328 ಚೀಲ ಈರುಳ್ಳಿ ಗೋದಾಮಿನಿಂದ ಕದ್ದೊಯ್ದ ಕಳ್ಳರು
ಪಾಟ್ನಾ (ಬಿಹಾರ), ಸೆಪ್ಟೆಂಬರ್ 23: ತರಕಾರಿ ಬೆಲೆಗಳಲ್ಲಿ ಯಾವ ಪರಿ ಏರಿಕೆ ಆಗಿದೆಯೆಂದರೆ, ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಗೋದಾಮುವೊಂದರಿಂದ 328 ಚೀಲಗಳಲ್ಲಿ ಇದ್ದ 8 ಲಕ್ಷ ಮೌಲ್ಯದ ಈರುಳ್ಳಿಯನ್ನು ಕಳುವು ಮಾಡಲಾಗಿದೆ. ಪಾಟ್ನಾ ಸೇರಿದಂತೆ ಇತರ ನಗರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಈರುಳ್ಳಿ ಬೆಲೆ ವಿಪರೀತ ಏರಿಕೆ ಆಗಿದೆ. ಪ್ರತಿ ಕೇಜಿ ಈರುಳ್ಳಿಗೆ 70 ರುಪಾಯಿ ಇದೆ.
ಸ್ಥಳೀಯರ ಪೊಲೀಸರ ಮಾಹಿತಿ ಪ್ರಕಾರ, ಟ್ರಕ್ ತಂದು ದುಷ್ಕರ್ಮಿಗಳು ಕಳುವು ಮಾಡಿದ್ದಾರೆ. 328 ಚೀಲಗಳಲ್ಲಿ ತಲಾ 100 ಕೇಜಿ ಇದ್ದದ್ದನ್ನು ಹೊತ್ತೊಯ್ದಿದ್ದಾರೆ. ಜತೆಗೆ ಗೋದಾಮಿನಲ್ಲಿ ಇದ್ದ 1.73 ಲಕ್ಷ ರುಪಾಯಿ ನಗದು ಕೂಡ ಕಳುವು ಮಾಡಿದ್ದಾರೆ. ಎಂಟು ಲಕ್ಷ ಮೌಲ್ಯದ ಈರುಳ್ಳಿ ಹಾಗೂ ನಗದು ಕಳವು ಮಾಡಿರುವುದು ಲೆಕ್ಕ ಹಾಕಿದರೆ ಒಟ್ಟು ಹತ್ತು ಲಕ್ಷದಷ್ಟು ಕಳುವು ಆದಂತಾಗಿದೆ.

ನಾಡಿನ ಸಮಸ್ತ 'ಈರುಳ್ಳಿ' ಬಳಕೆದಾರರಿಗೆ ಮಹಾರಾಷ್ಟ್ರದಿಂದ ಶಾಕಿಂಗ್ ನ್ಯೂಸ್!
ಈ ಪ್ರಕರಣದ ತನಿಖೆ ಶುರು ಮಾಡಿರುವ ಪೊಲೀಸರು ಗೋದಾಮಿನ ಪ್ರದೇಶದಲ್ಲಿ ಇದ್ದ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್ ವಶಕ್ಕೆ ಪಡೆದಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ಅಚ್ಚರಿಗೆ ಸಿಲುಕಿಕೊಂಡಿದ್ದಾರೆ. 328 ಚೀಲದಲ್ಲಿ ಇದ್ದ ಈರುಳ್ಳಿಯನ್ನು ಅದು ಹೇಗೆ ಸಾಗಿಸಿದರು ಎಂಬುದೇ ಈಗ ಪ್ರಶ್ನೆಯಾಗಿ ಕಾಡುತ್ತಿದೆ.












Click it and Unblock the Notifications