Bengaluru Weather: ಇಂದು ಬೆಂಗಳೂರಿನಾದ್ಯಂತ ಸುರಿದ ಮಳೆ, ವೀಕೆಂಡ್ ಮೋಜಿಗೆ ಬ್ರೇಕ್: ಮುನ್ಸೂಚನೆ ಹೀಗಿದೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಮಳೆ (Bengaluru Monsoon Rain) ಅಬ್ಬರಿಸುತ್ತಿದೆ. ಇಂದು ಭಾನುವಾರ ಸಂಜೆ 4 ಗಂಟೆ ಹೊತ್ತಿಗೆ ಬಿಸಿಲಿ ಸಂಪೂರ್ಣ ಮರೆಯಾಗಿ ಮಳೆ ಸುರಿಯಲು ಆರಂಭಿಸಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ವೀಕೆಂಡ್ ಮೋಜು ಮಸ್ತಿಗೆ ಪ್ಲ್ಯಾನ್ ಮಾಡಿದವರಿಗೆ ನಿರಾಶೆ ಮೂಡಿಸಿದೆ. ನಗರಾದ್ಯಂತ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಜನರು ಮನೆಯಿಂದ ಕಾಲಿಡದಂತಹ ಸ್ಥಿತಿ ಇದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ.

ನಗರದಲ್ಲಿ ಸಂಜೆ 5.30ರವರೆಗೆ ಬರೋಬ್ಬರಿ 92 ವಾರ್ಡ್‌ಗಳಲ್ಲಿ ಮಳೆ ಸುರಿದಿದ್ದು, ವರುಣನ ಅಬ್ಬರ ತಡರಾತ್ರಿವರೆಗೂ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ. ವೈಟ್‌ಫಿಲ್ಡ್, ಮಾರತ್ತಹಳ್ಳಿ, ಸಿಲ್ಕ್‌ ಬೊರ್ಡ್, ನಾಯಂಡಹಳ್ಳಿ, ನಾಗಪುರ, ವಿಂಡ್ಸರ್ ಮ್ಯಾನರ್ ಬಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಕಿರಿ ಕಿರಿ ಉಂಟಾಯಿತು. ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಸಂಚಾರ ನಿಧಾನಗತಿಯಲ್ಲಿತ್ತು.

Bengaluru Weather

ಪ್ರಮುಖ ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್

ವಿಂಡ್ಸರ್‍‌ ಮ್ಯಾನರ್ ಬಳಿ ಇರುವ ರೈಲ್ವೆ ಅಂಡರ್ ಪಾಸ್ ನಲ್ಲಿ ಅಡಿಗೂ ಹೆಚ್ಚು ನೀರು ನಿಂತಿದ್ದು, ಬಸ್‌, ಬೈಕ್‌ಗಳ ಸಂಚಾರ ಕಷ್ಟವಾಯಿತು. ಸವಾರರು ಜೀವಭಯದಲ್ಲಿ ಉಕ್ಕಿಹರಿದ ಕೊಳಚೆ ನೀರಿನಲ್ಲಿ ಸಂಚಾರ ಮಾಡಿದ ದೃಶ್ಯಗಳು ಸಾಮಾನ್ಯವಾಗಿದ್ದವು. ಅದೇ ರೀತಿ ಸಿಬಿಐ ಅಪ್ಪ ರ್‍ಯಾಂಪ್ ಬಳಿ ರಸ್ತೆ, ಹೊಸಕೋಟೆ ಕಡೆ ಹೊರಡುವ ದೇವಸಂದ್ರ ಜಂಕ್ಷನ್, ವೈಟ್‌ಫಿಲ್ಡ್, ಎಚ್‌ಆರ್‍‌ ಬಡಾವಣೆ, ಆಗರ, ಔಟರ್ ರಿಂಗ್ ರಸ್ತೆ ಮೇಲೆ ನೀರು ನಿಂತು ಸುಗಮ ಸಂಚಾರ ಸಾಧ್ಯವಾಗದೇ ಜನ ಪರದಾಡಿದರು. ಅಲ್ಲಲ್ಲಿ ವಾಹನಗಳು ಮುಂದೆ ಚಲಿಸಲಾಗದೇ ರಸ್ತೆಯುದ್ದಕ್ಕೂ ನಿಂತಿದ್ದು, ವಾಹನಗಳ ದಟ್ಟಣೆ ಕಂಡು ಬಂತು.

Bengaluru Rains: ನಗರದ 92 ವಾರ್ಡ್‌ಗಳಲ್ಲಿ ಜೋರು ಮಳೆ, ಸಂಚಾರ ತೊಂದರೆ: ಭಾನುವಾರ ಯೆಲ್ಲೋ ಅಲರ್ಟ್
Bengaluru Rains: ನಗರದ 92 ವಾರ್ಡ್‌ಗಳಲ್ಲಿ ಜೋರು ಮಳೆ, ಸಂಚಾರ ತೊಂದರೆ: ಭಾನುವಾರ ಯೆಲ್ಲೋ ಅಲರ್ಟ್

ಈ ಭಾಗಗಳಲ್ಲಿ ಅತ್ಯಧಿಕ ಮಳೆ..

ನಾಯಂಡಹಳ್ಳಿಯಲ್ಲಿ ಗರಿಷ್ಠ 46 ಮಿಲಿ ಮೀಟರ್ ಮಳೆ ಬಿದ್ದಿದೆ. ಉಳಿದಂತೆ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ 40. 5 ಮಿಲಿ ಮೀಟರ್, ರಾಜಾರಜೇಶ್ವರಿ ನಗರ-2 38 ಮಿಲಿ ಮೀಟರ್, ಕೆಂಗೇರಿ 36.5 ಮಿಲಿ ಮೀಟರ್, ದೊಡ್ಡ ಬಿದರಕಲ್ಲು 35.5 ಮಿಲಿ ಮೀಟರ್, ಬಸವೇಶ್ವರ ನಗರ 28.5 ಮಿಲಿ ಮೀಟರ್, ಹಂಪಿನಗರ 28.5 ಮಿಲಿ ಮೀಟರ್, ಹಾರೋಹಳ್ಳಿ 28 ಮಿಲಿ ಮೀಟರ್, ಅರಕೆರೆ ಮತ್ತು ನಾಗಪುರ 25 ಮಿಲಿ ಮೀಟರ್, ಬಗಲಗುಂಟೆ 19 ಮಿಲಿ ಮೀಟರ್, ಬಿಳೇಕಹಳ್ಳಿ ಮತ್ತು ಹೊರಮಾವು-2 ತಲಾ 17.5 ಮಿಲಿ ಮೀಟರ್, ವಿವಿ ಪುರಂ 16 ಮಿಲಿ ಮೀಟರ್, ವಿ.ನಾಗೇನಹಳ್ಳಿ 14.5 ಮಿಲಿ ಮೀಟರ್, ಹಗದೂರು 14.5 ಮಿಲಿ ಮೀಟರ್, ಪಟ್ಟಾಭಿರಾಮನಗರ 13 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಕರ್ನಾಕಟ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿಯಲ್ಲಿ ತಿಳಿಸಿದೆ.

ಇನ್ನುಳಿದಂತೆ ಚಾಮರಾಜಪೇಟೆ, ಬಾಣಸವಾಡಿ, ಕಾಡುಗೋಡಿ, ಕೆ.ಆರ್.ಪುರಂ, ಕೋರಮಂಗಳ, ಸರ್ಜಾಪುರ ರಸ್ತೆ, ಜಕ್ಕಸಂದ್ರ, ಬೆಳ್ಳಂದೂರು, ಹಲಸೂರು, ಹಳೇ ಮದ್ರಾಸ್ ರಸ್ತೆ, ಹೆಬ್ಬಾಳ ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆ ಆಗಿದ್ದು, ನಗರ ತುಂಬೆಲ್ಲ ತಂಪು ಹಾಗೂ ಚಳಿ ವಾತಾವರಣ ನಿರ್ಮಾಣವಾಗಿದೆ. ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದ ಬಗ್ಗೆ ವರದಿ ಆಗಿದೆ.

Viral: ಬೆಂಗಳೂರಲ್ಲಿ ಜಾಗಿಂಗ್ ವೇಗಕ್ಕಿಂತ ನಿಧಾನ ಸಂಚಾರ: ಉದ್ಯಮಿಯ ಟ್ರಾಫಿಕ್ ಪೋಸ್ಟ್ ಭಾರೀ ವೈರಲ್
Viral: ಬೆಂಗಳೂರಲ್ಲಿ ಜಾಗಿಂಗ್ ವೇಗಕ್ಕಿಂತ ನಿಧಾನ ಸಂಚಾರ: ಉದ್ಯಮಿಯ ಟ್ರಾಫಿಕ್ ಪೋಸ್ಟ್ ಭಾರೀ ವೈರಲ್

ಬೆಂಗಳೂರು ಮಳೆ ಮುನ್ಸೂಚನೆ ಹೀಗಿದೆ

ಬೆಂಗಳೂರಿನಾದ್ಯಂತ ಚುರುಕು ಪಡೆದ ಮುಂಗಾರು ಮಳೆ ಇನ್ನು ಕೆಲವು ದಿನಗಳ ಕಾಲ ಇದೇ ರೀತಿ ಮುಂದುವರಿಯಲಿದೆ. ನಿತ್ಯ ಸಂಜೆ ನಂತರ ಜೋರು ಮಳೆಯ ನಿರೀಕ್ಷೆ ಇದೆ. ಕೆಲವು ದಿನಗಳಿಂದ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದ್ದು, ಮುಂದಿನ ಮೂರು ದಿನ ಇದೇ ವಾತಾವರಣ ಕಾಣಸಿಗಲಿದೆ. ಕೆಲವೆಡೆ ಗುಡುಗು ಸಹಿತ ಜೋರು ಮಳೆ, ಇನ್ನು ಹಲವೆಡೆ ಧಾರಾಕಾರ ಮಳೆ ಕಂಡು ಬರಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+