Breaking :ಸಿಂಧನೂರು ಭೀಕರ ರಸ್ತೆ ಅಪಘಾತ: ಒಂದೇ ಕಟುಂಬದ ನಾಲ್ವರು ಸಾವು
ರಾಯಚೂರು, ಜುಲೈ 18: ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ ಮೂಲದ ಒಂದೇ ಕಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಸಿಂಧನೂರು ತಾಲೂಕಿನ ಜವಳಗೇರಾ ಹತ್ತಿರದ ಬಾಲಯ್ಯ ಕ್ಯಾಂಪ್ ಬಳಿ ಸಂಭವಿಸಿದೆ.
ಪ್ರದೀಪ್ ಸಕ್ಸೇನಾ (30), ಆತನ ಪತ್ನಿ ಪೂರ್ಣಿಮಾ ಸಕ್ಸೇನಾ(30) ಹಾಗೂ ಮಕ್ಕಳಾದ ಜತೀನ್ ಸಕ್ಸೇನಾ (12), ಮಾಹೀನ್ ಸಕ್ಸೇನಾ(7) ದಾರುಣವಾಗಿ ಮೃತಪಟ್ಟಿದ್ದಾರೆ. ಗೋವಾದಿಂದ ಹೈದರಾಬಾದ್ಗೆ ವಾಪಸ್ಸಾಗುತ್ತಿದ್ದಾಗ ಮುಂಜಾನೆ 6 ಘಂಟೆ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಲಾರಿಗೆ ಡಿಕ್ಕಿ ಹೊಡೆದ ರಬಸಕ್ಕೆ ಕೆಂಪು ಬಣ್ಣದ ಆಲ್ಟೋ ಕಾರು ಲಾರಿಯ ಒಳಗೆ ಸೇರಿಕೊಂಡಿತ್ತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಜೆಸಿಬಿ ಮೂಲಕ ಕಾರನ್ನು ಹೊರ ತೆಗೆದು ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಬೆಂಗಳೂರಿನಿಂದ ಹೈದ್ರಾಬಾದ್‌ನತ್ತಾ ಸಾಗುತ್ತಿದ್ದ ಕೆಂಪು ಬಣ್ಣದ ಟಿ.ಎಸ್.08 ಹೆಚ್.ಜಿ.5584 ನಂಬರಿನ ಆಲ್ಟೋ ಕಾರು ಮತ್ತು ಎ.ಪಿ.21 - 6498 ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದಂತೆ ಲಾರಿಯ ಚಾಲಕ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications