ದೇಶದ ಅತಿ ಉದ್ದದ ಉಕ್ಕಿನ ಸೇತುವೆ ಜೂನ್ 7 ರಂದು ಲೋಕಾರ್ಪಣೆ

ಪಾಟ್ನಾ ಮೇ 30: ದೇಶದ ಅತಿ ಉದ್ದದ ಉಕ್ಕಿನ ಸೇತುವೆಯಾಗಿರುವ ಬಿಹಾರದ ಮಹಾತ್ಮ ಗಾಂಧಿ ಸೇತು ಜೂನ್ 7 ರಂದು ಲೋಕಾರ್ಪಣೆಗೊಳ್ಳಲಿದೆ.

ನವೀಕರಣಗೊಂಡ ಸೇತುವೆಯು ಅಂದಿನಿಂದ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗಲಿದೆ. ಗಂಗಾ ನದಿಯ ಮೇಲೆ ನಿರ್ಮಾಣಗೊಂಡಿರುವ ಈ ಸೇತುವೆಯು 5.6 ಕಿ.ಮೀ ಉದ್ದವಿದೆ. ಇದು ಬಿಹಾರದ ರಾಜಧಾನಿ ದಕ್ಷಿಣದ ಪಾಟ್ನಾ ಮತ್ತು ಉತ್ತರದ ಹಾಜಿಪುರ ನಗರಗಳನ್ನು ಸಂಪರ್ಕಿಸುತ್ತದೆ.

39 ವರ್ಷಗಳ ಹಿಂದೆಯೇ ಇಲ್ಲಿ ಸೇತುವೆ ನಿರ್ಮಾಣಗೊಂಡಿತ್ತು. ಸೇತುವೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಇದೀಗ ಪುನರ್ ನಿರ್ಮಾಣಗೊಂಡಿದೆ. ಸುಮಾರು 5,750 ಮೀಟರ್ ಉದ್ದದ ಮಹಾತ್ಮಾ ಗಾಂಧಿ ಸೇತುವೆಯನ್ನು 1982 ರಲ್ಲಿ ಉದ್ಘಾಟಿಸಲಾಗಿತ್ತು. ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಹಾಜಿಪುರದಲ್ಲಿ ನಡೆದ ಸಮಾರಂಭದಲ್ಲಿ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು.

Mahatma Gandhi Setu to be fully functional by June 7th

1,742 ಕೋಟಿ ರ. ವೆಚ್ಚದಲ್ಲಿ ನಿರ್ಮಾಣ:
ಹಲವು ವರ್ಷಗಳು ವಾಹನಗಳ ಸತತ ಸಂಚಾರದಿಂದ ಸೇತುವೆಯ ತೂಕ ತಡೆದುಕೊಳ್ಳುವ ಸಾಮರ್ಥ್ಯ ಕುಸಿದಿತ್ತು. ಶಿಥಿಲ ಹಂತಕ್ಕೆ ತಲುಪಿದ್ದ ಸೇತುವೆಯ ಪುನರ್ ನಿರ್ಮಾಣ ಕಾರ್ಯ 2017 ರಲ್ಲಿ ಪ್ರಾರಂಭಿಸಲಾಯಿತು. ಸೇತುವೆಯ ಮೇಲ್ವಿನ್ಯಾಸವನ್ನು ಸಂಪೂರ್ಣವಾಗಿ ಉಕ್ಕಿನಿಂದ ನಿರ್ಮಿಸಲು ಯೋಜಿಸಲಾಯಿತು. 1,742 ಕೋಟಿ ರು. ವೆಚ್ಚದಲ್ಲಿ ನೂತನ ಉಕ್ಕಿನ ಸೇತುವೆ ನರ್ಮಾಣಗೊಂಡಿದೆ. ಸೇತುವೆಯ ನಿರ್ಮಾಣದ ಹೊಣೆಯನ್ನು ಅಫ್ಕಾನ್ಸ್ ಇನ್ಫ್ರಾಸ್ಟಕ್ಚರ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

ಉಕ್ಕಿನಿಂದ ಮೇಲ್ವಿನ್ಯಾಸ ನಿರ್ಮಾಣ
ಮಹಾತ್ಮ ಗಾಂಧಿ ಸೇತು ಅಥವಾ ಎಂಜಿ ಸೇತು ಎಂದೇ ಖ್ಯಾತಿಯಾಗಿರುವ ಈ ಸೇತುವೆಯು ದೇಶದ ಮೊದಲ ಸಮತೋಲಿತ ಕ್ಯಾಂಟಿಲಿವರ್ ಸೇತುವೆಯಾಗಿತ್ತು. ಶಿಥಿಲಗೊಂಡ ಕಾರಣ ಇದನ್ನು ತೆರವುಗೊಳಿಸಲಾಯಿತು ಮತ್ತು ಸರಳ ಬೆಂಬಲಿತ ಸೇತುವೆಯಾಗಿ ಪರಿವರ್ತಿಸಲಾಯಿತು. ಆದಾಗ್ಯೂ, ಸೇತುವೆಯ ಅಸ್ತಿತ್ವದಲ್ಲಿರುವ ಕಾಂಕ್ರಿಟ್ ಸಬ್ ಸ್ಟ್ರಕ್ಚರ್ ಅನ್ನು ಉಳಿಸಿಕೊಳ್ಳಲಾಗಿದೆ ಮತ್ತು ಮೇಲ್ವಿನ್ಯಾಸವನ್ನು ಸ್ಟೀಲ್ ಡೆಕ್ ನಿಂದ ಬದಲಾಯಿಸಲಾಗಿದೆ.

ಸೇತುವೆಯ ಪುನರ್ ನಿರ್ಮಾಣ ಕಾರ್ಯವು 2017ರಲ್ಲಿ ಪ್ರಾರಂಭವಾಯಿತು ಮತ್ತು ಇದರ ಪಶ್ಚಿಮ ಭಾಗವನ್ನು 2020ರಲ್ಲಿ ಉದ್ಘಾಟಿಸಲಾಯಿತು. ಕೆಲವು ವರ್ಷಗಳು ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯ ಹೊರತಾಗಿಯೂ ಈ ಸಂಕೀರ್ಣ ಸೇತುವೆಯ ಪುನರ್ ನಿರ್ಮಾಣ ಕಾರ್ಯ ಕೇವಲ ಐದು ವರ್ಷಗಳಲ್ಲಿ ಪೂರ್ಣಗೊಂಡಿರುವುದು ಗಮನಾರ್ಹವಾಗಿದೆ.

Mahatma Gandhi Setu to be fully functional by June 7th

15-20 ನಿಮಿಷಗಳಲ್ಲಿ ಸೇತುವೆ ದಾಟಬಹುದು:
"ಈ ಮೊದಲು ಸೇತುವೆಯ ಕಳಪೆ ಸ್ಥಿತಿಯಿಂದಾಗಿ ಸಂಚಾರ ದಟ್ಟಣೆಯಿಂದ ವಾಹನ ಸವಾರರು 3-4 ಗಂಟೆಗಳ ಕಾಲ ಕಾಯುವಂತಾಗಿತ್ತು. ಆದರೆ ಈಗ ನೂತನ ಉಕ್ಕಿನ ಸೇತುವೆ ನಿರ್ಮಾಣದಿಂದಾಗಿ ವಾಹನ ಸವಾರರು ಕೇವಲ 15-20 ನಿಮಿಷಗಳಲ್ಲಿ ಸೇತುವೆ ದಾಟಲು ಸಾಧ್ಯವಾಗುತ್ತದೆ,'' ಎಂದು ಅಫ್ಕಾನ್ಸ್ ಪ್ರಾಜೆಕ್ಟ್ ಮ್ಯಾನೇಜರ್ ಎಸ್‌.ಕೆ.ಮಿಶ್ರಾ ಹೇಳಿದರು.

66,360 ಮೆಟ್ರಿಕ್ ಟನ್ ಉಕ್ಕು ಬಳಕೆ:
"ಸೇತುವೆ ಸಂಚಾರಕ್ಕೆ ಮುಕ್ತವಾದ ನಂತರ ಪ್ರತಿದಿನ ಸುಮಾರು ಒಂದು ಲಕ್ಷ ವಾಹನಗಳು ಈ ಸೇತುವೆಯನ್ನು ಬಳಸಬಹುದು. ಈ ಸೇತುವೆಯು ಉತ್ತರ ಮತ್ತು ದಕ್ಷಿಣ ಬಿಹಾರ ಸಂಪರ್ಕಿಸುವ ಕೊಂಡಿಯಾಗಿದೆ. ಹೀಗಾಗಿ ಈ ಸೇತುವೆಯು ಬಿಹಾರದ ಸಾಮಾಜಿಕ, ಆರ್ಥಿಕ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಸಂಪೂರ್ಣ ಸೇತುವೆಯ ಮೇಲ್ವಿನ್ಯಾಸದಲ್ಲಿ ಸುಮಾರು 66,360 ಮೆಟ್ರಿಕ್ ಟನ್ ಉಕ್ಕನ್ನು ಬಳಸಲಾಗಿದೆ. ಯೋಜನೆಯ ಬಹುಪಾಲು ಉಕ್ಕಿನ ಕೆಲಸವೇ ಆಗಿದೆ,'' ಎಂದು ಎಸ್‌.ಕೆ.ಮಿಶ್ರಾ ತಿಳಿಸಿದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+