ಇಟಲಿಯಿಂದ ಬಂದಿದ್ದ ರಾಯಚೂರು ವ್ಯಕ್ತಿಯಲ್ಲಿ ಕೊರೊನಾ ನೆಗಟಿವ್
ರಾಯಚೂರು, ಮಾರ್ಚ್ 16: ಇಟಲಿಯಿಂದ ಮರಳಿದ್ದ ವ್ಯಕ್ತಿಯ ಗಂಟಲು ಮಾದರಿ ಪರೀಕ್ಷೆಯಲ್ಲಿ ಕೊರೊನಾ ವೈರಸ್ ನೆಗಟಿವ್ ಬಂದಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ನಿವಾಸಿಯು ಇತ್ತೀಚಿಗೆ ರಾಯಚೂರಿಗೆ ಆಗಮಿಸಿದ್ದರು. ಅವರು ರಾಯಚೂರಿನ ರಿಮ್ಸ್ ಆಸ್ಪತ್ರೆಯ ಕೊರೊನಾ ವಿಶೇಷ ವಾರ್ಡ್ ನಲ್ಲಿ ದಾಖಲಾಗಿದ್ದರು.
ಆ ವ್ಯಕ್ತಿಯ ಗಂಟಲು ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಐದು ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದನು.

ಇನ್ನೂ ಇಬ್ಬರ ಲ್ಯಾಬ್ ವರದಿ ಇಂದು ಸಂಜೆಯೊಳಗೆ ಬರುವ ನೀರಿಕ್ಷೆಯಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಮೂರು ಜನರನ್ನು ಸಂಶಯದ ಮೇರೆಗೆ ದಾಖಲಿಸಲಾಗಿದೆ. ವಿದೇಶದಿಂದ ಮರಳಿದ ರಾಯಚೂರು ಜಿಲ್ಲೆಯ 28 ಜನರ ಮೇಲೆ ನಿಗಾ ಇಡಲಾಗಿದೆ.












Click it and Unblock the Notifications