ವಿಡಿಯೋ: ಬಿಹಾರಕ್ಕೆ ಇಂಟರ್ನೆಟ್ ಜಾಲ, ಹೆದ್ದಾರಿ- ಮೋದಿ ಕೊಡುಗೆ
ಪಾಟ್ನಾ, ಸೆ. 21: ''ನಿಮ್ಮ ಮನೆ ತನಕ ಫೈಬರ್ ಜಾಲ'' ಯೋಜನೆ ಮೂಲಕ ಬಿಹಾರದ ಸುಮಾರು 45,945ಕ್ಕೂ ಅಧಿಕ ಗ್ರಾಮಗಳಿಗೆ ಇಂಟರ್ನೆಟ್ ಸಂಪರ್ಕ ಬೆಸೆಯುವ ಬೃಹತ್ ಯೋಜನೆಗೆ ಇಂದು ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಈ ಯೋಜನೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದ ಮನೆ ಮನೆಗೆ ಆಪ್ಟಿಕಲ್ ಫೈಬರ್ ಮುಖಾಂತರ ಕಡಿಮೆ ವೆಚ್ಚದಲ್ಲಿ ಹೈಸ್ಪೀಡ್ ಇಂಟರ್ನೆಟ್ ಒದಗಿಸುವುದು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಭರವಸೆಗಳಲ್ಲಿ ಒಂದಾಗಿತ್ತು. ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೂಡಾ ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ಇದಲ್ಲದೆ, ಇಂದು ಸುಮಾರು 14,000 ಕೋಟಿ. ರೂ. ಯೋಜನಾ ವೆಚ್ಚದ 9 ಹೆದ್ದಾರಿಗಳಿಗೆ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಲ್ಲದೆ, ಎರಡು ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು.













Click it and Unblock the Notifications