ರಾಮನಗರಕ್ಕೆ ಸಿಹಿ ಸುದ್ದಿ: 68 ಕೊರೊನಾ ಟೆಸ್ಟ್ ನೆಗೆಟಿವ್
ರಾಮನಗರ, ಏಪ್ರಿಲ್ 28: ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದ ಪಾದರಾಯನಪುರ ಆರೋಪಿಗರಲ್ಲಿ 5 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ರಾಮನಗರ ಜಿಲ್ಲೆಯ ಜನತೆಯಲ್ಲಿ ಹೆಚ್ಚಿದ್ದ ಆತಂಕವನ್ನು ಆರೋಗ್ಯ ಇಲಾಖೆಯ ವರದಿ ಕಡಿಮೆ ಮಾಡಿದೆ.
ಆರೋಪಿಗಳನ್ನು ಬೆಂಗಳೂರಿಗೆ ಸ್ಥಳಾಂತರದ ನಂತರ ಕ್ವಾರಂಟೈನ್ ನಲ್ಲಿ 68 ಮಂದಿ ಕೊರೊನಾ ವೈರಸ್ ಟೆಸ್ಟ್ ನೆಗಟಿವ್ ಎಂದು ವರದಿ ಬಂದಿದೆ. ಜಿಲ್ಲಾಡಳಿತ ಸಿಬ್ಬಂದಿ, ನಗರಸಭೆ ಸಿಬ್ಬಂದಿ, ಜೈಲು ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ಸುಮಾರು 68 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು.

ನಗರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಇರಿಸಲಾಗಿದ್ದ 68 ಜನರ ಗಂಟಲು ಕಫ ಹಾಗೂ ರಕ್ತದ ಮಾದರಿ ಸಂಗ್ರಹ ಮಾಡಿ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು.
ಸೋಮವಾರ ಸಂಜೆ 68 ಜನರ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದು, ಯಾವುದೇ ಆತಂಕ ಇಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಡಿಹೆಚ್ಒ ಡಾ. ನಿರಂಜನ್ ಮಾಹಿತಿ ನೀಡಿದ್ದಾರೆ.











Click it and Unblock the Notifications