ಬಿಹಾರದಲ್ಲಿ ಭಾರೀ ಮಳೆ, ಪ್ರವಾಹ: 27 ಮಂದಿ ದುರ್ಮರಣ
ಪಾಟ್ನಾ, ಸೆಪ್ಟೆಂಬರ್ 30: ಬಿಹಾರದಲ್ಲಿ ಭಾರೀ ಮಳೆಯಿಂದ ಉಂಟಾಗಿವ ಪ್ರವಾಹದಿಂದ ರಾಜಧಾನಿ ಪಾಟ್ನಾ ಅಕ್ಷರಶಃ ಮುಳುಗಿದ್ದು, ಇದುವೆರಗೆ 27 ಮಂದಿ ಮೃತರಾಗಿದ್ದಾರೆ.
ಪ್ರವಾಹದ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿ ಹಲವು ದಿನಗಳಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮಂಗಳವಾರದವರೆಗೆ ಶಾಲೆಗಳನ್ನು ಮುಚ್ಚಲಾಗಿದೆ.
ಪಾಟ್ನಾ ಸಂಪೂರ್ಣ ಜಲಾವೃತವಾಗಿದ್ದು ಸಂತ್ರಸ್ತರನ್ನು ದೋಣಿಯ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ.

ಹವಾಮಾನ ಇಲಾಖೆ ಮೊದಲೇ ಸರಿಯಾಗಿ ಮುನ್ನೆಚ್ಚರಿಕೆ ನೀಡದ ಕಾರಣ ಮತ್ತು ಹವಾಮಾನ ಇಲಾಖೆಯ ವರದಿಗಳಲು ವಿಭಿನ್ನವಾಗಿದ್ದ ಕಾರಣ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ಬಿಹಾರ ಸರ್ಕಾರ ವಿಫಲವಾಗಿತ್ತು. ಆದ್ದರಿಂದಲೇ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ.
ಈಗಾಗಲೇ ರಾಷ್ಟ್ರೀಯ ವಿಪತ್ತು ದಳದ 19 ತಂಡಗಳು ರಕ್ಷಣಾ ಕಾರ್ಯ ನಡೆಸುತ್ತಿವೆ, ಜನರು ಧೈರ್ಯ ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮನವಿ ಮಾಡಿದ್ದಾರೆ.












Click it and Unblock the Notifications