ಅಚ್ಚರಿ ಮೂಡಿಸಿದ ಮನೋಹರ್ ಪರಿಕ್ಕರ್-ರಾಹುಲ್ ಗಾಂಧಿ ಭೇಟಿ!
ಪಣಜಿ, ಜನವರಿ 29: ಗೋವಾ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿಯಾಗಿದ್ದಾರೆ.
ಪಣಜಿಯಲ್ಲಿ ಮನೋಹರ್ ಪರಿಕ್ಕರ್ ಅವರ ಕಚೇರಿ ಎದುರು ರಾಹುಲ್ ಗಾಂಧಿ ಅವರು ನಡೆದು ಹೋಗುತ್ತಿರುವ ಚಿತ್ರ ಮಾಧ್ಯಮಕ್ಕೆ ಲಭ್ಯವಾಗಿದ್ದು, ಉಭಯ ನಾಯಕರ ಭೇಟಿ ಅಚ್ಚರಿ ಮೂಡಿಸಿದೆ.

ಇತ್ತೀಚೆಗಷ್ಟೇ ರಫೇಲ್ ಡಿಲ್ ಗೆ ಕುರಿತಂತೆ ಪರಿಕ್ಕರ್ ಅವರ ಮೇಲೆ ಆರೋಪ ಹೊರಿಸಿದ್ದ ರಾಹುಲ್ ಗಾಂಧಿ, ಖಾಸಗಿ ಪ್ರವಾಸದಲ್ಲಿರುವ ವೇಳೆಯಲ್ಲಿ ಪರಿಕ್ಕರ್ ಅವರನ್ನು ಭೇಟಿಯಾಗಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ, ಗೋವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ್ ಕಾಳ್ವೇಕರ್, "ರಾಹುಲ್ ಗಾಂಧಿ ಅವರು ಗೋವಾದಲ್ಲಿ ಖಾಸಗಿ ಪ್ರವಾಸದಲ್ಲಿದ್ದರು. ಅವರು ಪರಿಕ್ಕರ್ ಅವರ ಆರೋಗ್ಯದ ಬಗ್ಗೆ ವಿಚಾರಿಸುವ ಸಲುವಾಗಿ ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ ಎಲ್ಲಾ ಕಾಂಗ್ರೆಸ್ ಶಾಸಕರನ್ನೂ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ" ಎಂದರು.











Click it and Unblock the Notifications