಮಾಡಿದ್ದಾರೆ. ಕೆ.ಎನ್.ರಾಜಣ್ಣ ತಾವು ನೀಡಿರುವ ಆಕ್ಷೇಪ ಅರ್ಹ ಹೇಳಿಕೆಗೆ ಬಹಿರಂಗವಾಗಿ ಕ್ಷಮೆ ಯಾಚನೆ ಮಾಡದಿದ್ದರೆ ನಾವೇನೂ ಎಂಬುದನ್ನು ತೋರಿಸುತ್ತೇವೆ ಎಂದು ಗುಡುಗಿದರು.

ಹಿರಿಯರ ಬಗ್ಗೆ ಇಂತಹ ಹೇಳಿಕೆ ಯಾರಿಗೂ ಸಹ ಶೋಭೆಯಲ್ಲ, ದೇವೇಗೌಡರು,ಕುಮಾರಣ್ಣ ವಿರುದ್ಧ ಮಾತನಾಡಿದವರೆಲ್ಲ ಏನೇನ್ ಆಗಿದ್ದಾರೆ ಗೊತ್ತಿದೆಯಲ್ವ ಇವರು ಅದೇ ಸಾಲಿನಲ್ಲಿ ನಿಲ್ಲುತ್ತಾರೆ . ಕೆ.ಎನ್.ರಾಜಣ್ಣ ತಮ್ಮ ಹೇಳಿಕೆಗೆ ಕ್ಷಮೆಯಾಚನೆ ಮಾಡದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಕೆ.ಎನ್.ರಾಜಣ್ಣ ಬಹಿರಂಗವಾಗಿ ಈ ಕೂಡಲೇ ಕ್ಷಮೆ ಯಾಚಿಸಲಿ ಎಂದು ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ರಾಜಣ್ಣ ಸಾಯಲ್ವೇ, ನಾನು ಕೂಡಾ ಸಾಯೋದಿಲ್ವೇ

ರಾಜಣ್ಣ ಸಾಯಲ್ವೇ, ನಾನು ಕೂಡಾ ಸಾಯೋದಿಲ್ವೇ

ಕೆ.ಎನ್.ರಾಜಣ್ಣ ಆಕ್ಷೇಪ ಅರ್ಹ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಖಂಡಿಸಿದರು. ದೇವೇಗೌಡರು ಯಾವುದೇ ಪಕ್ಷದವರು ಇರಬಹುದು ಅವರು ಪ್ರಧಾನಿ, ಮುಖ್ಯಮಂತ್ರಿ ಆಗಿದ್ದಂತವರು, ವಯಸ್ಸಿನಲ್ಲಿ, ರಾಜಕೀಯದಲ್ಲೂ ಹಿರಿಯ ಮುತ್ಸದಿ ಅವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು.

ರಾಜಣ್ಣ ಬಾಯಲ್ಲಿ ಆ ಮಾತು ಬಂದದ್ದು ಅಕ್ಷಮ್ಯ ಅಪರಾಧ. ದುಡುಕಿ ಆದರೂ ಈ ವಿಚಾರ ಶೋಭೆ ತರುವಂತಹದ್ದು ಅಲ್ಲ.ಯಾವುದೇ ಪಕ್ಷದವರು ಇರಲಿ ಹಿರಿಯರ ಬಗ್ಗೆ ಗೌರವ ಇರಬೇಕು. ವಿಧಾನಸೌಧದಲ್ಲಿ ಸಾಕಷ್ಟು ವರ್ಷ ಇದ್ದವರು ರಾಜಣ್ಣ, ಇನ್ನೂ ಒರಟುತನ ಅವರಲ್ಲಿ ಹೋಗಿಲ್ಲ, ಕೆ.ಎನ್.ರಾಜಣ್ಣ ಒರಟುತನ ಬಿಟ್ಟು ಮಾತನಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಕೆ.ಎನ್.ರಾಜಣ್ಣ ನವರಿಗೆ ಸಲಹೆ ನೀಡಿದರು‌.

Recommended Video

ಟೈಲರ್ ಹತ್ಯೆ ವಿಚಾರಕ್ಕೆ ಸಾಥ್ ಕೊಟ್ರಾ ರಾಹುಲ್ ಗಾಂಧಿ! | OneIndia Kannada

English summary
Ramanagara: MLA Anita Kumaraswamy said criticized KN Rajanna as a person who is not equal to the dust of devegowda's feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X