"ಪರಿಕ್ಕರ್ ಕೆಳಗಿಳಿದರೆ ಗೋವಾ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ"

ಪಣಜಿ, ಫೆಬ್ರವರಿ 05: "ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಹುದ್ದೆಯಿಂದ ಕೆಳಗಿಳಿದಿದ್ದೇ ಆದಲ್ಲಿ, ಗೋವಾದಲ್ಲಿ ರಾಜಕೀಯ ತಲ್ಲಣ ಉಂಟಾಗಲಿದೆ" ಎಂದು ಗೋವಾ ವಿಧಾನಸಭೆಯ ಉಪ ಸಭಾಪತಿ ಮತ್ತು ಬಿಜೆಪಿ ಶಾಸಕ ಮೈಕಲ್ ಲೋಬೋ ಹೇಳಿದ್ದಾರೆ.

"ಪರಿಕ್ಕರ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಗುಣಪಡಿಸಲಾಗದ ಕಾಯಿಲೆ ಇದೆ. ಅವರು ದೇವರ ಆಶೀರ್ವಾದದಿಂದಾಗಿ ಇನ್ನೂ ಜೀವಂತವಾಗಿದ್ದಾರೆ. ದೇವರು ಅವರಿಗೆ ಇನ್ನೂ ಕೆಲಸ ಮಾಡುವ ಶಕ್ತಿ ನೀಡಿದ್ದಾನೆ" ಎಂದಿರುವ ಮೈಕಲ್ ಲೋಬೋ ಅವರು ಹುದ್ದೆಯಲ್ಲಿರುವವರೆಗೆ ಗೋವಾ ಸರ್ಕಾರಕ್ಕೆ ಸಮಸ್ಯೆ ಇಲ್ಲ ಎಂದಿದ್ದಾರೆ.

ಆದರೆ ಪರಿಕ್ಕರ್ ಅವರು ಹುದ್ದೆ ತೊರೆದರೆ ಅಥವಾ ಅವರಿಗೇನಾದರೂ ಸಮಸ್ಯೆಯಾದರೆ ಗೋವಾ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಲೋಬೋ ಹೇಳಿದರು.

If Manohar Parrikar steps down Goa will face political crisis: BJP MLA

ಇತ್ತೀಚೆಗಷ್ಟೇ ಪರಿಕ್ಕರ್ ಅವರ ಯೋಗಕ್ಷೇಮ ವಿಚಾರಿಸಲು ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಾಯ್ತುಂಬ ಹೊಗಳಿದ್ದ ಲೋಬೋ, "ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಸರಳ ವ್ಯಕ್ತಿ. ಅವರು ಭಾರತಕ್ಕಷ್ಟೇ ಅಲ್ಲ, ವಿಶ್ವದ ನಾಯಕರು, ಅಂಥವರ ನಾಯಕತ್ವ ದೇಶಕ್ಕೆ ಅಗತ್ಯವಿದೆ" ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+