ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ನ್ಯಾಯಕ್ಕಾಗಿ ವಿಡಿಯೋ ಹಂಚಿಕೆ
ಬಿಹಾರ, ಮೇ 7: ಮನುಕುಲವೇ ತಲೆ ತಗ್ಗಿಸುವಂತಹ ಘಟನೆ ಬಿಹಾರದಲ್ಲಿ ನಡೆದುರುವುದು ವರದಿಯಾಗಿದೆ. ಹೆತ್ತ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮಗಳ ಮೇಲೆ ಅತ್ಯಾಚಾರವೆಸಗಿರುವ ವಿಡಿಯೋ ವೈರಲ್ ಆಗಿದೆ.
ಆರೋಪಿಯು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಸಮಸ್ತಿಪುರದ ರೋಸೆರಾ ನಿವಾಸಿಯಾಗಿದ್ದಾನೆ. ಈತನ 18 ವರ್ಷದ ಮಗಳು ತನ್ನ ಮೇಲೆ ಅತ್ಯಾಚಾರ ಮತ್ತು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾಳೆ. ಅವಳು ತನ್ನ ತಂದೆಯ ಕೃತ್ಯವನ್ನು ಬಹಿರಂಗಪಡಿಸಲು ಗುಪ್ತ ಕ್ಯಾಮೆರಾವನ್ನು ಬಳಸಿ ಹಲ್ಲೆ ಹಾಗೂ ಅತ್ಯಾಚಾರದ ವಿಡಿಯೊವನ್ನು ಚಿತ್ರೀಕರಿಸಿದ್ದಾಳೆ.
ಮಗಳು ತನ್ನ ತಂದೆ ತನ್ನ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿ, ನ್ಯಾಯಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಾಗ ವಿಷಯ ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ತಂದೆಯನ್ನು ಬಂಧಿಸಿದ್ದಾರೆ ಎಂದು ರೋಸೆರಾ ಉಪವಿಭಾಗದ ಡಿಎಸ್‌ಪಿ ಸಹಿಯಾರ್ ಅಖ್ತರ್ ಹೇಳಿದ್ದಾರೆ.

"ವೈರಲ್ ವಿಡಿಯೋದಲ್ಲಿ [ಸಂತ್ರಸ್ತೆ] ಮೇಲೆ ಹಲ್ಲೆ ನಡೆಸುತ್ತಿರುವ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಹೇಳಿಕೆಯ ಆಧಾರದ ಮೇಲೆ ಇತರ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ" ಎಂದು ಡಿಎಸ್ಪಿ ಸಹಿಯಾರ್ ಅಖ್ತರ್ ಹೇಳಿದ್ದಾರೆ.

ಪೊಲೀಸರು ತಂದೆಯನ್ನು ವಿಚಾರಣೆಗೊಳಪಡಿಸಿದ್ದು, ಪ್ರಕರಣದಲ್ಲಿ ಇತರ ಆರೋಪಿಗಳು ಇದ್ದಾರೆಯೇ ಎಂದು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆಯ ತಾಯಿಯು ಹಲ್ಲೆಯನ್ನು ವಿರೋಧಿಸಲಿಲ್ಲ ಮತ್ತು ಘಟನೆಯ ಬಗ್ಗೆ ಮೌನವಾಗಿರುವಂತೆ ಆಕೆಯ ತಾಯಿಯ ಚಿಕ್ಕಪ್ಪ ಅವಳನ್ನು ಒತ್ತಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ.











Click it and Unblock the Notifications