ಗೋವಾ ಚುನಾವಣೆ; ಮಿಚೆಲ್ ಲೋಬೊ ಶ್ರೀಮಂತ ಅಭ್ಯರ್ಥಿ

ಪಣಜಿ, ಫೆಬ್ರವರಿ 02; ಗೋವಾ ವಿಧಾನಸಭೆ ಚುನಾವಣೆ ಚಿತ್ರಣ ಅಂತಿಮಗೊಂಡಿದೆ. ಫೆಬ್ರವರಿ 14ರಂದು 40 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 301 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾ ಕಣದಲ್ಲಿರುವ ಶಾಸಕ ಪೈಕಿ ಮಿಚೆಲ್ ಲೋಬೊ ಶ್ರೀಮಂತ ಶಾಸಕರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ಸಚಿವರಾಗಿದ್ದ ಮಿಚೆಲ್ ಲೋಬೊ ಶಾಸಕ, ಸಚಿವ ಸ್ಥಾನಕ್ಕೆ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು.

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮಿಚೆಲ್ ಲೋಬೊ ಕಲಂಗುಟ್‌ನಿಂದ ಅಭ್ಯರ್ಥಿ. ಅವರ ಪತ್ನಿ ಡೆಲಿಲಾ ಸಿಯೋಲಿಮ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ಮಿಚೆಲ್ ಲೋಬೊ ನಾಮಪತ್ರ ಸಲ್ಲಿಸುವಾಗ 84.387 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.

Michael Lobo Richest MLA Of Outgoing Goa Legislative Assembly

2017ರ ಚುನಾವಣೆಯಲ್ಲಿ 49.47 ಕೋಟಿ ಆಸ್ತಿ ಎಂದು ಘೋಷಣೆ ಮಾಡಿದ್ದರು. ಪ್ರವಾಸೋದ್ಯಮದ ಹಬ್ ಆಗಿರುವ ಗೋವಾದಲ್ಲಿ ಹೋಟೆಲ್, ಮನೋರಂಜನಾ ಕೇಂದ್ರಗಳನ್ನು ಮಿಚೆಲ್ ಲೋಬೊ ಹೊಂದಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ 59.24 ಕೋಟಿ ಚರಾಸ್ತಿ ಮತ್ತು 25.147 ಕೋಟಿ ಸ್ತಿರಾಸ್ಥಿ ಇದೆ ಎಂದು ಹೇಳಿದ್ದಾರೆ. ಮಿಚೆಲ್ ಲೋಬೊ ಪತ್ನಿ ಡೆಲಿಲಾ ಸಿಯೋಲಿಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದು 7.16 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.

ಪ್ರಮೋದ್ ಸಾವಂತ್ ಆಸ್ತಿ; ಸಾಂಕೆಲ್ವಿಮ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆಸ್ತಿ 7.15 ಕೋಟಿಗೆ ಏರಿಕೆಯಾಗಿದೆ. ಕಳೆದ ಚುನಾವಣೆಯಲ್ಲಿ 2.37 ಕೋಟಿ ಆಸ್ತಿ ಘೋಷಣೆ ಮಾಡಿದ್ದರು.

ಗೋವಾದ ರಾಜಧಾನಿ ಪಣಜಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಕಣದಲ್ಲಿದ್ದಾರೆ. ಬಿಜೆಪಿ ಅವರ ಪತ್ನಿ ಜೆನಿಫರ್‌ಗೆ ತಲೈಗಾವ್ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ.

ದಂಪತಿಗಳು ಜಂಟಿಯಾಗಿ 48.48 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. 2017ರಲ್ಲಿ ದಂಪತಿಗಳು 30.03 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದರು.

2017ರ ಚುನಾವಣೆಯಲ್ಲಿ ಅಟನಸಿಯೋ ಮೊನ್ನೆರ್ರೇಟ್ ಯುಜಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಆದರೆ ಜೆನಿಫರ್‌ ತಲೈಗಾವ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು.

ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ 2019ರಲ್ಲಿ ನಿಧನ ಹೊಂದಿದಾಗ ಪಣಜಿ ಕ್ಷೇತ್ರದ ಉಪ ಚುನಾವಣೆ ಎದುರಾಯಿತು. ಆಗ ಅಟನಸಿಯೋ ಮೊನ್ನೆರ್ರೇಟ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಚುನಾವಣೆ ಗೆದ್ದರು. ಬಳಿಕ ಬಿಜೆಪಿ ಸೇರಿದರು. ಆಗ ಜೆನಿಫರ್ ಸಹ ಬಿಜೆಪಿಗೆ ಬಂದರು.

ಉಳಿದಂತೆ ಬಿಜೆಪಿ ನಾಯಕ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ವಾಲ್ಪೊಯ್ ಕ್ಷೇತ್ರದಿಂದ ಕಣಕ್ಕಿಳಿದಿದ್ದು 16.36 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಅವರ ಪತ್ನಿ ದೇವಿಯ ರಾಣೆ ಪೊರಿಯಮ್ ಕ್ಷೇತ್ರದಿಂದ ಕಣಕ್ಕಿಳಿದಿದ್ದು 6.76 ಕೋಟಿ ಆಸ್ತಿ ಇದೆ ಎಂದು ನಾಮಪತ್ರ ಸಲ್ಲಿಸುವ ವೇಳೆ ಘೋಷಣೆ ಮಾಡಿದ್ದಾರೆ.

ಗೋವಾದ ಟಿಎಂಸಿ ಅಧ್ಯಕ್ಷ ಕಿರಣ್ ಕೊಂಡೋಲ್ಕರ್ 6.69 ಕೋಟಿ ಆಸ್ತಿ, ಅವರ ಪತ್ನಿ ಕವಿತಾ ಕೊಂಡೋಲ್ಕರ್ 5.13 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಕಿರಣ್ ಯಮಹಾ ಆರ್‌ ಎಕ್ಸ್ 135 ಬೈಕ್ ಮಾಲೀಕರು 2017ರಲ್ಲಿ ಅದರ ಮೌಲ್ಯ 3,325 ರೂ. ಆಗಿತ್ತು. ಈಗ ಅದು 862 ರೂ. ಬೆಲೆ ಬಾಳುತ್ತದೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿಗಂಬರ್ ಕಾಮತ್ 10.8 ಕೋಟಿ ಆಸ್ತಿ ಹೊಂದಿದ್ದಾರೆ. ಪಣಜಿಯಲ್ಲಿ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾದ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ 8.84 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಮಿತ್ ಪಾಲೇಕರ್ 11.42 ಕೋಟಿ. ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಗೋವಾ ವಿಧಾನಸಭೆ ಚುನಾವಣೆಗೆ ಅವರು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಜಿಎಫ್‌ಪಿಯ ಮುಖ್ಯಸ್ಥ ವಿಜಯ್ ಸರ್‌ ದೇಸಾಯಿ 4.06 ಕೋಟಿ ಎಂದು ಘೋಷಣೆ ಮಾಡಿದ್ದಾರೆ.

2007ರಲ್ಲಿ ಗೋವಾದ ಶೇ 55ರಷ್ಟು ಶಾಸಕರು ಕೋಟ್ಯಾಧಿಪತಿಗಳಾಗಿದ್ದರು. 2012ರಲ್ಲಿ ಅದು ಶೇ 93ಕ್ಕೆ ಏರಿಕೆಗೊಂಡಿತು. 2017ರ ಚುನಾವಣೆ ವೇಳೆಗೆ ಅದು ಶೇ 100 ಆಯಿತು.

Recommended Video

      Towing ವಾಹನಗಳಿಗೆ ಹೊಸ ನಿಯಮಗಳನ್ನು ತಂದ ಸರ್ಕಾರ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+