ಶೇಕಡವಾರು ಮತ ಗಳಿಕೆ: ಆರ್‌ಜೆಡಿ ಟಾಪ್, ಜೆಡಿಯು 3ನೇ ಸ್ಥಾನ

ಪಾಟ್ನಾ, ನ.11: ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿ, ನವೆಂಬರ್ 11ರಂದು ಸುರ್ಯೋದಯಕ್ಕೂ ಮುನ್ನ ಅಂತಿಮ ಫಲಿತಾಂಶ ಹೊರಬಂದಿದೆ.

ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ತಡರಾತ್ರಿ ನಡೆದು 3755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಚುನಾವಣಾ ಅಯೋಗವು ಇದೇ ಮೊದಲ ಬಾರಿಗೆ ಮತ ಎಣಿಕೆ ನಡುವೆಯೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದು ವಿಶೇಷವಾಗಿತ್ತು.

ಚುನಾವಣಾ ಆಯೋಗದ ಅಧಿಕೃತ ವೆಬ್ ತಾಣದ ಮಾಹಿತಿಯಂತೆ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷ ಹಾಗೂ ಅತಿ ಹೆಚ್ಚು ಶೇಕಡಾವಾರು ಮತ ಗಳಿಕೆಯಲ್ಲಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಅಗ್ರಸ್ಥಾನದಲ್ಲಿದೆ.

RJD tops Vote Share in Bihar Elections 2020

ಆರ್ ಜೆಡಿ 75 ಸ್ಥಾನ ಗಳಿಸಿದರೆ ಬಿಜೆಪಿ 74 ಸ್ಥಾನ ಗಳಿಸಿದೆ. ಎನ್ಡಿಎ ಮಿತ್ರಪಕ್ಷಗಳಾದ ಎಚ್ಎಎಂ ಹಾಗೂ ವಿಐಪಿ ತಲಾ 4 ಸ್ಥಾನ ಗಳಿಸಿವೆ. ಎಲ್ ಜೆಪಿ 1 ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

ಪಕ್ಷವಾರು ಫಲಿತಾಂಶ 243(122 ಮ್ಯಾಜಿಕ್ ನಂಬರ್)
ಆರ್‌ಜೆಡಿ: 75
ಬಿಜೆಪಿ: 74,
ಕಾಂಗ್ರೆಸ್: 19,
ಜೆಡಿಯು: 43
ಸಿಪಿಐ(ಎಂಎಲ್): 12
ಸಿಪಿಐ: 2
ಸಿಪಿಐ(ಎಂ): 2
ಬಿಎಸ್ಪಿ:1
ಎಐಎಂಐಎಂ: 5
ವಿಐಪಿ: 4
ಎಚ್ಎಎಂ(ಎಸ್): 4
ಲೋಕ ಜನಶಕ್ತಿ ಪಕ್ಷ:1
ಇತರೆ:1

RJD tops Vote Share in Bihar Elections 2020

ಫಲಿತಾಂಶ; ಶೇಕಡಾವಾರು ಮತಗಳಿಕೆ
ಆರ್‌ಜೆಡಿ: 23.11%
ಬಿಜೆಪಿ: 19.46%
ಕಾಂಗ್ರೆಸ್: 9.48%
ಜೆಡಿಯು: 15.39%
ಸಿಪಿಐ: 0.83%
ಸಿಪಿಐ(ಎಂ): 0.65%
ಬಿಎಸ್ಪಿ:1.49%
ಎಐಎಂಐಎಂ: 1.24%
ಆರ್ ಎಲ್ ಎಸ್ ಪಿ: 1.77%
ಲೋಕ ಜನಶಕ್ತಿ ಪಕ್ಷ: 5.66%
ನೋಟಾ: 1.68%
ಇತರೆ: 18.85 %

RJD tops Vote Share in Bihar Elections 2020

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

Recommended Video

      BiharElectionResult : ತಮ್ಮನ ಪರವಾಗಿ ಟ್ವೀಟ್ ಮಾಡಿದ ತೇಜ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+