ಗೋವಾ; ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್

ಪಣಜಿ, ಏಪ್ರಿಲ್ 28; ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗೋವಾ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಏಪ್ರಿಲ್ 29ರ ಸಂಜೆಯಿದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೆ ಬರಲಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಏಪ್ರಿಲ್ 29ರ ಸಂಜೆಯಿಂದ ಮೇ 3ರ ಬೆಳಗ್ಗೆ ತನಕ ಗೋವಾದಲ್ಲಿ ಪೂರ್ಣ ಲಾಕ್‌ಡೌನ್ ವಿಧಿಸಲಾಗುವುದು" ಎಂದು ಹೇಳಿದ್ದಾರೆ.

"ಲಾಕ್ ಡೌನ್ ಸಮಯದಲ್ಲಿ ಅಗತ್ಯ ಸೇವೆಗಳು ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಮಾತ್ರ ನಿರ್ವಹಿಸಲು ಅನುಮತಿ ಇದೆ. ಈ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಗಳ ಸಂಚಾರವೂ ಇರುವುದಿಲ್ಲ" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

 One Week Lock Down Announced In Goa

ಗೋವಾರದಲ್ಲಿ ಲಾಕ್‌ಡೌನ್ ಸಮಯದಲ್ಲಿ ಕ್ಯಾಸಿನೋ, ಹೋಟೆಲ್‌ಗಳು ಮತ್ತು ಪಬ್‌ಗಳು ಮುಚ್ಚಿರುತ್ತವೆ. ಅಗತ್ಯ ಸೇವೆಗಳಿಗಾಗಿ ರಾಜ್ಯದ ಗಡಿಗಳನ್ನು ತೆರೆಯಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಗೋವಾದಲ್ಲಿ 2,110 ಹೊಸ ಕೋವಿಡ್- 19 ಪ್ರಕರಣಗಳು ಮತ್ತು 31 ಮಂದಿ ಮೃತಪಟ್ಟಿರುವ ವರದಿ ಬಂದ ಒಂದು ದಿನದ ನಂತರ ಲಾಕ್ ಡೌನ್ ಪ್ರಕಟಣೆ ಹೊರಬಿದ್ದಿದೆ.

ರಾಜ್ಯದಲ್ಲಿ ಈಗ ಒಟ್ಟು 81,908 ಕೊರೊನಾ ವೈರಸ್ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 1,086 ಆಗಿದೆ. ಗುಣಮುಖರಾದವರ ಸಂಖ್ಯೆ 64,231. ಒಟ್ಟು 16,591 ಸಕ್ರಿಯ ಪ್ರಕರಣಗಳಿವೆ. ಗೋವಾ ಈವರೆಗೆ 6,32,131 ಕೋವಿಡ್- 19 ಪರೀಕ್ಷೆಗಳನ್ನು ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+