ಕ್ಯಾದಿಗೇರಾ ಜಿಪಂ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ನಾಯಕಗೆ ಗೆಲುವು
ರಾಯಚೂರು, ಜೂನ್.17: ಜಿಲ್ಲೆಯ ದೇವದುರ್ಗ ತಾಲೂಕಿನ ಕ್ಯಾದಿಗೇರಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ನಾಯಕ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪ ನಾಯಕ ವಿರುದ್ಧ ಸಂದೀಪ್ ನಾಯಕ 2,353 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪ ನಾಯಕ 8,529 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.
ವೆಂಕಟೇಶ ಪೂಜಾರಿ ರಾಜೀನಾಮೆಯಿಂದ ಕ್ಯಾದಿಗೇರಾ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನ ತೆರವಾಗಿತ್ತು. ಪೂಜಾರಿ ಜಿಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ದೇವದುರ್ಗ ಕ್ಷೇತ್ರದಲ್ಲಿ ಪೂಜಾರಿ ಸ್ಪರ್ಧಿಸಿದ್ದರು.

ಜಿಲ್ಲಾ ಪಂಚಾಯತ ಉಪಚುನಾವಣೆಗೆ ಜೆಡಿಎಸ್ ನಿಂದ ಯಾವ ಅಭ್ಯರ್ಥಿಯೂ ಸ್ಪರ್ಧಿಸಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್'ಗೆ ಜೆಡಿಎಸ್ ಬೆಂಬಲಿಸಿತ್ತು. ಚುನಾಯಿತ ಪ್ರತಿನಿಧಿ ಸಂದೀಪ್ ನಾಯಕ ಸಂಸದ ಬಿ.ವಿ.ನಾಯಕ ಅಳಿಯ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕ್ಯಾದಿಗೇರಾ ಜಿಪಂ ಕ್ಷೇತ್ರದ ಉಪಚುನಾವಣೆಯಲ್ಲಿ ವರ್ಕೌಟ್ ಆಗಿದ್ದು, ಶಾಸಕ ಶಿವನಗೌಡ ಮುಖಭಂಗ ಅನುಭವಿಸಿದ್ದಾರೆ.












Click it and Unblock the Notifications