Get Updates
Get notified of breaking news, exclusive insights, and must-see stories!

ವಸ್ತ್ರ ವಿನ್ಯಾಸಕಾರ, ನಟಿ ಅನುಷ್ಕಾ ಶರ್ಮಾ ಗಾಡ್ ಫಾದರ್ ವೆಂಡೆಲ್ ರೋಡ್ರಿಕ್ಸ್‌ ನಿಧನ

ಪಣಜಿ, ಫೆಬ್ರವರಿ 12: ಖ್ಯಾತ ವಸ್ತ್ರ ವಿನ್ಯಾಸಕಾರ ವೆಂಡೆಲ್ ರೋಡ್ರಿಕ್ಸ್ (59) ಅವರು ಇಂದು ಗೋವಾದಲ್ಲಿ ಹೃದಯಾಘಾತದಿಂದ ನಿಧನಹೊಂದಿದ್ದಾರೆ.

ಭಾರತದ ಟಾಪ್ ವಸ್ತ್ರ ವಿನ್ಯಾಸಕಾರರಲ್ಲಿ ಪ್ರಮುಖರೆನಿಸಿಕೊಂಡಿದ್ದ ವೆಂಡೆಲ್ ರೋಡ್ರಿಕ್ಸ್ ಅವರಿಗೆ ಭಾರತ ಸರ್ಕಾರವು 2014 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರು ಹಲವು ಬಾಲಿವುಡ್ ಸ್ಟಾರ್‌ ನಟರಿಗೂ ವಸ್ತ್ರ ವಿನ್ಯಾಸ ಮಾಡಿದ್ದರು.

ಗೋವಾದಲ್ಲಿ ದೇಶದ ಪ್ರಥಮ ವಸ್ತ್ರ ಸಂಗ್ರಹಾಲಯ ನಿರ್ಮಿಸುವ ಕನಸು ಕಂಡಿದ್ದ ಅವರು ಅದೇ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಕೊನೆಯ ಸಾಮಾಜಿಕ ಜಾಲತಾಣ ಪೋಸ್ಟ್‌ ನಲ್ಲಿ ಸಹ ಅವರು 'ಇನ್ನೇನು ಕೊನೆಯ ಹಂತದ ಕೆಲಸ ಬಾಕಿ ಇದೆ' ಎಂದು ಚಿತ್ರವೊಂದನ್ನು ಹಂಚಿಕೊಂಡಿದ್ದರು.

Famous Fasion Designer Wendell Rodricks Passed Away

ಬರಹಗಾರರೂ ಆಗಿದ್ದ ರೋಡ್ರಿಕ್ಸ್‌ ಕೆಲವು ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದರು. ವಿರಾಟ್ ಕೋಹ್ಲಿ ಮಡದಿ, ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ರನ್ನು ಮಾಡೆಲಿಂಗ್ ಕ್ಷೇತ್ರಕ್ಕೆ ಪರಿಚಯಿಸಿದ್ದು ಸಹ ಇದೇ ರೋಡ್ರಿಕ್ಸ್.

ರೋಡ್ರಿಕ್ಸ್ ಅಕಾಲಿಕ ನಿಧನಕ್ಕೆ ಬಾಲಿವುಡ್ ದಿಗ್ಗಜರು ಶೋಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಗೋವಾ ರಾಜ್ಯ ಸರ್ಕಾರದ ಪ್ರಮುಖರು ಹಾಗೂ ವಸ್ತ್ರ ವಿನ್ಯಾಸ ಉದ್ದಿಮೆಯ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+