ರಾಯಚೂರಿನ ಶಾಖೋತ್ಪನ್ನ ಸ್ಥಾವರದ ಐದನೇ ಘಟಕವೂ ಬಂದ್
ರಾಯಚೂರು, ಅಕ್ಟೋಬರ್ 27: ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ದೇಶದಲ್ಲಿ ಸಾಕಷ್ಟು ಶಾಕೋತ್ಪನ್ನ ಘಟಕಗಳು ಮುಚ್ಚುವ ಸ್ಥಿತಿಯಲ್ಲಿದೆ. ಹೀಗಿರುವಾಗ ರಾಯಚೂರಿನ ಶಾಖೋತ್ಪನ್ನ ಕೇಂದ್ರದ ಐದನೇ ಘಟಕ ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ.
ದೇಶಾದ್ಯಂತ ಕಲ್ಲಿದ್ದಲು ಕೊರತೆಯಿಂದಾಗಿ ಒಟ್ಟು 8 ಶಾಖೋತ್ಪನ್ನ ಘಟಕಗಳ ಪೈಕಿ ನಾಲ್ಕು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು ಆದರೆ ಇದೀಗ ತಾಂತ್ರಿಕ ದೋಷದಿಂದಾಗಿ ಆ ಘಟಕವನ್ನೂ ಕೂಡ ಮುಚ್ಚಲಾಗಿದೆ.
ಕೂಡಗಿಯಲ್ಲಿ ತಲಾ 800 ಮೆಗಾವ್ಯಾಟ್‌ನ ಸಾಮರ್ಥ್ಯದ ಮೂರು ಯುನಿಟ್ ಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಆದರೆ ಇಂದು ಕೇವಲ ಒಂದು ಯುನಿಟ್ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಮೂರನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ
ವಿದ್ಯುತ್ ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಮೂರನೇ ಘಟಕದಲ್ಲಿ ವಿದ್ಯುತ್ ಉತ್ಪಾದಿಸಲು ಕೆಪಿಸಿ ನಿರ್ಧರಿಸಿದೆ. ಸದ್ಯ ಟಿಆರ್‌ಪಿಎಸ್ ನಲ್ಲಿ 8 ಸಾವಿರ ಮೆ.ಟನ್ ಕಲ್ಲಿದ್ದಿಲಿದ್ದು ಅರ್ಧ ದಿನಕ್ಕೂ ಸಾಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂರು ಘಟಕಗಳಿಂದ 400 ಮೆಗಾ ವ್ಯಾಟ್ ಉತ್ಪಾದನೆ
ಮೂರು ಶಾಖೋತ್ಪನ್ನ ಘಟಕಗಳಿಂದ ಒಟ್ಟು 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಶನಿವಾರ ಸಂಜೆ ವೇಳೆಗೆ ಉತ್ಪಾದನೆ ಹೆಚ್ಚಿಸಲು ಕೆಪಿಸಿ ಸಿದ್ಧತೆ ನಡೆಸಿದೆ.

ಕೂಡಗಿ ಸ್ಥಾವರಕ್ಕೆ ಕಲ್ಲಿದ್ದಿಲು
ಕೂಡಗಿ ಎನ್‌ಟಿಪಿಸಿ ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಗುರುವಾರ ಕಲ್ಲಿದ್ದಲು ಖಾಲಿಯಾಗಿತ್ತು, ಶುಕ್ರವಾರ ಎಂಟು ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬಂದಿದ್ದು, ಶನಿವಾರ 499 ಮೆಗಾ ವ್ಯಾಟ್ ಉತ್ಪಾದನೆ ಮಾಡಲಾಗುತ್ತದೆ.

22 ವಿದ್ಯುತ್ ಕೇಂದ್ರಗಳು ಸಂಕಷ್ಟದಲ್ಲಿವೆ
ದೇಶದಲ್ಲಿರುವ 7ಕ್ಕಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹ 9 ಕೇಂದ್ರಗಳಲ್ಲಿದೆ. ಅದೇ ರೀತಿ ದೇಶದ 22 ಶಾಖೋತ್ಪನ್ನ ಕೇಂದ್ರಗಳಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅದರಲ್ಲಿ ರಾಜ್ಯದ ಶಕ್ತಿನಗರ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಸೇರಿವೆ.












Click it and Unblock the Notifications