ತಮಿಳುನಾಡು ಸಿಎಂ ವಿಜಯ್ 'ಜನ ನಾಯಗನ್ ಬಿಡುಗಡೆಗೆ ಕ್ಷಣಗಣನೆ ಬಾಕಿ.. ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸಿದ ಹೊಸ ವಿಡಿಯೋ

CM Vijay's Jana Nayagan: ತಮಿಳುನಾಡಿನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಜನ ನಾಯಗನ್ ಸಿನಿಮಾ ಜುಲೈ 23ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಇದಕ್ಕೂ ಮುನ್ನ ಟೀಸರ್ 18 ಸೆಕೆಂಡ್‌ಗಳ ವಿಡಿಯೋ ಬರೀ ತಮಿಳುನಾಡು ಅಷ್ಟೇ ಅಲ್ಲದೆ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರದ್ದೇ ದೊಡ್ಡ ಚರ್ಚೆ ಆರಂಭವಾಗಿದೆ.

ದಳಪತಿ ವಿಜಯ್ ಅಭಿನಯಿಸಿರುವ 'ಜನ ನಯಾಗನ್' ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕೂ ಮುನ್ನ 18 ನಿಮಿಷದ ಟೀಸರ್ ಬಿಡುಗಡೆ ಮಾಡಿದ್ದು, ಇದನ್ನು ಕೆವಿನ್ ಪ್ರೊಡಕ್ಷನ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.

Jana Nayagan Teaser Goes Viral Thalapathy Vijay s Final Film Creates Massive Buzz Ahead of Release

ದೊಡ್ಡ ಮಟ್ಟದಲ್ಲಿ ಸುದ್ದು ಮಾಡುತ್ತಿರುವ ವಿಡಿಯೋ

ವಿಎನ್ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಣ್ಣ ಝಲಕ್ ವೀಡಿಯೊ ಈಗ ಭಾರಿ ದೊಡ್ಡ ಮಟ್ಟದಲ್ಲಿ ಸುದ್ದು ಮಾಡುತ್ತಿದೆ. ಈ ವೀಡಿಯೊದಲ್ಲಿ ವಿಜಯ್ ರಗಡ್ ಪೊಲೀಸ್ ಅಧಿಕಾರಿಯಾಗಿ, ಕೈದಿಯಾಗಿ ಹಾಗೂ ಕೊನೆಗೆ ಶರ್ಟ್, ಜಾಕೆಟ್ ಧರಿಸಿದ ಮುಖ್ಯಮಂತ್ರಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಒಬ್ಬ ನಟನಿಂದ ರಾಜ್ಯದ ಸಿಎಂ ಆಗುವವರೆಗಿನ ಅವರ ನೈಜ ಪಯಣ'ವನ್ನು ಈ ದೃಶ್ಯಗಳು ಬಿಂಬಿಸುತ್ತಿವೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಚ್.ವಿನೋದ್ ನಿರ್ದೇಶನದ ಈ ಸಿನಿಮಾ ಸಂಕ್ರಾಂತಿ ಹಬ್ಬದ ವೇಳೆಗೆ ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯೊಂದಿಗಿನ ಕಾನೂನು ಹೋರಾಟ ಮತ್ತು ದೀರ್ಘ ಪ್ರಕ್ರಿಯೆಯ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಅಂತಿಮವಾಗಿ ಚಿತ್ರಕ್ಕೆ 'A' ಪ್ರಮಾಣಪತ್ರ ಲಭಿಸಿದದ್ದು, ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ.

2026ರ ಏಪ್ರಿಲ್ ತಿಂಗಳಲ್ಲಿ ಈ ಚಿತ್ರದ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಕೆಲವರನ್ನು ಬಂದಿಸಿದ್ದರು. ಇನ್ನೂ 2023ರ ತೆಲುಗು ಸೂಪರ್ ಹಿಟ್ 'ಭಗವಂತ್ ಕೇಸರಿ' ಸಿನಿಮಾನದ ರಿಮೇಕ್ ಎಂದು ಹೇಳಲಾಗುತ್ತಿರುವ ಈ ಸಿನಿಮಾದಲ್ಲಿ ವಿಜಯ್ ಅವರ ಜೊತೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವಿಜಯ್ ಅವರ ಪೂರ್ಣಪ್ರಮಾಣದ ರಾಜಕೀಯ ಪ್ರವೇಶದ ನಂತರ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾ ಆಗಿದೆ.

ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆ

ಕೆವಿಎನ್ ಪ್ರೊಡಕ್ಷನ್ಸ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಟೀಸರ್ ವೀಡಿಯೊವನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ವಿಜಯ್ ಅಭಿಮಾನಿಗಳು ಮೆಚ್ಚುಗೆಗಳ ಸುರಿಮಳೆಗೈಯುತ್ತಿದ್ದಾರೆ. 'ಒನ್ ಲಾಸ್ಟ್ ಡ್ಯಾನ್ಸ್... ಬೆಳ್ಳಿಪರದೆ ಮೇಲೆ ಕೊನೆಯ ಬಾರಿಗೆ ವಿಜಯ್ ಅವರ ಮ್ಯಾಜಿಕ್ ನೋಡಲು ಸಜ್ಜಾಗಿದ್ದೇವೆ. ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವುದು,' ಖಚಿತ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

'ಜನ ನಾಯಗನ್' ಮುಂಗಡ ಟಿಕೆಟ್ ಬುಕಿಂಗ್ ವಿವರ

ಸಿನಿಮಾ ಬಿಡುಗಡೆಗೆ ಇನ್ನು ಎರಡು ದಿನಗಳು ಬಾಕಿ ಇದೆ. ಈಗಲೇ ಭಾರತದಾದ್ಯಂತ ಮೊದಲ ದಿನದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮೊತ್ತ 16.33 ಕೋಟಿ ರೂಪಾಯಿ ದಾಟಿದೆ.

ಯಾವ ರಾಜ್ಯದಲ್ಲಿ ಅತೀ ಹೆಚ್ಚು ಬುಕಿಂಗ್?

* ತಮಿಳುನಾಡು: ₹6.74 ಕೋಟಿಗೂ ಹೆಚ್ಚು

* ಕರ್ನಾಟಕ: ₹4.88 ಕೋಟಿ

* ಕೇರಳ: ₹1.80 ಕೋಟಿ

ಲಿಯೋ, ಗೋಟ್ ಚಿತ್ರಗಳಿಗೆ ಹೋಲಿಕೆ

ತಮಿಳು ಆವೃತ್ತಿಯೊಂದರಲ್ಲೇ 5,091 ಶೋಗಳಿಂದ ಸುಮಾರು 4.17 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ತೆಲುಗು ಮತ್ತು ಹಿಂದಿ ಭಾಷೆಗಳ ಬುಕಿಂಗ್ ಸಹ ಆರಂಭವಾಗಿದೆ. ವಿಜಯ್ ಅವರ ಹಿಂದಿನ ಹಿಟ್ ಚಿತ್ರಗಳಾದ 'ಲಿಯೋ' (46.36 ಕೋಟಿ ರೂಪಾಯಿ) ಮತ್ತು GOAT (29.83 ಕೋಟಿ ರೂಪಾಯಿ) ಚಿತ್ರಗಳ ಮೊದಲ ದಿನದ ಮುಂಗಡ ಬುಕಿಂಗ್‌ಗೆ ಹೋಲಿಸಿದರೆ 'ಜನ ನಾಯಕನ್' ಸ್ವಲ್ಪ ಹಿನ್ನಡೆಯಲ್ಲಿದೆ. ಈ ಚಿತ್ರದ ಬುಕಿಂಗ್ ನಿಧಾನವಾಗಿ ಆಗುತ್ತಿದ್ದು, ಬಿಡುಗಡೆಯ ದಿನದ ವೇಳೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಮಾಹಿತಿ ಪ್ರಕಾರ, 'ಜನ ನಾಯಗನ್' ಬಿಡುಗಡೆಯ ಮೊದಲ ದಿನವೇ ಭಾರತದಲ್ಲಿ 50 ರಿಂದ 60 ಕೋಟಿ ರೂಪಾಯಿವರೆಗೆ ಕಲೆಕ್ಷನ್ ಮಾಡುವ ಸಾದ್ಯತೆಯಿದೆ. ರಾಜಕೀಯ ಪ್ರವೇಶದ ನಂತರ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಭಾರಿ ನಿರೀಕ್ಷೆ ಹುಟ್ಟುಹಾಕಿರುವ ರಾಜಕೀಯ ಆಕ್ಷನ್ ಸಿನಿಮಾ 'ಜನ ನಾಯಗನ್', ಮೊದಲ ದಿನದ ಪ್ರದರ್ಶನಕ್ಕೆ ವಿಶ್ವಾದ್ಯಂತ 30 ಕೋಟಿಗೂ ಹೆಚ್ಚು ಮುಂಗಡ ಬುಕಿಂಗ್ ಆಗುವ ಮೂಲಕ ಭರ್ಜರಿ ಶುಭಾರಂಭ ಕಂಡಿದೆ. ಭಾರತದಲ್ಲೇ ಇದರ ಪ್ರೀ-ಸೇಲ್ಸ್ 16 ಕೋಟಿ ದಾಟಿದ್ದು, ದೇಶಾದ್ಯಂತ ಚಿತ್ರ ಬಿಡುಗಡೆಯ ಮೊದಲ ದಿನವೇ 50 ರಿಂದ 60 ಕೋಟಿ ರೂಪಾಯಿವರೆಗೆ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+