ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನಿತೀಶ್ ಪ್ರಬಲ ಪ್ರಧಾನಿ ಅಭ್ಯರ್ಥಿಯಾಗಬಲ್ಲರು; ತೇಜಸ್ವಿ

|
Google Oneindia Kannada News

ಪಾಟ್ನಾ, ಆಗಸ್ಟ್ 21: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂಬ ಸುದ್ದಿಯ ನಡುವೆಯೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಪ್ರತಿಪಕ್ಷಗಳು ಪರಿಗಣಿಸಿದರೆ, ಜೆಡಿಯು ನಾಯಕ "ಪ್ರಬಲ ಅಭ್ಯರ್ಥಿ" ಎಂದು ಭಾನುವಾರ ಹೇಳಿದ್ದಾರೆ.

ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಒಗ್ಗೂಡಿದ ಮಹಾಘಟಬಂಧನ್ ಸರಕಾರವು ಅಧಿಕಾರಕ್ಕೆ ಬಂದಿರುವುದು "ಪ್ರತಿಪಕ್ಷಗಳ ಒಗ್ಗಟ್ಟಿನ ಉತ್ತಮ ಮುನ್ಸೂಚನೆ" ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಹೇಳಿದರು.

'ಆರ್‌ಜೆಡಿ ಸಚಿವರು ಹೊಸ ಕಾರು, ಹೂಗುಚ್ಛ ಪಡೆಯುವಂತಿಲ್ಲ'- ತೇಜಸ್ವಿ ಯಾದವ್ ಘೋಷಣೆ'ಆರ್‌ಜೆಡಿ ಸಚಿವರು ಹೊಸ ಕಾರು, ಹೂಗುಚ್ಛ ಪಡೆಯುವಂತಿಲ್ಲ'- ತೇಜಸ್ವಿ ಯಾದವ್ ಘೋಷಣೆ

"ಬಹುತೇಕ ವಿರೋಧ ಪಕ್ಷಗಳು ದೇಶದ ಮುಂದಿರುವ ದೊಡ್ಡ ಸವಾಲನ್ನು ಗುರುತಿಸಿವೆ. ಭಾರತೀಯ ಸಮಾಜ ಹಾಗೂ ರಾಜಕೀಯ ವಲಯದಿಂದ ಎಲ್ಲಾ ವೈವಿಧ್ಯತೆಯನ್ನು ಹೊರಹಾಕಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿಗೆ ಹಣ, ಮಾಧ್ಯಮ ಮತ್ತು ಆಡಳಿತಾತ್ಮಕ ಯಂತ್ರ ಬಲವಿದೆ" ಎಂದು ಆರೋಪಿಸಿದರು.

Nitish Kumar Can Be A Strong PM Candidate, says Tejashwi Yadav

ಇದು ಪ್ರಾದೇಶಿಕ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ ಮತ್ತು ರಾಜ್ಯಗಳ ಮಟ್ಟದಲ್ಲಿ ಅಭಿವೃದ್ಧಿ ಬಗೆಗಿನ ಸಮಸ್ಯೆಗಳ ಪ್ರಶ್ನೆಯಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು.

2024 ರ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಲು ನಿತೀಶ್ ಕುಮಾರ್ ಸೂಕ್ತರೇ ಎಂಬ ಪ್ರಶ್ನೆಗೆ, "ನಾನು ಈ ಪ್ರಶ್ನೆಯನ್ನು ಗೌರವಾನ್ವಿತ ನಿತೀಶ್ ಜಿ ಅವರಿಗೆ ಬಿಡುತ್ತೇನೆ. ಆದರೆ ನಾನು ಇಡೀ ವಿರೋಧ ಪಕ್ಷದ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಪರಿಗಣಿಸಿದರೆ, ಗೌರವಾನ್ವಿತ ನಿತೀಶ್ ಜಿ ಖಂಡಿತವಾಗಿಯೂ ಪ್ರಬಲ ಅಭ್ಯರ್ಥಿಯಾಗಬಹುದು" ಎಂದರು.

'ಕಳೆದ 50 ವರ್ಷಗಳಿಂದ ನಿತೀಶ್ ಕುಮಾರ್‌ ಅವರು ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದಾರೆ, ಜೆಪಿ ಮತ್ತು ಮೀಸಲಾತಿ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಅವರು 37 ವರ್ಷಗಳಿಗೂ ಹೆಚ್ಚು ಸಂಸದೀಯ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ಈ ನೆಲದ ಮೇಲೆ ಮತ್ತು ಅವರ ಗೆಳೆಯರಲ್ಲಿ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ" ಎಂದು ಆರ್‌ಜೆಡಿ ನಾಯಕ ಹೇಳಿದರು.

Nitish Kumar Can Be A Strong PM Candidate, says Tejashwi Yadav

2013 ಮತ್ತು 2017 ರ ನಡುವಿನ ಅವಧಿಯನ್ನು ಹೊರತುಪಡಿಸಿ 1996 ರಿಂದ ಅವರ ಮಿತ್ರ ಪಕ್ಷವಾದ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದ ನಿತೀಶ್ ಕುಮಾರ್ ಅವರ ನಿರ್ಧಾರವು ಅವರು ಪ್ರಧಾನಿ ಅಭ್ಯರ್ಥಿಯಾಗಲು ಬಯಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಉತ್ತೇಜನ ನೀಡಿದೆ.

ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡ ಜೆಡಿಯು ನಾಯಕ ನಿತೀಶ್ ಕುಮಾರ್, ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದಾರೆ.

English summary
Nitish Kumar could emerge as a strong prime ministerial candidate says RJD leader Tejashwi Yadav, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X