ನಿರೂಪಣೆಯಿಂದ ಬೆಳ್ಳಿತೆರೆಗೆ! ತುಳುವಿನ 'ಬನ' ಚಿತ್ರದಲ್ಲಿ ಮಾಧ್ಯಮ ದಿಗ್ಗಜ ಜಯಪ್ರಕಾಶ್ ಶೆಟ್ಟಿ; ಪೋಸ್ಟರ್ ರಿಲೀಸ್

ಬೆಂಗಳೂರು: ತುಳುನಾಡಿನ ಆರಾಧ್ಯ ದೈವ ನಾಗರಾಧನೆ ಕುರಿತು ಬಹುನಿರೀಕ್ಷೆಯ 'ಬನ' ಸಿನಿಮಾಗೆ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಿದೆ. ಈ ಚಿತ್ರದಲ್ಲಿ ಎರಡೂವರೆ ವರ್ಷಗಳಿಂದ ಮಾಧ್ಯಮದಲ್ಲಿ ಛಾಪು ಮೂಡಿಸಿರುವ ಹಿರಿಯ ಪತ್ರಕರ್ತ, ವಾರ್ತಾ ವಾಚಕ, ಜನಪ್ರಿಯ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರು ನಟಿಸಿದ್ದಾರೆ. ಈ ಮೂಲಕ ಮಾಧ್ಯಮ ರಂಗಕ್ಕೆ ಸಿಮೀತವಾದೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

'ಬನ' ಚಿತ್ರತಂದ ಪೋಸ್ಟರ್ ರಿಲೀಸ್ ಮಾಡಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸಿನಿಮಾ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಅಕ್ಟೊಬರ್ 23 ರಂದು ಬಿಡುಗಡೆಯಾಗಲಿದೆ ಎಂಬ ಅಪ್ಡೇಟ್ ಮಾಹಿತಿ ಲಭ್ಯವಾಗಿದೆ.

Journalist Jayaprakash Shetty

ಬಹಳ ವರುಷಗಳ ನಂತರ 'ನಾಗ' ಕಥೆಯ ಚಿತ್ರವೊಂದು ತೆರೆಗೆ ಬರಲು ಸಜ್ಜಾಗುತ್ತಿದೆ. ತುಳು ಚಿತ್ರರಂಗದ ಇತಿಹಾಸದಲ್ಲೇ 'ನಾಗ' ಕಥೆಯನ್ನು ಹೊಂದಿರುವ ಮೊದಲ ಚಿತ್ರ ಇದಾಗಿದೆ. ಚಿತ್ರದ ಟ್ರೈಲರ್ ಇದೆ ನಾಗರಪಂಚಮಿ ಹಬ್ಬದಂದು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಈ ಚಿತ್ರದಲ್ಲಿ ಮಾಧ್ಯಮ ಲೋಕದಲ್ಲಿ ಸುಮಾರು 26 ವರ್ಷಗಳ ಅನುಭವ ಹೊಂದಿರುವ ಜಯಪ್ರಕಾಶ್ ಶೆಟ್ಟಿ ಅವರು ನಟಿಸಿದ್ದಾರೆ. ಅವರು ಈಟಿವಿ ಕನ್ನಡ, ಸಮಯ ಟಿವಿ, ಸುವರ್ಣ ನ್ಯೂಸ್ 24/7, ರಿಪಬ್ಲಿಕ್ ಟಿವಿಯಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. 'ಬಿಗ್-3' ಸೇರಿದಂತೆ ಸಾಮಾಜಮುಖಿ ಕಾರ್ಯಕ್ರಮಗಳು, ರಾಜಕೀಯ ಹಾಗೂ ವಿನೂತನ ಕಾರ್ಯಕ್ರಮಗಳನ್ನು ತಮ್ಮದೇ ಆದ ಶೈಲಿಯಲ್ಲಿ ನಿರೂಪಣೆ ಮಾಡಿ ಖ್ಯಾತಿ ಗಳಿಸಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಅವರು ತುಳು ಸಿನಿಮಾದಲ್ಲಿ ನಟಿಸಿದ್ದು, ಅವರು ಇರುವ ಪೋಸ್ಟ್ ಸಾಕಷ್ಟು ಗಮನಸೆಳೆಯುತ್ತಿದೆ.

JP Shetty


ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದೆ ರೂಪ ವರ್ಕಡಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಈಶಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಮನೋಹರ್ ರೈ ವೈಪಾಲ ಚಿತ್ರವನ್ನು ನಿರ್ಮಿಸಿದ್ದು, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಾಗಾರಾಧನೆ ಕುರಿತ ಸಿನಿಮಾ

ಕರಾವಳಿ ಭಾಗದಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ಆಚರಣೆಗಳಲ್ಲಿ ನಾಗಾರಾಧನೆಯು ಒಂದಾಗಿದೆ. ತುಳು ಸಂಪ್ರದಾಯದಲ್ಲಿ ಆಚರಿಸುವ ಈ ಆಚರಣೆಗೆ ಶತಮಾನಗಳ ಇತಿಹಾಸವಿದೆ. ಪರಿಸರ ಸಂರಕ್ಷಣೆ, ಕೃಷಿ ಸಮೃದ್ಧಿ, ಸಂತಾನಾಭಿವೃದ್ಧಿ ಮೂಲ ಉದ್ದೇಶದೊಂದಿಗೆ ಈ ಭಾಗದ ಜನರು ಆಚರಿಸಿಕೊಂಡು ಬರುತ್ತಿರುವ ಪ್ರಮುಖ ಧಾರ್ಮಿಕ ಆಚರಣೆ ಆಗಿದೆ. ಶ್ರದ್ಧಾ ಭಕ್ತಿಯಿಂದ ತುಳು ಜನರು ನಾಗ ಪೂಜಾ ಕೈಂರ್ಯಗಳನ್ನು ಪಾಲ್ಗೊಳ್ಳುತ್ತಾರೆ.

ಪ್ರಕೃತಿ ಮಧ್ಯದಲ್ಲಿ ಸಣ್ಣ ಪವಿತ್ರ ಕಾಡುಗಳನ್ನು 'ನಾಗಬನ' ಎಂದು ಕರೆಯಲಾಗುತ್ತಿತ್ತು. ಮರಗಳ ಕೆಳಗೆ ನಾಗರ ಕಲ್ಲು ಪ್ರತಿಷ್ಠಾಸಿ ಪೂಜಿಸಲಾಗುತ್ತದೆ. ಈ ನಾಗಾರಾಧನೆ ಕುರಿತು ಸಿನಿಮಾ 'ಬನ' ತಯಾರಾಗಿದ್ದು, ಶೀಘ್ರವೇ ಪ್ರೇಕ್ಷರ ಮುಂದೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+