ಆಧಾರ್‌ ಕಾರ್ಡ್‌ನಲ್ಲಿ ಚಿಕ್ಕ ವಯಸ್ಸಿನ ಫೋಟೋ: ಶಕ್ತಿ ಯೋಜನೆಯಡಿ ಟಿಕೆಟ್ ಸಿಗದೆ ಬಾಲಕಿಗೆ ಮುಜುಗರ

ರಾಯಚೂರು, ನವೆಂಬರ್‌ 14: ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಿಸುವ ಮಹಿಳೆಯರ ಮೇಲೆ ರಾಯಚೂರಿನ ಸಾರಿಗೆ ಬಸ್‌ವೊಂದರ ಮಹಿಳಾ ನಿರ್ವಾಹಕಿ ದರ್ಪ ಮೆರೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆಧಾರ್ ಕಾರ್ಡ್ ತೋರಿಸಿದರೂ ಹಣ ನೀಡುವಂತೆ ಬಲವಂತವಾಗಿ ಟಿಕೆಟ್ ನೀಡಿ ಬಾಲಕಿಯನ್ನು ಮುಜುಗರಕ್ಕೀಡು ಮಾಡಿದ ಅಮಾನವೀಯ ಘಟನೆ ಲಿಂಗಸುಗೂರು ಮುದಗಲ್ ನಡುವೆ ಮಂಗಳವಾರ ನಡೆದಿದೆ.

ಮಂಗಳವಾರ ಮುದಗಲ್ ತೆರಳಲು ಲಿಂಗಸುಗೂರಿನಲ್ಲಿ ಲಿಂಗಸುಗೂರು ಇಲಕಲ್ ಬಸ್ ಕೆಎ ೩೬ ಎಫ್- 1646 (ಆದರೆ ಟಿಕೆಟ್‌ ಮೇಲೆ ಕೆಇ ೩೬ ಎಫ್-‌ ೧೫೪೯ ಎಂದು ನಮೂದಾಗಿದೆ) ಬಸ್ ಹತ್ತಿದ ಬಾಲಕಿ ಆಧಾರ್ ಕಾರ್ಡ್ ತೋರಿಸಿದರೂ ಆಧಾರ್ ಕಾರ್ಡ್ ನಲ್ಲಿರುವ ಭಾವಚಿತ್ರ ಚಿಕ್ಕ ವಯಸ್ಸಿನದು ಹೀಗಾಗಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಿದಲ್ಲ ಎಂದು ಟಿಕೆಟ್ ಪಡೆಯಲು ಒತ್ತಡ ಹಾಕಿದ್ದಾರೆ.

shakti-yojana-lady-conductor-insult-girl-in-bus

ಶಕ್ತಿ ಯೋಜನೆಯಡಿ ಹೇಗೂ ಉಚಿತ ಪ್ರಯಾಣಕ್ಕೆ ಅವಕಾಶವಿದೆ ಎಂದು ನಂಬಿಕೊಂಡು ಹಣ ಇಲ್ಲದೆ ಬಂದಿದ್ದ ಬಾಲಕಿ ಸಹ ಪ್ರಯಾಣಿಕರ ಎದುರು ಮುಜುಗರ ಪಡುವಂತಾಗಿದೆ ತಾನು ಹಣ ತಂದಿಲ್ಲ ಎಂದು ಹೇಳಿದರೂ ದರ್ಪ ಮೆರೆದ ನಿರ್ವಾಹಕಿ ಬಾಲಕಿಯನ್ನು ಹೀಯಾಳಿಸಿದ್ದಾರೆ ಎನ್ನಲಾಗಿದೆ.

ಸಂಬಂಧಿಕರಿಗೆ ಕರೆ ಮಾಡಿದ ಬಾಲಕಿ ತನ್ನ ಬಳಿ ಹಣ ಇಲ್ಲ ಆಧಾರ್ ಕಾರ್ಡ್ ನಡೆಯುತ್ತಿಲ್ಲ ಎಂದು ಮಾಹಿತಿ ನೀಡಿದ್ದಾ. ಈ ಸಂದರ್ಭದಲ್ಲಿ ಪೋನ್ ಪೇ ಮೂಲಕ ಹಣ ಪಾವತಿ ಮಾಡುವುದಾಗಿ ಬಾಲಕಿಯ ಸಿಬ್ಬಂದಿ ಹೇಳಿದರೂ ಕೇಳದೆ ನಿರ್ವಾಹಕಿ ರಸ್ತೆ ನಡುವೆ ಬಾಲಕಿಯನ್ನು ಬಸ್ ನಿಂದಿ ಇಳಿಸಲು ಮುಂದಾಗಿದ್ದಾರೆ.

ಈ ನಡುವೆ ಟಿಕೆಟ್ ನೀಡುವಂತೆ ಮುದಗಲ್‌ನಲ್ಲಿ ಬಸ್ ಇಳಿಯುತ್ತಿದ್ದಂತೆ ಪರಿಚಯಸ್ಥರಿಂದ ಹಣ ಕೇಳಿ ಪಡೆದು ನೀಡುವುದಾಗಿ ಹೇಳಿದ ನಂತರ ನಿರ್ವಾಹಕಿ ಬಾಲಕಿಯ ಪ್ರಯಾಣಕ್ಕೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ನಡುವೆ ಆಧಾರ್ ಕಾರ್ಡ್ ಮೊಬೈಲ್‌ನಲ್ಲಿ ತೋರಿಸಿದರೂ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಆದೇಶ ಕುರಿತು ಮಾತನಾಡಿದ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಅಧಿಕಾರಿಗಳ ಬಗ್ಗೆ ಅವಹೇಳನಕಾರಿ ಮಾತಾಡಿದ ನಿರ್ವಾಹಕಿ ಅಸಭ್ಯ ವರ್ತನೆ ಮಾಡಿದರು ಎಂದು ಸಹ ಪ್ರಯಾಣಿಕರು ಆರೋಪಿಸಿದರು. ಈ ನಡುವೆ ಸದ್ರಿ ನಿರ್ವಾಹಕಿ ಪ್ರಯಾಣಿಕರೊಂದಿಗೆ ಇದೇ ರೀತಿ ದುರ್ವರ್ತನೆ ತೋರುತ್ತಿರುವ ಕುರಿತು ಪ್ರಯಾಣಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+