ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಸಂಪ್ರೀತಿ ಯಾದವ್‌ಗೆ ಗೂಗಲ್‌ನಿಂದ 1.10 ಕೋಟಿ ರೂ ಪ್ಯಾಕೇಜ್

|
Google Oneindia Kannada News

ಪಾಟ್ನಾ, ಜನವರಿ 04: ಬಿಹಾರದ ಯುವತಿ ಸಫಲತೆಯ ಹೊಸ ಶಿಖರವನ್ನೇರಿದ್ದಾರೆ, ತನ್ನ ರಾಜ್ಯದ ಜತೆಗೆ ದೇಶದ ಹೆಸರನ್ನೂ ಉಜ್ವಲಗೊಳಿಸಿದ್ದಾರೆ. ರಾಜಧಾನಿ ಪಾಟ್ನಾದ ನೆಹರೂ ನಗರದಲ್ಲಿ ವಾಸವಿರುವ ಸಂಪ್ರೀತಿ ಯಾದವ್ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಇದೀಗ ಗೂಗಲ್ ನಲ್ಲಿ ಕೆಲಸ ಮಾಡಲಿದ್ದಾರೆ. ಸಂಪ್ರೀತಿ ಯಾದವ್‌ಗೆ ಗೂಗಲ್ ವಾರ್ಷಿಕ 1.10 ಕೋಟಿ ರೂಪಾಯಿ ಪ್ಯಾಕೇಜ್ ನೀಡಿದೆ. ಸಂಪ್ರೀತಿ ಯಾದವ್ ಅವರ ತಂದೆ ರಾಮಶಂಕರ್ ಯಾದವ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದಾರೆ. ಸಂಪ್ರೀತಿ ಯಾದವ್ ದೆಹಲಿ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಮಾಡಿದ್ದಾರೆ ಮತ್ತು ನಾಲ್ಕು ಕಂಪನಿಗಳಿಂದ ಉದ್ಯೋಗದ ಆಫರ್‌ಗಳನ್ನು ಪಡೆದಿದ್ದಾರೆ.

ಇದರಿಂದ ಸಂಪ್ರೀತಿ ಯಾದವ್ ಮೈಕ್ರೋಸಾಫ್ಟ್ ಜೊತೆ ಕೆಲಸ ಮಾಡಲು ಆರಂಭಿಸಿದರು. ಅಷ್ಟರಲ್ಲಿ ಅವರಿಗೆ ಗೂಗಲ್‌ನಿಂದ ಆಫರ್ ಬಂದಿತ್ತು. ಸಂದರ್ಶನದಲ್ಲಿ ಉತ್ತೀರ್ಣರಾದ ನಂತರ ಸಂಪ್ರೀತಿ ಯಾದವ್‌ಗೆ ಗೂಗಲ್ ವಾರ್ಷಿಕ 1.11 ಕೋಟಿ ರೂ. ಸಿಕ್ಕಿರುವ ಮಾಹಿತಿ ಲಭ್ಯವಾಗಿತ್ತು. ಸಂಪ್ರೀತಿ ಯಾದವ್ ಫೆಬ್ರವರಿ 14 ರಿಂದ ಗೂಗಲ್ ನಲ್ಲಿ ಕೆಲಸ ಮಾಡಲಿದ್ದಾರೆ.

 ಉದ್ಯೋಗ ತೃಪ್ತಿ: ಕರ್ನಾಟಕವೇ ಎಲ್ಲಾ ರಾಜ್ಯಗಳಿಗಿಂತ ಮುಂದು ಉದ್ಯೋಗ ತೃಪ್ತಿ: ಕರ್ನಾಟಕವೇ ಎಲ್ಲಾ ರಾಜ್ಯಗಳಿಗಿಂತ ಮುಂದು

ಗೂಗಲ್‌ನಲ್ಲಿ ಆಯ್ಕೆಯ ಬಗ್ಗೆ ಮಾಹಿತಿ ನೀಡಿದ ಸಂಪ್ರೀತಿ ಯಾದವ್, ಗೂಗಲ್ ತಂಡವು ತನ್ನ ಒಂಬತ್ತು ಸುತ್ತಿನ ಆನ್‌ಲೈನ್ ಸಂದರ್ಶನಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. ಪ್ರತಿ ಸುತ್ತಿನಲ್ಲೂ ಅವರ ಉತ್ತರದಿಂದ ಗೂಗಲ್ ಅಧಿಕಾರಿಗಳು ತೃಪ್ತರಾಗಿದ್ದರು.

Meet Sampreeti Yadav, Woman Who Bagged Rs 1.10-Crore Package Deal Job At Google

ಇದಾದ ನಂತರ ಅವರಿಗೆ ಗೂಗಲ್‌ನಿಂದ ಕೆಲಸ ನೀಡಲಾಯಿತು. ತಮ್ಮ ಯಶಸ್ಸಿನ ಬಗ್ಗೆ ವಿವರಿಸಿದ ಸಂಪ್ರೀತಿ ಯಾದವ್, ನೀವು ಏನಾದರೂ ದೊಡ್ಡದನ್ನು ಮಾಡಲು ಬಯಸಿದರೆ, ಮೊದಲು ನಿರ್ದಿಷ್ಟ ಗುರಿಯನ್ನು ಸಿದ್ಧವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ಆಗ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಿ, ಆಗ ಯಶಸ್ಸು ಖಂಡಿತಾ ಸಿಗುತ್ತದೆ.

English summary
Sampreeti Yadav, a woman from Patna, Bihar has bagged a job for herself at Google with the annual package deal of Rs 1.10 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X