• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಸಿನ್ಹಾ ರಾಜೀನಾಮೆ

|
Google Oneindia Kannada News

ಪಾಟ್ನಾ, ಆಗಸ್ಟ್ 24: ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ವಿಜಯ್ ಕುಮಾರ್ ಸಿನ್ಹಾ ಅವರು ರಾಜೀನಾಮೆ ನೀಡಿದ್ದಾರೆ.

ವಿಜಯ್ ಕುಮಾರ್ ಸಿನ್ಹಾ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯುವುದರೊಂದಿಗೆ ವಿಧಾನಸಭೆ ಅಧಿವೇಶನ ಆರಂಭವಾಯಿತು. ಮಹಾಘಟಬಂಧನ್ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದ ಕೂಡಲೇ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.

ಬಿಹಾರದಲ್ಲಿ ವಿಶ್ವಾಸಮತ: ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಬಿಜೆಪಿ ನಾಯಕಬಿಹಾರದಲ್ಲಿ ವಿಶ್ವಾಸಮತ: ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಬಿಜೆಪಿ ನಾಯಕ

ಅವರ ವಿರುದ್ಧದ ಆರೋಪಗಳು "ಸ್ವೀಕಾರಾರ್ಹವಲ್ಲ" ಎಂದು ಹೇಳಿದ ಅವರು, ರಾಜೀನಾಮೆ ನೀಡುವ ಮೊದಲು ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲು ಬಯಸಿದ್ದೇನೆ ಎಂದು ಸಿನ್ಹಾ ಹೇಳಿದರು. ಹಿರಿಯ ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ಅವರನ್ನು ಹೊಸ ಸ್ಪೀಕರ್ ಆಗಿ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಪಕ್ಷದ ಮುಖ್ಯಸ್ಥ ಲಾಲು ಯಾದವ್ ಅವರ ಅಧಿಕಾರಾವಧಿಯಲ್ಲಿ ನಡೆದ ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರ್‌ಜೆಡಿ ನಾಯಕರಾದ ಸುನೀಲ್ ಸಿಂಗ್, ಡಾ ಫೈಯಾಜ್ ಅಹ್ಮದ್ ಮತ್ತು ಅಶ್ಫಾಕ್ ಕರೀಮ್ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಜೆಡಿ ಸಂಸದ ಮನೋಜ್ ಝಾ, ಇದು ಊಹಿಸಬಹುದಾದ ಮತ್ತು ಬಿಜೆಪಿಯ ಆಜ್ಞೆಯ ಮೇರೆಗೆ ನಡೆದ ದಾಳಿಗಳು ಎಂದು ಆರೋಪಿಸಿದ್ದಾರೆ.

ಅಧಿವೇಶನ ಆರಂಭಕ್ಕೂ ಮುನ್ನ, ವಿಧಾನಸಭೆಯ ಹೊರಗೆ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ, ಅತ್ತ ಆಡಳಿತ ಪಕ್ಷದ ನಾಯಕರು ಸ್ಪೀಕರ್ ವಿಕೆ ಸಿನ್ಹಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಜಾರಿ ಮಾಡಲಾಗಿದ್ದರೂ ಅವರು ರಾಜೀನಾಮೆ ಕೊಡದಿರಲು ನಿರ್ಧರಿಸಿದ್ದರು. "ನಾನು ರಾಜೀನಾಮೆ ನೀಡುವುದಿಲ್ಲ. ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ನಾನೇ ಸಭಾಧ್ಯಕ್ಷತೆ ವಹಿಸುತ್ತೇನೆ" ಎಂದು ಬೆಳಗ್ಗೆ ಹೇಳಿದ್ದರು.

ಆಗಸ್ಟ್ 10ರಂದು ಆರ್‌ಜೆಡಿ ಶಾಸಕರು ಮತ್ತೊಮ್ಮೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ನಿಯಮಗಳ ಪ್ರಕಾರ, 14 ದಿನಗಳ ನಂತರ ಅದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ನಿರ್ಣಯ ಕೊಟ್ಟ ದಿನ ಮತ್ತು ಬಹುಮತ ಪರೀಕ್ಷೆಯ ದಿನ ಈ ಎರಡು ದಿನ ಹೊರತಾಗಿ 14 ದಿನಗಳಾಗಬೇಕು. ಆಗಸ್ಟ್ 9 ಅಥವಾ ಅದಕ್ಕಿಂತ ಮುಂಚೆ ಅವಿಶ್ವಾಸ ನಿರ್ಣಯ ಸಲ್ಲಿಸಬೇಕಿತ್ತು. ಅದು ಆಗಿಲ್ಲ. ಹೀಗಾಗಿ, ವಿಜಯ್ ಕುಮಾರ್ ಸಿನ್ಹಾ ಸ್ಪೀಕರ್ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಿದ್ದರು.

ಆದರೆ, ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜೀನಾಮೆ ಸಲ್ಲಿಸಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 164 ಶಾಸಕರು ನಿತೀಶ್ ಕುಮಾರ್ ಸರಕಾರವನ್ನು ಬೆಂಬಲಿಸಿದ್ದು, ಬಹುಮತದ ಪರೀಕ್ಷೆ ಬಹುತೇಕ ಔಪಚಾರಿಕವಾಗಿದೆ. ವಿಧಾನಸಭೆಯ ಪ್ರಸ್ತುತ ಸಂಖ್ಯಾಬಲ 241 ಆಗಿದ್ದು, ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಬಹುಮತಕ್ಕೆ 121 ಶಾಸಕರ ಬೆಂಬಲದ ಅಗತ್ಯವಿದೆ.

ಆಗಸ್ಟ್ 10 ರಂದು ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದಾರೆ. ನಿತೀಶ್ ಕುಮಾರ್ ಅವರು ತಮ್ಮ ಸಂಪುಟವನ್ನು ವಿಸ್ತರಿಸಿದ ಕೆಲವೇ ದಿನಗಳಲ್ಲಿ ಬಹುಮತ ಸಾಬೀತು ನಡೆಯುತ್ತಿದೆ. ಮೈತ್ರಿ ಪಾಲುದಾರ ಆರ್‌ಜೆಡಿಗೆ ಹೆಚ್ಚಿನ ಸ್ಥಾನಗಳು ಸಿಕ್ಕಿವೆ. ಸಂಪುಟದಲ್ಲಿರುವ 31 ಸಚಿವರಲ್ಲಿ ಆರ್‌ಜೆಡಿ 16, ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) 11 ಸ್ಥಾನಗಳನ್ನು ಉಳಿಸಿಕೊಂಡಿದೆ.

ಇಬ್ಬರು ಕಾಂಗ್ರೆಸ್ ನಾಯಕರು ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದ ನಾಯಕ ಕೂಡ ಮಂತ್ರಿಯಾಗಿದ್ದಾರೆ. ಏಕೈಕ ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Recommended Video

   ಮುಂದಿನ ಚುನಾವಣೆ: ಸಿದ್ದರಾಮಯ್ಯ ಇಲ್ಲಿಂದಲೇ ಸ್ಪರ್ಧೆ? | Oneindia Kannada
   English summary
   Vijay Kumar Sinha resigns as the Speaker of the Bihar Assembly ahead of Floor Test of Nitish Kumar-led govt. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X