ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ನಟಿ ರಮ್ಯಾ

ರಾಯಚೂರು, ಅಕ್ಟೋಬರ್ 22: ಸ್ಯಾಂಡಲ್ ವುಡ್ ಮತ್ತು ರಾಜಕಾರಣದಿಂದ ದೂರ ಸರಿದಿದ್ದ ಮೋಹಕ ತಾರೆ ರಮ್ಯಾ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಇತ್ತೀಚಿಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಾಜರ್ ಆಗಿದ್ದ ರಮ್ಯಾ, ಇದೀಗ ರಾಜಕೀಯದಲ್ಲೂ ಶೈನ್ ಆಗುತ್ತಿದ್ದಾರೆ.
ನಟಿ ರಮ್ಯಾ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ರಾಯಚೂರಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಮ್ಯಾ ಹೆಜ್ಜೆ ಹಾಕಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ರಾಜ್ಯದಲ್ಲಿ ಇಂದು ಕೊನೆಯಾಗಲಿದೆ. ಅಂತಿಮ ದಿನ ಈ ಯಾತ್ರೆಯು ರಾಯಚೂರಿನಲ್ಲಿ ಸಖತ್ ಸದ್ದು ಮಾಡಿತ್ತು. ಅದಕ್ಕೆ ಕಾರಣವಾಗಿದ್ದೇ ಮೋಹಕ ತಾರೆ ರಮ್ಯಾ.

Sandalwood Actor Ramya participate in Bharat Jodo Yatra at Raichur

ರಾಹುಲ್ ಗಾಂಧಿ ಜೊತೆಗೆ ರಮ್ಯಾ ಹೆಜ್ಜೆ:
ರಾಯಚೂರು ಮಂತ್ರಾಲಯ ಮಾರ್ಗದ ಐಬಿ ಕಾಲೋನಿಯಿಂದ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದ ವಾಲ್ಕಟ್ ಮೈದಾನದವರೆಗೂ ರಾಹುಲ್ ಗಾಂಧಿ ಜೊತೆಗೆ ನಟಿ ರಮ್ಯಾ ಹೆಜ್ಜೆ ಹಾಕಿದರು. ರಾಹುಲ್ ಗಾಂಧಿಯೊಂದಿಗೆ ಮಾತನಾಡುತ್ತಲೇ ಹೆಜ್ಜೆ ಹಾಕುತ್ತಿದ್ದರೆ, ಮೋಹಕ ತಾರೆಯನ್ನು ನೋಡುವುದಕ್ಕೆ ಜನರ ಗುಂಪು ಸೇರುತ್ತಿತ್ತು. ಇನ್ನೊಂದು ಮಗ್ಗಲಿನಲ್ಲಿ ರಸ್ತೆಯ ಎಡಭಾಗಕ್ಕೆ ಎಂದಿನಂತೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ, ನೆರೆೆದಿದ್ದ ಜನರ ಕಡೆಗೆ ಕೈ ಬೀಸುತ್ತಾ ನಡೆೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+