ನಿತೀಶ್‌ಗೆ ಸವಾಲು ಹಾಕಿ, ಬಿಹಾರಕ್ಕೆ ಬಂದಿಳಿದ ಯುವತಿ ಪುಷ್ಪಂ

ಪಾಟ್ನಾ, ಅ. 11: ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರಿಗೆ ಈ ಬಾರಿ ಯುವತಿಯೊಬ್ಬಳು ಸವಾಲು ಹಾಕಿ, ತನ್ನನ್ನು ಮುಂದಿನ ಬಿಹಾರ ಸಿಎಂ ಎಂದು ಘೋಷಿಸಿಕೊಂಡಿದ್ದ ಲಂಡನ್ ನಿವಾಸಿ ಯುವತಿ ಪುಷ್ಪಂ ಪ್ರಿಯ ಚೌಧರಿ ಈಗ ತಮ್ಮ ಪಕ್ಷದ ಮೂಲಕದ ಬಿಹಾರ ವಿಧಾನಸಭೆ ಚುನಾವಣೆ ಕಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

ಜೆಡಿಯು ನಾಯಕ ಬಿನೋದ್​ ಚೌಧರಿ ಪುತ್ರಿ ಪುಷ್ಪಂ ಪ್ರಿಯಾ ಅವರು ತನ್ನದೇ ಹೊಸ ಪಕ್ಷ ಪ್ಲೂರಲ್ಸ್(Plurals)ಕಟ್ಟಿಕೊಂಡು ಬಿಹಾರದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸುತ್ತಿದ್ದಾರೆ. ಚುನಾವಣೆ ಘೋಷಿಸುವುದಕ್ಕೆ ಎಷ್ಟೋ ತಿಂಗಳುಗಳ ಮುಂಚೆಯೇ ತಾನು ಮುಂದಿನ ಸಿಎಂ ಅಭ್ಯರ್ಥಿ ಎಂದು ದೊಡ್ಡ ಹೋರ್ಡಿಂಗ್ ಹಾಕಿ ಗಮನ ಸೆಳೆದಿದ್ದರು.

ಬಿಹಾರಕ್ಕೆ ವೇಗ, ರೆಕ್ಕೆ, ಬದಲಾವಣೆ ಅಗತ್ಯ ಇದೆ. ಬಿಹಾರಕ್ಕೆ ಅತ್ಯುತ್ತಮವಾದದ್ದು ಬೇಕಾಗಿದೆ ಹಾಗೂ ಅದಕ್ಕೆ ಅದು ಅರ್ಹವೂ ಆಗಿದೆ. ಹೀಗಾಗಿ ಅಸಂಬದ್ಧ ರಾಜಕೀಯ ತಿರಸ್ಕರಿಸಿ, ಪ್ಲುರಲ್ಸ್(Plurals)​​​ ಪಕ್ಷಕ್ಕೆ ಸೇರಿ, ಸ್ವಚ್ಛಂದವಾಗಿ ಮುನ್ನಡೆಯಿರಿ.. ಎಂದು ಬರೆದುಕೊಂಡಿದ್ದಾರೆ.

ರಾಜಕೀಯ ಶಾಸ್ತ್ರ ಅಧ್ಯಯನ ಮಾಡಿರುವ ಪ್ರಿಯ

ರಾಜಕೀಯ ಶಾಸ್ತ್ರ ಅಧ್ಯಯನ ಮಾಡಿರುವ ಪ್ರಿಯ

ಜೆಡಿಯು ನಾಯಕ ಬಿನೋದ್​ ಚೌಧರಿ ಅವರ ಪುತ್ರಿ ಪುಷ್ಪಂ ಪ್ರಿಯಾ ಅವರು ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ ಮತ್ತು ರಾಜಕೀಯ ಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಪುಷ್ಪಮ್ ಬಗ್ಗೆ ಆಕೆ ತಂದೆ ಕೂಡಾ ಹೆಮ್ಮೆಯಿಂದ ಪ್ರತಿಕ್ರಿಯಿಸಿ, ಆಕೆ ವಿದ್ಯಾವಂತೆ ಸ್ವಂತ ನಿರ್ಧಾರ ಕೈಗೊಳ್ಳಲು ಅರ್ಹರಾಗಿದ್ದಾಳೆ, ಆದರೆ, ಪಕ್ಷದ ಹಿರಿಯ ಮುಖಂಡರಿಗೆ ಸವಾಲು ಹಾಕುವುದನ್ನು ಬೆಂಬಲಿಸಲಾರೆ ಎಂದಿದ್ದರು. ಜೆಡಿಯು ವರಿಷ್ಠರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷದ ವಿರುದ್ಧ ನಾನು ಹೋಗಲಾರೆ ಎಂದು ಪುತ್ರಿಯ ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಪ್ರಕಟ, ಅಭ್ಯರ್ಥಿಗಳು ತಿರಸ್ಕೃತ

ಅಭ್ಯರ್ಥಿಗಳ ಪಟ್ಟಿ ಪ್ರಕಟ, ಅಭ್ಯರ್ಥಿಗಳು ತಿರಸ್ಕೃತ

ಬಿಹಾರದ ಮೊದಲ ಹಾಗೂ ಎರಡನೇ ಹಂತದ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಿಯ ಹೆಸರಿಸಿದ್ದಾರೆ. ಆದರೆ, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದ 33 ಹೆಸರುಗಳ ಪೈಕಿ 28 ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣ ಆಯೋಗ ತಿರಸ್ಕರಿಸಿದೆ. ಈ ನಡುವೆ ಎರಡನೇ ಹಂತಕ್ಕೆ 33 ಅಭ್ಯರ್ಥಿಗಳನ್ನು ಹೆಸರಿಸಿದ್ದು, ಈ ಪೈಕಿ 13 ಮಂದಿ ಮಹಿಳೆಯರಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ಶೋಲೆ ಚಿತ್ರದ ಜನಪ್ರಿಯ ಡೈಲಾಗ್ "Jo dar gaya, samjho mar gaya" ಉಲ್ಲೇಖಿಸಿದ್ದಾರೆ.

Recommended Video

    Narendra Modi ಇಂದು ಹೊಸ 100 ರುಪಾಯಿಯ ನಾಣ್ಯವನ್ನು ಪರಿಚಯಿಸಿದರು| Oneindia Kannada
    ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ

    ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ

    243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್,28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್.10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

    Array

    2015ರಲ್ಲಿ ಬಂದ ಫಲಿತಾಂಶ

    2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿತ್ತು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+