Adani: ಅದಾನಿ ಟೋಟಲ್ ಗ್ಯಾಸ್‌ಗೆ ಮಿಶ್ರ ಫಲಿತಾಂಶ; ಆದಾಯ ಏರಿಕೆ
ಪ್ರಸಕ್ತ ಹಣಕಾಸು ವರ್ಷದ (2026-27) ಮೊದಲ ತ್ರೈಮಾಸಿಕದಲ್ಲಿ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ATGL) ಅತ್ಯುತ್ತಮ ಆದಾಯ ಗಳಿಸಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಅನಿಲದ ಬೆಲೆ ಏರಿಕೆಯ ಕಾರಣದಿಂದಾಗಿ ಕಂಪನಿಯ ನಿವ್ವಳ ಲಾಭದಲ್ಲಿ ಕೊಂಚ ಕುಸಿತ ಕಂಡಿದೆ. ಸದರಿ ಮೊದಲ ತ್ರೈಮಾಸಿಕ ಸಂದರ್ಭದಲ್ಲಿ ಕಂಪನಿಯು ದೇಶಾದ್ಯಂತ ಸಿಎನ್‌ಜಿ ಮತ್ತು ಪಿಎನ್‌ಜಿ ವಿತರಣಾ ಜಾಲವನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಆದರೂ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ವೆಚ್ಚದ ಒತ್ತಡವು ಕಂಪನಿಯ ಹಣಕಾಸು ಬೆಳವಣಿಗೆ ಮೇಲೆ ಪ್ರಭಾವ ಉಂಟು ಮಾಡಿದೆ.
ಸಿಎನ್‌ಜಿ ಗ್ರಾಹಕರ ಬೇಡಿಕೆ ಹೆಚ್ಚಾಗಿದ್ದರಿಂದ ಕಂಪನಿಯ ಒಟ್ಟು ಆದಾಯವು ವಾರ್ಷಿಕ ಆಧಾರದ ಮೇಲೆ ಶೇಕಡಾ 27 ರಷ್ಟು ಹೆಚ್ಚಾಗುವ ಮೂಲಕ 1,910 ಕೋಟಿ ರೂಪಾಯಿಗಳಿಗೆ ತಲುಪಿದೆ. ಜಂಟಿ ಉದ್ಯಮವಾಗಿರುವ ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಒಟ್ಟು ಗ್ಯಾಸ್ ಮಾರಾಟ ಪ್ರಮಾಣವು ಶೇಕಡಾ 13 ರಷ್ಟು ಹೆಚ್ಚಳವಾಗಿದೆ..

ಜಾಗತಿಕವಾಗಿ ಸಾಗರೋತ್ತರ ಮಾರುಕಟ್ಟೆಯಲ್ಲಿನ ನೈಸರ್ಗಿಕ ಅನಿಲದ ಬೆಲೆ ಏರಿಕೆಯಾದ ಕಾರಣ ಇಬಿಐಟಿಡಿಎ (EBITDA) ಸುಮಾರು 281 ಕೋಟಿ ರೂ.ಗೆ ಇಳಿದಿದೆ. ಇದರೊಂದಿಗೆ ಕಂಪನಿಯ ನಿವ್ವಳ ಲಾಭವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 18 ರಷ್ಟು ಇಳಿಕೆಯಾಗಿದ್ದು, 133 ಕೋಟಿ ರೂ.ಗೆ ಸೀಮಿತಗೊಂಡಿದೆ.
ಗ್ರಾಹಕ ಜಾಲ ಮತ್ತು ಸಿಎನ್‌ಜಿ ವಿತರಣೆ ಹೆಚ್ಚಳ
ಜಾಗತಿಕ ಇಂಧನ ಸವಾಲುಗಳ ಮಧ್ಯೆ ಅದಾನಿ ಟೋಟಲ್ ಗ್ಯಾಸ್ ಕಂಪನಿಯು ತನ್ನ ಜಾಲವನ್ನು ಮತ್ತಷ್ಟು ವಿಸ್ತರಣೆಯಾಗಿದೆ. ಕಂಪನಿಯ ಸಿಎನ್‌ಜಿ ವಿತರಣೆಯು ಶೇಕಡಾ 18ರಷ್ಟು ಮತ್ತು ಮನೆಗಳಿಗೆ ಪೂರೈಸುವ ಪಿಎನ್‌ಜಿ ವಿತರಣೆಯು ಶೇ.4 ರಷ್ಟು ಏರಿಕೆ ಆಗಿದೆ. ಕಂಪನಿಯು ಹೊಸದಾಗಿ 5 ಸಿಎನ್‌ಜಿ ಕೇಂದ್ರ ಸ್ಥಾಪಿಸಿದ್ದು, ಗ್ರಾಹಕರ ಸಂಖ್ಯೆಗಳು ಸಹ ಹೆಚ್ಚಾಗಿದೆ. ಒಟ್ಟು 11.41 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ತಲುಪಿದೆ.
ತೈಲ ಬೆಲೆ ಹೆಚ್ಚಳದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ಸಂಗ್ರಹಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಪರಿಣಾಮ ಅದಾನಿ ಟೋಟಲ್ ಗ್ಯಾಸ್‌ನ ಒಟ್ಟು ಅನಿಲ ಖರೀದಿ ಖರ್ಚು ಸಹ (ಶೇ. 39 ) ಹೆಚ್ಚಾಗಿದೆ. ಒಟ್ಟು ದರ 1,454 ಕೋಟಿ ರೂಪಾಯಿ ಮುಟ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ವೆಚ್ಚ ಏರಿಕೆ ಆಗಿದ್ದು, ಭಾರತೀಯ ರೂಪಾಯಿ ಮೌಲ್ಯದ ಕುಸಿತವೂ ಸೇರಿಕೊಂಡು ಈ ಲಾಭದಾಯದ ಮೇಲೆ ನಕಾರಾತ್ಮಕ ಒತ್ತಡ ಉಂಟುಮಾಡಿದೆ ಕಂಪನಿಯ ಹಣಕಾಸು ವರದಿಯಲ್ಲಿ ತಿಳಿಸಲಾಗಿದೆ.
ಪರಿಸರಸ್ನೇಹಿ ಮತ್ತು ಸ್ವಚ್ಛ ಇಂಧನ ಪೂರೈಕೆ ನಿಟ್ಟಿನಲ್ಲಿ ಅದಾನಿ ಕಂಪನಿಯು ಪ್ರಮುಖ ನಿರ್ಧಾರ ಕೈಗೊಂಡಿದೆ. ಉಪ ಸಂಸ್ಥೆಯಾದ ಅದಾನಿ ಟೋಟಲ್ ಎನರ್ಜೀಸ್ ಇ-ಮೊಬಿಲಿಟಿ ಲಿಮಿಟೆಡ್ ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 226 ಪ್ರಮುಖ ನಗರಗಳಲ್ಲಿ ಇವಿ ಚಾರ್ಜಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ.
ಸದ್ಯ ಕಂಪನಿಯು ಒಟ್ಟು 5,306 ಇವಿ ಚಾರ್ಜಿಂಗ್ ಪಾಯಿಂಟ್ ಹೊಂದಿದೆ. ಇದರ ಒಟ್ಟು ವಿದ್ಯುತ್ ಸಾಮರ್ಥ್ಯವು 58 ಮೆಗಾವ್ಯಾಟ್‌ಗೆ ತಲುಪಿದೆ. ಇದಲ್ಲದೆ ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರ ತಯಾರಿಕೆಯ ಉದ್ದೇಶದಿಂದ ಸ್ಥಾಪಿಸಲಾದ ಘಟಕಗಳು ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications
