ಬೆಂಗಳೂರು ಫುಟ್‌ಪಾತ್‌ ಕ್ಲೀನ್‌ಅಪ್‌ಗೆ ವೇಗ; ಒತ್ತುವರಿ ತೆರವು ಜೊತೆಗೆ ಅನಾಥ ವಾಹನಗಳ ವಿರುದ್ಧವೂ ಖಡಕ್ ಕ್ರಮ

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಜಿಬಿಎ ವತಿಯಿಂದ ಪಾದಾಚಾರಿ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ. ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂದು ಸಹ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ಒಂದೇ ದಿನ ಬರೋಬ್ಬರಿ 2.10 ಕಿ.ಮೀ.ನಷ್ಟು ಒತ್ತುವರಿ ತೆರವು ಮಾಡಲಾಯಿತು. ಇನ್ನೂ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ನೋಟಿಸ್ ಸಹ ಜಾರಿ ಮಾಡಲಾಯಿತು.

ನಗರದ ಕೆಂಗೇರಿ ಮತ್ತು ಮಹಾಲಕ್ಷ್ಮೀಪುರ ವಿಭಾಗಗಳ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಒತ್ತುವರಿಗಳನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಬೆಳಗ್ಗೆಯಿಂದ ತೆರವುಗೊಳಿಸಲಾಯಿತು. ಈ ವೇಳೆ, 2 ಪೆಟ್ಟಿ ಶಾಪ್‌, 5 ತಳ್ಳುಗಾಡಿ, 1 ಎಸಿ ಶೀಟ್ಸ್ ಪ್ರೊಜೆಕ್ಷನ್ಸ್/‌ ಕ್ಯಾನೊಪಿ, 5 ಮೆಟ್ಟಿಲು ಮತ್ತು ರ್ಯಾಂಪ್‌, 30 ಜಾಹಿರಾತು ಪಿಲ್ಲರ್‌ ಮತ್ತು ಬೋರ್ಡ್‌ಗಳು, 2 ಟನ್‌ ಕಟ್ಟಡ ತ್ಯಾಜ್ಯ/ತ್ಯಾಜ್ಯ ತೆರವುಗೊಳಿಸಲಾಗಿದೆ.

Footpath Encroachments

ಒತ್ತುವರಿ ತೆರವು ಕಾರ್ಯಾಚರಣೆ ವಿವರ

ಕೆಂಗೇರಿ ವಿಭಾಗ: ದೊಡ್ಡಬಿದರಕಲ್ಲು ಉಪ ವಿಭಾಗದ ಇಂದಿರಾನಗರ ಮುಖ್ಯ ರಸ್ತೆ: ಸಿದ್ದಗಂಗಾ ಕಲ್ಯಾಣ ಮಂಟಪ- ಸಿದ್ಧಾರ್ಥ ಶಾಲೆ - 0.2 ಕಿ.ಮೀ; ಹೆರೋಹಳ್ಳಿ ಉಪ ವಿಭಾಗದ ಮರಿಯಪ್ಪನಪಾಳ್ಯ - ಸಿರ್ಕೆ-0.9 ಕಿ.ಮೀ. (ಒಟ್ಟು 1.1 ಕಿ.ಮೀ.)

ಮಹಾಲಕ್ಷ್ಮೀಪುರ ವಿಭಾಗ: ನಾಗಪುರ ಉಪ ವಿಭಾಗದ ಕಂಠೀರವ ಸ್ಟುಡಿಯೋ ರಸ್ತೆ: ರವಿತೇಜ ಪೆಟ್ರೋಲ್‌ ಪಂಪ್‌ - ಡಾ. ರಾಜಕುಮಾರ್‌ ಸ್ಮಾರಕವರೆಗೆ ಒಟ್ಟು ಒಂದು ಕಿಲೋ ಮೀಟರ್ ತೆರವು ಮಾಡಲಾಯಿತು.

ಅನಾಥ ವಾಹನಗಳಿಗೆ ನೋಟಿಸ್, ಟೋಯಿಂಗ್‌, ದಂಡ:

ಜೊತೆಗೆ, ಪಾಲಿಕೆ ಹಾಗೂ ಸಂಚಾರ ಪೊಲೀಸ್‌ ಇಲಾಖೆಯ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ, ಪಾಲಿಕೆ ವ್ಯಾಪ್ತಿಯ ರಸ್ತೆ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ತೆರವು ಕಾರ್ಯಾಚರಣೆ ಅಂಗವಾಗಿ ಇಂದು ಒಟ್ಟು 28 ವಾಹನಗಳಿಗೆ ನೋಟಿಸ್‌ ಅಂಟಿಸಿ ವೀಲ್‌ ಕ್ಲ್ಯಾಂಪಿಂಗ್‌ ಮಾಡಲಾಗಿದೆ.

ಈ ಪೈಕಿ, 25 ನಾಲ್ಕು ಚಕ್ರದ ವಾಹನಗಳು ಹಾಗೂ 3 ದ್ವಿಚಕ್ರ ವಾಹನಗಳಾಗಿದ್ದು, 10 ವಾಹನಗಳು ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ, 8 ವಾಹನಗಳು ಮಲ್ಲೇಶ್ವರಂ, 5 ಪದ್ಮನಾಭನಗರ ಹಾಗೂ 5 ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯದ್ದಾಗಿವೆ.

5 ವಾಹನಗಳ ಟೋಯಿಂಗ್‌

ಅಲ್ಲದೆ, ಕಾರ್ಯಾಚರಣೆಯ ಎರಡನೇ ಹಂತವಾದ ಟೋಯಿಂಗ್‌ ಕೂಡ ಈಗಾಗಲೇ ಆರಂಭವಾಗಿದ್ದು, ಆ ಪ್ರಕಾರ, 5 ವಾಹನಗಳನ್ನು ಟೋಯಿಂಗ್‌ ಮಾಡಲಾಗಿದೆ. ಈ ಪೈಕಿ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2 ವಾಹನಗಳು ಹಾಗೂ ಪದ್ಮನಾಭನಗರ, ಗೋವಿಂದರಾಜನಗರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲಾ ಒಂದೊಂದು ವಾಹನಗಳು ಸೇರಿವೆ ಎಂದು ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ ಹೇಳಿದರು.

3,000 ರೂ. ದಂಡ

ಒಟ್ಟು 3,000 ರೂ. ದಂಡ (ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,000 ರೂ. ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,000 ರೂ.) ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+