ಫ್ರಾನ್ಸ್ ನಲ್ಲಿ ಭಾರತದ ಜಿಸ್ಯಾಟ್- 11 ಉಪಗ್ರಹ ಯಶಸ್ವೀ ಉಡಾವಣೆ
ಪ್ಯಾರಿಸ್, ಡಿಸೆಂಬರ್ 05: ಭಾರತದ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಜಿಸ್ಯಾಟ್ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಫ್ರಾನ್ಸ್ ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗಿನ ಜಾವ(ಸ್ಥಳೀಯ ಕಾಲಮಾನ) ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಉಪಗ್ರಹ ಉಡಾವಣೆಯ ನೇರ ಪ್ರಸಾರವನ್ನು ದೂರದರ್ಶನ ಬಿತ್ತರಿಸಿತ್ತು.
ಇದುವರೆಗೆ ಉಡ್ಡಯನ ಮಾಡಲಾದ ಅತೀ ಭಾರದ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಸ್ಯಾಟ್ -11 5870 ಕೆಜಿ ತೂಕವಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಿರ್ಮಿಸಿರುವ ಈ ಉಪಗ್ರಹವನ್ನು ಇಂದು ಫ್ರಾನ್ಸ್ ನಲ್ಲಿ ಉಡ್ಡಯನ ಮಾಡಲಾಗಿದೆ.

'ಭಾರತದ ಅತ್ಯಂತ ತೂಕದ, ಮತ್ತು ಅತ್ಯಂತ ಶಕ್ತಿಯುತ ಉಪಗ್ರಹವನ್ನು ಇಂದು ಉಡಾವಣೆ ಮಾಡಲಾಯಿತು' ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಉಡಾವಣೆಯ ನಂತರ ಹೇಳಿದರು.
"ಜಿಸ್ಯಾಟ್ -11 ಉಪಗ್ರಹವು ಭಾರತದ ಶ್ರೀಮಂತ ಆಸ್ತಿ.ಇದು ದೇಶದ ದೂರ ದೂರದ ಪ್ರದೇಶಗಳಲ್ಲೂ ಸೆಕೆಂಡಿಗೆ 16 ಜಿಬಿ ಡೆಟಾ ಲಿಂಕ್ ಸರ್ವಿಸ್ ನೀಡಲು ಸಮರ್ಥವಾಗಿದೆ" ಎಂದು ಶಿವನ್ ಹೇಳಿದರು.












Click it and Unblock the Notifications