ದೇಶದ ಅತಿ ಚಿಕ್ಕ ರಾಜ್ಯ ಗೋವಾದಲ್ಲಿ ಎಷ್ಟಿದೆ ಕೊರೊನಾ ಕೇಸ್?

ಗೋವಾ, ಏಪ್ರಿಲ್ 16: ಕೇಂದ್ರಾಡಳಿತ ಪ್ರದೇಶ ಸೇರಿದಂತೆ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಿಕ್ಕಿಂ ರಾಜ್ಯದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಕೇಸ್ ದಾಖಲಾಗಿಲ್ಲ.

ದೇಶದ ಅತಿ ಚಿಕ್ಕ ರಾಜ್ಯ ಹಾಗೂ ಪ್ರವಾಸಿಗರ ನೆಚ್ಚಿನ ತಾಣ ಗೋವಾದಲ್ಲಿ, ಕೊರೊನಾ ಪ್ರಭಾವ ಹೇಗಿದೆ ಎಂದು ತಿಳಿದುಕೊಳ್ಳಲು ಸಹಜವಾಗಿ ಕುತೂಹಲ ಇದ್ದೇ ಇರುತ್ತೆ. ಗೋವಾ ರಾಜ್ಯದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಒಟ್ಟು 7 ಜನರಿಗೆ ಸೋಂಕು ವರದಿಯಾಗಿದೆ.

ಈ ಏಳು ಜನರ ಪೈಕಿ ಅದಾಗಲೇ 6 ಜನರು ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಂದ್ರೆ, ಸದ್ಯಕ್ಕೆ ಒಬ್ಬ ವ್ಯಕ್ತಿ ಮಾತ್ರ ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ.

 No New Positive COVID19 Reported In Goa Today

ಕಳೆದ ಹತ್ತು ದಿನಗಳಿಂದ ಗೋವಾದಲ್ಲಿ ಒಂದೇ ಒಂದು ಹೊಸ ಸೋಂಕು ಪತ್ತೆಯಾಗಿಲ್ಲ. ಇಂದು ಕೂಡ ರಾಜ್ಯದಲ್ಲಿ ಯಾವುದೇ ಸೋಂಕು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನು ದೇಶದ ಅಂಕಿ ಅಂಶ ನೋಡುವುದಾದರೇ, ಇದುವರೆಗೂ 12,759 ಜನರಲ್ಲಿ ಸೋಂಕು ಪತ್ತೆಯಾಗಿದೆ. 420 ಜನರು ಕೊರೊನಾಗೆ ಬಲಿಯಾಗಿದ್ದಾರೆ. 1514 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 10,824 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+