40 ರೊಟ್ಟಿ, 10 ಪ್ಲೇಟ್ ಅನ್ನ: ಕ್ವಾರಂಟೈನ್‌ನಲ್ಲಿರುವ ವ್ಯಕ್ತಿ ಮಾಡುವ ಊಟವಿದು
ಮೇ 29: ಬಿಹಾರದದ ಕೊರೊನಾ ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿ ಬರೋಬ್ಬರಿ 40 ರೊಟ್ಟಿ ಹಾಗೂ 10 ಪ್ಲೇಟ್ ಅನ್ನ ಊಟ ಮಾಡುತ್ತಿದ್ದು, ಅಡುಗೆ ಮಾಡುವವರು ಸುಸ್ತೆದ್ದು ಹೋಗಿದ್ದಾರೆ.
ಈತ ವಲಸೆ ಕಾರ್ಮಿಕನಾಗಿದ್ದು, ರಾಜಸ್ಥಾನದಿಂದ ಬಿಹಾರಕ್ಕೆ ಬಂದಿದ್ದು ಅಲ್ಲಿನ ಬುಕ್ಸಾರ್‌ನಲ್ಲಿರುವ ಕ್ವಾರಂಟೈನ್ ಸೆಂಟರ್‌ನಲ್ಲಿ ಆತನನ್ನು ಇರಿಸಲಾಗಿದೆ.
ಆತ ಎಷ್ಟು ಊಟ ಮಾಡುತ್ತಾನೋ ಅಷ್ಟು ಆಹಾರವನ್ನು ಒದಗಿಸುವಂತೆ ತಿಳಿಸಲಾಗಿದೆ ಎಂದು ಬ್ಲಾಕ್ ಡೆವಲಾಪ್‌ಮೆಂಟ್ ಅಧಿಕಾರಿ ಎಕೆ ಸಿಂಗ್ ತಿಳಿಸಿದ್ದಾರೆ.
ಸುಮಾರು ಹತ್ತು ದಿನಗಳ ಹಿಂದೆ ಕ್ವಾರಂಟೈನ್ ಕೇಂದ್ರಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ವಾಪಸ್ ತೆರಳಲಿದ್ದಾರೆ. ಆತನಿಗೆ ಆಹಾರವನ್ನು ಒದಗಿಸಲು ಸಾಧ್ಯವೇ ಇಲ್ಲ ಎಂದು ಕ್ವಾರಂಟೈನ್ ಕೇಂದ್ರದ ಅಡುಗೆ ತಯಾರಿಕರಿಂದ ದೂರು ಬಂದಿತ್ತು.

ಹೀಗಾಗಿ ಖುದ್ದಾಗಿ ಅಧಿಕಾರಿಗಳು ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದಾಗಿ ಅವರೇ ನೋಡಿ ಆಶ್ಚರ್ಯಚಕಿತರಾದರು. ಈತನಿಂದಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಆಹಾರ ಸಾಮಗ್ರಿಗಳ ಕೊರತೆ ಎದುರಿಸಬೇಕಾಗಿದೆ ಎಂದು ಹೇಳಲಾಗಿದೆ.
ಸಾವಿರಾರು ಮಂದಿ ವಲಸೆ ಕಾರ್ಮಿಕರು ಬಿಹಾರಕ್ಕೆ ಆಗಮಿಸಿದ್ದಾರೆ. 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಕ್ವಾರಂಟೈನ್ ಕೇಂದ್ರದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅತಿಯಾದ ಒತ್ತಡ ಕೂಡ ಮನುಷ್ಯ ಹೆಚ್ಚು ಆಹಾರವನ್ನು ಸೇವಿಸುವಂತೆ ಮಾಡುತ್ತದೆ ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಹೇಳಿದೆ.











Click it and Unblock the Notifications