ಡ್ರಗ್ಸ್ ಮಾಹಿತಿ ಕೊಟ್ರೆ ಪಾಲು ಕೊಡ್ತೀರಾ? ಎಂದವನಿಗೆ ದಂಗು ಬಡಿಸಿದ ಪೊಲೀಸರು

ಪುಣೆ, ಜನವರಿ 02: ಡ್ರಗ್ಸ್‌ ಇರುವ ತಾಣಗಳ ಬಗ್ಗೆ ಮಾಹಿತಿ ಕೊಡುತ್ತೇನೆ ನನಗೆ ಪಾಲು ಕೊಡುತ್ತೀರಾ? ಎಂದು ಕೇಳಿದವನಿಗೆ ಪುಣೆ ಪೊಲೀಸರು ನೀಡಿರುವ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಹೊಸ ವರ್ಷದ ಹಿಂದಿನ ದಿನ ಟ್ವೀಟ್ ಮಾಡಿದ್ದ ಪುಣೆ ಪೊಲೀಸರು, 'ಡ್ರಗ್ಸ್‌ ರಹಿತ ಜೀವನ ಹೊಸ ವರ್ಷದ ಸಂಕಲ್ಪ ಆಗಿರಲಿ, ಸೇ ನೋ ಟು ಡ್ರಗ್ಸ್‌' ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬ, 'ಡ್ರಗ್ಸ್ ಅಡ್ಡೆಗಳ ಬಗ್ಗೆ ಮಾಹಿತಿ ಕೊಡುತ್ತೀನಿ, ನೀವು ವಶಪಡಿಸಿಕೊಳ್ಳುವ ಡ್ರಗ್ಸ್‌ನಲ್ಲಿ ಸ್ವಲ್ಪ ಭಾಗ ನನಗೆ ಕೊಡುತ್ತೀರಾ?' ಎಂದು ಕಾಲೆಳೆಯುವ ಪ್ರಶ್ನೆ ಮಾಡಿದ್ದಾನೆ.

Pune Police Gives Bitter Reply To Man Who Try To Troll Them

ಇದಕ್ಕೆ ಅದ್ಭುತ ಪ್ರತಿಕ್ರಿಯೆ ನೀಡಿರುವ ಪುಣೆ ಪೊಲೀಸರು, 'ಸ್ವಲ್ಪ ಏಕೆ?, ಪೂರ್ತಿ ಡ್ರಗ್ಸ್‌ ಅನ್ನು ನೀವೇ ಇಟ್ಟುಕೊಳ್ಳಿ, ನಾವು ನಿಮ್ಮನ್ನು ಇಟ್ಟುಕೊಳ್ಳುತ್ತೇವೆ ಅಷ್ಟೆ' ಎಂದಿದ್ದಾರೆ.

ಅದೇ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ವ್ಯಕ್ತಿ, 'ಸರ್ ಎಲ್‌ಎಸ್‌ಡಿ (ಒಂದು ಮಾದರಿಯ ಡ್ರಗ್ಸ್‌) ಗೆ ಅನುಮತಿ ಇದೆಯೇ?' ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಪುಣೆ ಪೊಲೀಸರು, 'ಎಲ್ಲಿ ಸಿಗುತ್ತದೆ ಹೇಳಿ?' ಎಂದು ಪ್ರಶ್ನಿಸಿದ್ದಾರೆ.

ಪುಣೆ ಪೊಲೀಸರು ನೀಡಿರುವ ಈ ವ್ಯಂಗ್ಯದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಪುಣೆ ಪೊಲೀಸರು ಪ್ರತಿಕ್ರಿಯೆಯನ್ನು ಮೆಚ್ಚಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈ ಹಿಂದೆಯೂ ಪುಣೆ ಪೊಲೀಸರು ತಮ್ಮ ಕ್ರಿಯಾಶೀಲ ಟ್ವೀಟ್‌ಗಳಿಂದ ಗಮನ ಸೆಳೆದಿದ್ದಾರೆ. ಮಾಹಿತಿಯನ್ನು ವ್ಯಂಗ್ಯ, ಹಾಸ್ಯದ ಮೂಲಕ ಹೇಳುವುದು ಪುಣೆ ಪೊಲೀಸರ ವೈಶಿಷ್ಟ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+