ಮಂಗನಾಟಕ್ಕೆ ಕನ್ಯೆಯಾಗಿಯೇ ಉಳಿದ ಈ ಊರಿನ ಯುವತಿಯರು: ಕತೆ ಕೇಳಿದ್ರೆ ಬೆಚ್ಚಿ ಬೀಳ್ತೀರ
ಪಾಟ್ನಾ, ಜನವರಿ 27: ಈ ಊರಲ್ಲಿ ಮದುವೆ ನಡೆಯಲ್ಲ, ಶ್ರಾದ್ಧವೂ ನಡೆಯಲ್ಲ, ಈ ಊರಿನ ಹೆಣ್ಣುಮಕ್ಕಳನ್ನು ಮದುವೆಯಾಗಲು ಯಾರೂ ಕೂಡ ತಯಾರಿಲ್ಲ. ಊರಿನ ಯುವತಿಯರೆಲ್ಲರೂ ಕನ್ಯೆಯಾಗಿಯೇ ಉಳಿದಿದ್ದಾರೆ.
ನೀವು ಇಲ್ಲಿಯವರೆಗೆ ಇಂಥಾ ಊರನ್ನು ಈ ಮೊದಲು ನೋಡಿರಲು ಸಾಧ್ಯವೇ ಇಲ್ಲ, ಎಲ್ಲಾ ಪೋಷಕರು ತಮ್ಮ ಹೆಣ್ಣುಮಕ್ಕಳು ಮದುವೆಯಾಗಿ ಸಂತೋಷವಾಗಿರಲಿ ಎಂದು ಬಯಸುತ್ತಾರೆ.
ಆದರೆ ಈ ಊರಿನ ಹೆಣ್ಣುಮಕ್ಕಳೆಲ್ಲರೂ ಕನ್ಯೆಯಾಗಿಯೇ ಉಳಿದಿದ್ದಾರೆ. ಯಾರಿಗೂ ಮದುವೆಯಾಗಿಲ್ಲ ಇದಕ್ಕೆ ಕಾರಣ ಇಲ್ಲಿದೆ.ಬಿಹಾರದಿಂದ 75 ಕಿ.ಮೀ ದೂರದಲ್ಲಿರುವ ಪಾಟ್ನಾದ ಭೋಜ್‌ಪುರ ಹಳ್ಳಿಯ ಕಥೆ ಇದು. ಈ ಊರಿನಲ್ಲಿರುವ ಮಂಗಗಳ ಕಾಟದಿಂದಾಗಿ ಇಲ್ಲಿರುವ ಯಾವುದೇ ಹೆಣ್ಣುಮಕ್ಕಳಿಗೂ ಮದುವೆಯಾಗುತ್ತಿಲ್ಲ.
Recommended Video

ಇದು ಕೇಳಲು ಬಾಲಿಷವೆನಿಸಿದರೂ ಸತ್ಯ. ರತನ್‌ಪುರ ಎಂಬ ಹಳ್ಳಿಯಲ್ಲಿ ಕೋತಿಗಳು ಉಗ್ರರಂತೆ ಕಾಟ ಕೊಡುತ್ತಿವೆ. ಒಂದೊಮ್ಮೆ ಅಲ್ಲಿ ಮದುವೆ ಕಾರ್ಯ ನಡೆಯಿತು ಎಂತಾದರೆ ಅಲ್ಲಿಗೆ ಬಂದಿದ್ದ ಜನರ ಪರಿಸ್ಥಿತಿಯನ್ನು ಊಹಿಸಲೂ ಕೂಡ ಸಾಧ್ಯವಿಲ್ಲ. ಮೈಮೇಲೆ ಬಿದ್ದು ಮುಖವನ್ನು ಪರಚಿ, ಅಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಮದುವೆ ನಿಲ್ಲಿಸಿಯೇ ಅವುಗಳು ಹೋಗುತ್ತವೆ.
ಒಂದು ಬಾರಿ ಮದುಮಗಳನ್ನು ಕೂರಿಸಿಕೊಂಡು ಮೆರವಣಿಗೆಯೊಂದು ಹೊರಟಿತ್ತು, ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆ ಶಬ್ಧವನ್ನು ಕೇಳಿ ಅಲ್ಲಿಗೆ ಬಂದಿದ್ದ ಕೋತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಲವರನ್ನು ಕೊಂದು ಹಾಕಿದ್ದವು.
ಆ ಊರಿನಲ್ಲಿ ಮನುಷ್ಯರಿಗಿಂತ ಕೋತಿಗಳ ಸಂಖ್ಯೆಯೇ ಹೆಚ್ಚಿದೆ. ಕೇವಲ ಮದುವೆ ಮಾತ್ರವಲ್ಲ, ಹುಟ್ಟುಹಬ್ಬ, ಶ್ರಾದ್ಧವನ್ನು ಕೂಡ ಇಲ್ಲಿಯವರು ಆಚರಣೆ ಮಾಡುವುದಿಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರೆದಿದೆ.












Click it and Unblock the Notifications