Viral Video: ಶಾಲೆಯಲ್ಲಿ ನಿದ್ದೆಗೆ ಜಾರಿದ ಶಿಕ್ಷಕಿ: ಗಾಳಿ ಬೀಸಿದ ವಿದ್ಯಾರ್ಥಿನಿ

ಮನುಷ್ಯನ ಬದುಕಿನಲ್ಲಿ ಅರಿವಿನ ಮೊದಲ ಕಿಡಿಯನ್ನು ಹಚ್ಚಿ ಮುನ್ನಡೆಸುವ ಮಹಾನುಭಾವರೇ ಶಿಕ್ಷಕರು. ಹೀಗಿರುವಾಗ ಇಲ್ಲೊಬ್ಬ ಶಿಕ್ಷಕರು ಮಾಡಿಕೆ ಕೆಲಸ ನೋಡಿದರೇ ಎಂಥವರಿಗೂ ಕೋಪ ಬರದಿರಲು ಸಾಧ್ಯವಿಲ್ಲ. ಇಂತಹ ಶಿಕ್ಷಕರಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ ಎನ್ನುವ ಪ್ರಶ್ನೆ ಮೂಡದಿರದು.

ತರಗತಿಯಲ್ಲಿ ಹಾಯಾಗಿ ಮಲಗಿದ್ದ ಶಿಕ್ಷಕರಿಗೆ ವಿದ್ಯಾರ್ಥಿನಿ ಗಾಳಿ ಬೀಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಹಂಚಿಕೊಂಡ ನಂತರ ನೆಟ್ಟಿಗರು ಶಾಲಾ ಶಿಕ್ಷಕರ ವರ್ತನೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಆಕ್ರೋಶವನ್ನು ಪ್ರತಿಕ್ರಿಯೆಯಲ್ಲಿ ತೋರಿಸಿದ್ದಾರೆ. ಈ ಶಾಲೆಯ ವಿಡಿಯೋ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಘಟನೆ ಬಿಹಾರದ ಸರ್ಕಾರಿ ಶಾಲೆಯದ್ದು ಎಂದು ಹೇಳಲಾಗುತ್ತಿದೆ. ತರಗತಿಯಲ್ಲಿ ಮಕ್ಕಳು ಹಾಸಿದ ಹಾಸಿಗೆ ಮೇಲೆ ಕುಳಿತಿದ್ದಾರೆ. ಇನ್ನೂ ತರಗತಿಯಲ್ಲಿ ಶಿಕ್ಷಕಿ ಗಡತ್ ನಿದ್ದೆ ಮಾಡುತ್ತಿದ್ದಾರೆ. ಶಿಕ್ಷಕರು ತಮ್ಮ ಕುರ್ಚಿಯ ಮೇಲೆ ಮಲಗಿ ಆಳವಾದ ನಿದ್ದೆಗೆ ಜಾರಿದ್ದಾರೆ. ವಿದ್ಯಾರ್ಥಿ ನಿದ್ದೆ ಮಾಡುತ್ತಿರುವ ಶಿಕ್ಷಕರಿಗೆ ಗಾಳಿ ಬೀಸುತ್ತಿರುವುದು ಟೀಕೆಗೆ ಕಾರಣವಾಗಿದೆ. ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕಿ ನಿದ್ದೆ ಮಾಡುತ್ತಿರುವುದೇ ತಪ್ಪು ಹೀಗಿರುವಾಗ ವಿದ್ಯಾರ್ಥಿಯಿಂದ ಗಾಳಿ ಬೀಸಿಕೊಳ್ಳುತ್ತಿರುವುದು ನೋಡುಗರ ಕೆಂಗಣ್ಣಿಗೆ ಗುರಿಯಾಗಿದೆ.

Bihar school video: student fanning sleeping teacher in class

ಅನೇಕ ಇಂಟರ್ನೆಟ್ ಬಳಕೆದಾರರು ಶಿಕ್ಷಕಿಯನ್ನು ದೂಷಿಸಿದ್ದಾರೆ. ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನೆಟಿಜನ್‌ಗಳಲ್ಲಿ ಒಬ್ಬರು ಈ ವಿಡಿಯೊಗೆ ಪ್ರತಿಕ್ರಿಯಿಸಿ, "ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಿ, ಅವರು ಮತ್ತೊಬ್ಬರಿಗೆ ಮಾದರಿಯಾಗುವುದು ಬೇಡ'' ಎಂದು ಬರೆದಿದ್ದಾರೆ.

ವಿಡಿಯೊದಲ್ಲಿ ಮಲಗಿರುವ ಶಿಕ್ಷಕಿಯನ್ನು ಬಬಿತಾ ಕುಮಾರಿ ಎಂದು ನವಭಾರತ್ ಟೈಮ್ಸ್ ಗುರುತಿಸಿದೆ. ಆಕೆ ಕೃತ್ಯಕ್ಕೆ ವಿವರಣೆಯನ್ನೂ ನೀಡಿದ್ದಾರೆ. ತನ್ನ ಕಾರ್ಯಗಳನ್ನು ಸಮರ್ಥಿಸಿಕೊಂಡ ಕುಮಾರಿ, ತನಗೆ ಹುಷಾರಿಲ್ಲ. ಹೀಗಾಗಿ ಕುರ್ಚಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಹೇಳಿಕೆ ಬಳಿಕ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಕೇವಲ ಸಂಬಳಕ್ಕಾಗಿ ವಿದ್ಯೆ ಕಲಿಸುವ ವೃತ್ತಿಯಲ್ಲಿ ತೊಡಗಿದ್ದರೆ ಮಾದರಿ ಶಿಕ್ಷಕ/ಶಿಕ್ಷಕಿಯಾಗಲು ಸಾಧ್ಯವಿಲ್ಲ. ಕಲಿಸುವವರಿಗೆ ಕಲಿಯುವ ತುಡಿತವಿರಬೇಕು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅರ್ಥಮಾಡಿಕೊಳ್ಳುವ ಜಾಣ್ಮೆ ಮತ್ತು ತಾಳ್ಮೆ ಇರಬೇಕು.

ವಿದ್ಯಾರ್ಥಿಗಳಲ್ಲಿ ತಾರತಮ್ಯ ತೋರದೆ ಎಲ್ಲಾರೆಡೆಗೂ ಗಮನಹರಿಸಬೇಕು. ಆಗ ಅವರು ಕಲಿಯುವ ಕಡೆಗೆ ಆಸಕ್ತಿ ವಹಿಸುತ್ತಾರೆ. ಮಾತ್ರವಲ್ಲದೇ ವಿದ್ಯಾರ್ಥಿಗಳ ವಿಚಾರಗಳನ್ನು ಕೇಳಬೇಕು, ಅವರ ಚಿಂತನೆಗಳನ್ನು ಪ್ರೋತ್ಸಾಹಿಸಬೆಕು ಆಗ ಮಾತ್ರ ಒಳ್ಳೆಯ ಗುರುವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+