ರಾಮನಗರದಲ್ಲಿ 64, ಚಿಕ್ಕಮಗಳೂರಿನಲ್ಲಿ 61 ಕೋವಿಡ್-19 ಪ್ರಕರಣ ಪತ್ತೆ
ರಾಮನಗರ, ಜುಲೈ 26: ರಾಮನಗರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು 64 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದೃಢಪಟ್ಟಿವೆ.
Recommended Video
ಈ ಮೂಲಕ ರಾಮನಗರ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 730 ಕ್ಕೆ ಏರಿಕೆ ಕಂಡಿದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ 9 ಪ್ರಕರಣ, ಮಾಗಡಿ ತಾಲ್ಲೂಕಿನಲ್ಲಿ 16 ಪ್ರಕರಣ, ಕನಕಪುರ ತಾಲ್ಲೂಕಿನಲ್ಲಿ 19 ಪ್ರಕರಣ, ರಾಮನಗರ ತಾಲ್ಲೂಕಿನಲ್ಲಿ 20 ಪ್ರಕರಣ ಕಂಡುಬಂದಿರುತ್ತವೆ. ಈ ಎಲ್ಲ ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿನಿಂದ ಒಂದು ಸಾವು
ಚಿಕ್ಕಮಗಳೂರು ಜಿಲ್ಲೆಯಲ್ಲಿ 61 ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 677 ಕ್ಕೆ ಏರಿಕೆಯಾಗಿದೆ. ಕಡೂರು 30, ಚಿಕ್ಕಮಗಳೂರು 18, ತರೀಕೆರೆ 12, ಮೂಡಿಗೆರೆಯಲ್ಲಿ 1 ಪ್ರಕರಣ ಪತ್ತೆಯಾಗಿವೆ.

278 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕೊರೊನಾ ಸೋಂಕಿನಿಂದ ಇದುವರೆಗೂ ಜಿಲ್ಲೆಯಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications