India
  • search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಡುಹಗಲಲ್ಲೇ ಬಿಹಾರದ ಬ್ಯಾಂಕ್‌ನಲ್ಲಿ 1.19 ಕೋಟಿ ರೂ. ದರೋಡೆ

|
Google Oneindia Kannada News

ಪಾಟ್ನಾ, ಜೂ. 10: ಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ಗುರುವಾರ ಹಾಡುಹಗಲಲ್ಲೇ ಬಿಹಾರದ ಹಾಜಿಪುರದ ಖಾಸಗಿ ಬ್ಯಾಂಕ್‌ವೊಂದರಿಂದ 1.19 ಕೋಟಿ ರೂ. ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್‌ರ ಜಡುಹಾದಲ್ಲಿನ ನಿವಾಸದ ಬಳಿ ಇರುವ ಎಚ್‌ಡಿಎಫ್‌ಸಿ ಬ್ಯಾಂಕಿನ ಶಾಖೆಯಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿ

''ಬೈಕ್‌ನಲ್ಲಿ ಬಂದ ಐವರು ದರೋಡೆಕೋರರು ಬ್ಯಾಂಕ್‌ಗೆ ನುಗ್ಗಿ ನೌಕರರಿಗೆ ಬೆದರಿಕೆ ಹಾಕಿ ನಗದು ಕೊಠಡಿಯಿಂದ 1.19 ಕೋಟಿ ರೂಪಾಯಿಯನ್ನು ಚೀಲದಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಖದೀಮರು ಬ್ಯಾಂಕಿನಿಂದ ಹೊರಹೋಗುವಾಗ ಹಣದ ಚೀಲಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ'' ಎಂದು ಪೊಲೀಸರು ಹೇಳಿದ್ದಾರೆ.

''ಬ್ಯಾಂಕ್‌ ಲೂಟಿಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಐವರ ಗುರುತು ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಗಡಿಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ದರೋಡೆಕೋರರಿಗೆ ಬಲೆ ಬೀಸಿದ್ದೇವೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಕಳೆದ ವಾರ ಮುಜಫರ್‌ನಗರದಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು 65,000 ರೂ. ದರೋಡೆ ಮಾಡಿದ್ದರು. ಖತೋಲಿ ಪಟ್ಟಣದ ರೈಲ್ವೆ ರಸ್ತೆ ಬಳಿ ಗನ್‌ ತೋರಿಸಿ ಆರೋಪಿಗಳು ಬ್ಯಾಂಕಿನಲ್ಲಿ ದೋಚಿದ್ದರು. ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಬ್ಯಾಂಕಿನಿಂದ ನಗದು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Five bike-borne Armed mens loot Rs 1.19 crore from HDFC branch broad daylight in Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X