ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಹೊಸ ದಾಖಲೆ ತಲುಪಿದ ವಿದ್ಯುತ್ ಬೇಡಿಕೆ

|
Google Oneindia Kannada News

ರಾಯಚೂರು, ನವೆಂಬರ್ 8: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೊಸ ದಾಖಲೆ ಮಟ್ಟವನ್ನು ತಲುಪಿದೆ. ಈವರೆಗೆ ಬೇಡಿಕೆ ಪ್ರಮಾಣ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟಿತ್ತು. ಆದರೆ ನ.6ರಂದು ವಿದ್ಯುತ್ ಬೇಡಿಕೆ 11,052 ಮೆಗಾ ವ್ಯಾಟ್ ತಲುಪಿರುವುದು ಈವರೆಗಿನ ದಾಖಲೆಯಾಗಿದೆ.

ದೀಪಾವಳಿ ವಿಶೇಷ ಪುರವಣಿ

ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿರುವ ಮುಚ್ಚುವ ಹಂತದಲ್ಲಿರುವ ಶಾಖೋತ್ಪನ್ನ ಘಟಕಗಳಿಗೆ ಇದು ದೊಡ್ಡ ಹೊಡೆತವೆಂದೇ ಹೇಳಬಹುದು. ಅದರಲ್ಲೂ ಅಕ್ಟೋಬರ್ ಅಂತ್ಯ ನವೆಂಬರ್ ಆರಂಭದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ? ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ?

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 10,888 ಮೆಗಾ ವ್ಯಾಟ್ ಬೇಡಿಕಯೇ ಅತ್ಯಂತ ಗರಿಷ್ಠ ಮಟ್ಟದ್ದಾಗಿತ್ತು. ಈ ಸಾಲಿನಲ್ಲಿ ಚಳಿಗಾಲದಲ್ಲಿ ಹಗಲಿನಲ್ಲೇ ಬೇಡಿಕೆ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟುತ್ತಿರುವುದು ಕೆಪಿಸಿಗೆ ತಲೆ ನೋವಾಗಿ ಪರಿಣಮಿಸಿದೆ.

ದೀಪಾವಳಿ ಹಿನ್ನೆಲೆಯಲ್ಲಿ ವಿದ್ಯುತ್ ಅಲಂಕಾರ ಮಾಡಿರುವ ಕಾರಣಕ್ಕೆ ವಾಣಿಜ್ಯ ಬಳಕೆ ಮತ್ತು ಗೃಹ ಬಳಕೆ ಬೇಡಿಕೆಯಲ್ಲಿ ಹೆಚ್ಚಳವಾಗಿ ನವೆಂಬರ್ 6ರ ಬೆಳಗ್ಗೆ 10.45ಕ್ಕೆ ಗರಿಷ್ಠ 11.052 ಮಗೆ ವ್ಯಾಟ್ ಬೇಡಿಕೆ ತಲುಪಿದೆ.

ಬುಧವಾರವೂ ಕೂಡ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟಿತ್ತು ಇನ್ನು ಗುರುವಾರ ದೀಪಾವಳಿ ಆಚರಣೆ ಇರುವುದರಿಂದ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

 ಸಂಕಷ್ಟದಲ್ಲಿವೆ ಶಾಖೋತ್ಪನ್ನ ಕೇಂದ್ರಗಳು

ಸಂಕಷ್ಟದಲ್ಲಿವೆ ಶಾಖೋತ್ಪನ್ನ ಕೇಂದ್ರಗಳು

ದೇಶದಲ್ಲಿರುವ 7ಕ್ಕಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹ 9 ಕೇಂದ್ರಗಳಲ್ಲಿದೆ. ಅದೇ ರೀತಿ ದೇಶದ 22 ಶಾಖೋತ್ಪನ್ನ ಕೇಂದ್ರಗಳಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಅದರಲ್ಲಿ ರಾಜ್ಯದ ಶಕ್ತಿನಗರ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಸೇರಿವೆ.

ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು? ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?

 ಜಲವಿದ್ಯುತ್ ಘಟಕ ಹೇಗಿದೆ

ಜಲವಿದ್ಯುತ್ ಘಟಕ ಹೇಗಿದೆ

ಮಳೆಗಾಲದಲ್ಲ ವಿದ್ಯುತ್ ಬೇಡಿಕೆ ಭರಾಟೆಗೆ ಬೆಚ್ಚಿರುವ ಸರ್ಕಾರ ಅನಿವಾರ್ಯವಾಗಿ ಜಲವಿದ್ಯುತ್ ಬಳಕೆಗೆ ಒತ್ತು ನೀಡಿದೆ. ರಾಜ್ಯದಲ್ಲಿ ಕಳೆದೆರೆಡು ದಿನಗಳಲ್ಲಿ ಪ್ರಮುಖ ಜಲವಿದ್ಯುತ್ ಕೇಂದ್ರಗಳಾದ ಶರಾವತಿ, ವರಾಹಿ, ಸೂಪಾ, ಶಿವನಸಮುದ್ರ ಸೇರಿ ಅನೇಕ ಜಲವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸಲಾಗಿದೆ.

ಕಲ್ಲಿದ್ದಲು ಸ್ಟಾಕ್ ಇಲ್ಲ, ಏನು ಮಾಡುತ್ತೆ ಸರ್ಕಾರ

ಕಲ್ಲಿದ್ದಲು ಸ್ಟಾಕ್ ಇಲ್ಲ, ಏನು ಮಾಡುತ್ತೆ ಸರ್ಕಾರ

ಕಲ್ಲಿದ್ದಲು ಗಣಿ ಇರುವ ಪ್ರದೇಶದ ತೀರಾ ಹತ್ತಿರವಿರುವ ಕೆಲವೇ ಕೆಲವು ಶಾಖೋತ್ಪನ್ನ ಘಟಕಗಳಲ್ಲಿ ಮಾತ್ರ ಸರಾಸರಿ 20ರಿಂದ 40 ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಇನ್ನುಳಿದಂತೆ ದೂರದ ಪ್ರದೇಶಗಳಲ್ಲಿರುವ ಕೇಂದ್ರಗಳಲ್ಲಿ ಒಂದು ವಾರಕ್ಕಾಗುವಷ್ಟು ಕಲ್ಲಿದ್ದಲೂ ಕೂಡ ಇಲ್ಲ.

 ದೇಶನ 112 ಶಾಖೋತ್ಪನ್ನ ಕೇಂದ್ರದಲ್ಲಿಲ್ಲ ಕಲ್ಲಿದ್ದಲು

ದೇಶನ 112 ಶಾಖೋತ್ಪನ್ನ ಕೇಂದ್ರದಲ್ಲಿಲ್ಲ ಕಲ್ಲಿದ್ದಲು

ದೇಶದಲ್ಲಿ 112 ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಕೇಂದ್ರಗಳಲ್ಲಿ ಬಹುತೇಕ ಕಡೆ ಕಲ್ಲಿದ್ದಲು ಸಂಗ್ರಹ ನೆಲಕಚ್ಚಿದೆ ಕೇಂದ್ರ ಸರ್ಕಾರದ ವಿದ್ಯುತ್ ಪ್ರಾಧಿಕಾರದ ಮೂಲಗಳಿಂದ ತಿಳಿದುಬಂದಿದೆ. ದಿನದ ಬೇಡಿಕೆ 9 ಸಾವಿರ ಮೆಗಾ ವ್ಯಾಟ್ ದಾಟಿದೆ.

English summary
Even much before the summer season, consumption of electricity in the state has reached record 11,052 MW on Wednesday. Usually there was demand of around 10k MW in the winter season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X